45 ಲಕ್ಷದೊಳಗಿನ ಮನೆ ಖರೀದಿಗೆ ಭರ್ಜರಿ ಟ್ಯಾಕ್ಸ್ ಬೆನಿಫಿಟ್
ಮನೆ ಸಾಲದ ಮೇಲೆ ಲಕ್ಷಗಟ್ಟಲೆ ಬಡ್ಡಿ ಕಟ್ಟಿದರೂ ತೆರಿಗೆಯ ಹೆಚ್ಚಿನ ಲಾಭ ಪಡೆಯದೆ ನಿರಾಶರಾಗುತ್ತಿದ್ದ ಮನೆ ಸಾಲಗಾರರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತುಪ್ಪು ತಿನ್ನಿಸಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಪ್ರಕಾರ, ಸ್ವಂತಕ್ಕಾಗಿ (ಬಾಡಿಗೆ ಉದ್ದೇಶಕ್ಕೆ ಅಲ್ಲ) ಗೃಹ ಖರೀದಿಗೆ ಸಾಲ ಪಡೆಯುವವರಿಗೆ ಅದರ ಮೇಲೆ ಪಾವತಿಸುವ ಬಡ್ಡಿಗೆ ಹದಿನೈದು ವರ್ಷದ ಅವಧಿ ತನಕ ತೆರಿಗೆ ವಿನಾಯಿತಿ ದೊರೆಯಲಿದೆ. ಈಗ ದೊರೆಯುತ್ತಿರುವ ವಿನಾಯಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿದ್ದು, ಅವುಗಳು ಹೀಗಿವೆ.
ಮನೆಯ ಬೆಲೆ 45 ಲಕ್ಷ ತನಕ ಇದ್ದಲ್ಲಿ, ಅಂಥದ್ದರ ಖರೀದಿಗೆ ಗೃಹ ಸಾಲ ಪಡೆದುಕೊಂಡಿದ್ದರೆ/ಕೊಂಡರೆ, ಈ ಹಿಂದೆ ಇದ್ದ ತೆರಿಗೆ ವಿನಾಯಿತಿಗಿಂತ 1.5 ಲಕ್ಷ ರುಪಾಯಿ ಹೆಚ್ಚುವರಿಯಾಗಿ ಅಂದರೆ 3.5 ಲಕ್ಷಕ್ಕೆ ಏರಿಕೆ ಆಗಿದೆ. ಈ ಹಿಂದೆ 2 ಲಕ್ಷ ರುಪಾಯಿ ತೆರಿಗೆ ವಿನಾಯಿತಿ ದೊರೆಯುತ್ತಿತ್ತು. ಮಾರ್ಚ್ 31ನೇ ತಾರೀಕು 2020ರೊಳಗೆ ಮನೆ ಖರೀದಿ ಮಾಡಿದರೆ, 15 ವರ್ಷಗಳ ಕಾಲ 7 ಲಕ್ಷ ರುಪಾಯಿ ತೆರಿಗೆ ಅನುಕೂಲ ದೊರೆಯಲಿದೆ.

ಅಂದರೆ ಗೃಹ ಸಾಲದ ಅವಧಿಯು ಹದಿನೈದು ವರ್ಷದ್ದಾಗಿದ್ದು, ಮನೆಯ ಖರೀದಿ ಮೌಲ್ಯ ನಲವತ್ತೈದು ಲಕ್ಷದೊಳಗೆ ಇರಬೇಕು. ಇದರಿಂದ ಮಧ್ಯಮ ವರ್ಗದ ಮನೆ ಖರೀದಿದಾರರಿಗೆ ಅನುಕೂಲ ಆಗಲಿದೆ. ಆದರೆ ಈಗಾಗಲೇ ತಿಳಿಸಿದ ನಿಯಮಗಳೆಲ್ಲವೂ ಅನ್ವಯ ಆದರೆ ಮಾತ್ರ ಅನುಕೂಲ ಆಗಿದೆ.












Click it and Unblock the Notifications