ಇಂದು ಕಾಂಗ್ರೆಸ್ಸಿನ ಮೂವರು ಮುಖ್ಯಮಂತ್ರಿಗಳ ಪ್ರಮಾಣವಚನ
ಭೋಪಾಲ್, ಜೈಪುರ, ರಾಯ್ಪುರ, ಡಿಸೆಂಬರ್ 17: ದೇಶದ ರಾಜಕಾರಣದಲ್ಲೇ ಮಹತ್ವದ ಮೈಲಿಗಲ್ಲು ಎನ್ನಿಸಿರುವ ದಿನ ಇದು ಎಂದು ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೆ.
ಕಾರಣ, ಇದು ಕಾಂಗ್ರೆಸ್ಸಿನ ಮೂವರು ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದರೆ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಇಂದು ಮಧ್ಯಾಹ್ನ 1:30 ಕ್ಕೆ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ಛತ್ತೀಸ್ ಗಢ ಮುಖ್ಯಮಂತ್ರಿಯಾಗಿ ಭುಪೇಶ್ ಭಾಗೆಲ್ ಅವರು ಅಪರಾಹ್ನ 4:30 ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಛತ್ತೀಸ್ ಗಢದಲ್ಲಿ ನವೆಂಬರ್ 12, 20 ರಂದು ಚುನಾವಣೆ ನಡೆದಿದ್ದರೆ, ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆದಿತ್ತು. ರಾಜಸ್ಥಾನದಲ್ಲಿ ಡಿ.07 ರಂದು ಚುನಾವಣೆ ನಡೆದಿದ್ದರೆ, ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಡಿ. 11 ರಂದು ಪ್ರಕಟವಾಗಿತ್ತು.











Click it and Unblock the Notifications