ದೇಶದಲ್ಲಿ 3,157 ಹೊಸ ಕೊರೊನಾ ಪ್ರಕರಣ ದಾಖಲು: ದೆಹಲಿ, ಹರಿಯಾಣದಲ್ಲಿ ಹೆಚ್ಚು ಕೇಸ್
ನವದೆಹಲಿ ಮೇ 2: ಭಾರತದಲ್ಲಿ ಮತ್ತೆ ಕೊರೊನಾ ಕಾರ್ಮೋಡ ಎಲ್ಲೆಡೆ ಆವರಿಸುತ್ತಿದೆ. ಭಾರತ ಕಳೆದ 24 ಗಂಟೆಗಳಲ್ಲಿ 3,157 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ನಿನ್ನೆಗಿಂತ ಕೊರೊನಾ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಶೇ. 5ರಷ್ಟು ಕಡಿಮೆಯಾಗಿದ್ದರೂ ಜನರಲ್ಲಿ ಆತಂಕ ಚಿಗುರೊಡೆಯಲು ಆರಂಭಿಸಿದೆ. ಈವರೆಗೆ ಭಾರತದಲ್ಲಿ ಒಟ್ಟು 4,30,82,345 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 19,500 ಇದೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 408 ರಷ್ಟು ಹೆಚ್ಚಾಗಿದೆ.
ಭಾರತದ ಒಟ್ಟು 3,157 ಹೊಸ ಕೊರೊನಾ ಪ್ರಕರಣಗಳ ಪೈಕಿ ದೆಹಲಿಯಲ್ಲಿ 1,485 ಪ್ರಕರಣಗಳು ದಾಖಲಾಗಿವೆ. ಹರಿಯಾಣದಲ್ಲಿ 479, ಕೇರಳ 314, ಉತ್ತರ ಪ್ರದೇಶ 268 ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 169 ಪ್ರಕರಣಗಳು ದಾಖಲಾಗಿದ್ದು ಈ ಐದು ರಾಜ್ಯಗಳಿಂದ 86.0% ಹೊಸ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಮಾತ್ರ 47.04% ಹೊಸ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 26 ಸಾವುಗಳು ವರದಿಯಾಗಿದ್ದು, ಈವರೆಗೆ ದೇಶದ ಒಟ್ಟು ಸಾವಿನ ಸಂಖ್ಯೆ 5,23,869ಕ್ಕೆ ಏರಿಕೆಯಾಗಿದೆ. ಭಾರತದ ಚೇತರಿಕೆಯ ಪ್ರಮಾಣವು ಈಗ 98.74% ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,723 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,38,976 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 4,02,170 ಕೊರೊನಾ ಡೋಸ್‌ಗಳನ್ನು ನೀಡಿದ್ದು, ಇದುವರೆಗೆ ಒಟ್ಟು 1,89,23,98,347 ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,71,087 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇನ್ನೂ ಕರ್ನಾಟಕದಲ್ಲಿ 104 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,780ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ 'ಕೂ' ಮಾಡಿದ್ದಾರೆ. ಇನ್ನೂ ರಾಜ್ಯದಲ್ಲಿ ಕೋವಿಡ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ. 108 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, 10,566 ಕೋವಿಡ್ ಟೆಸ್ಟ್ ಮಾಡಲಾಗಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 0.98ರಷ್ಟಿದ್ದು, ಬೆಂಗಳೂರು ನಗರದಲ್ಲಿ 93 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,701ಕ್ಕೆ ಏರಿಕೆಯಾಗಿದೆ.












Click it and Unblock the Notifications