2 ಜಿ ತೀರ್ಪು: ಸುಪ್ರೀಂ ರದ್ದುಗೊಳಿಸಿದ 122 ಲೈಸೆನ್ಸ್ ಗಳ ಕತೆಯೇನು?
ನವದೆಹಲಿ, ಡಿಸೆಂಬರ್ 22: 2 ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ 17 ಆರೋಪಿಗಳನ್ನೂ ದೆಹಲಿಯ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸುತ್ತಿದ್ದಂತೆಯೇ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ 122 ಲೈಸೆನ್ಸ್ ಗಳ ಕತೆಯೇನು ಎಂಬ ಪ್ರಶ್ನೆ ಎದ್ದಿತ್ತು.
ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು ಸುಪ್ರೀಂ ಕೋರ್ಟ್ ಆದೇಶದ ಮೇಲೆ ಪ್ರಭಾವ ಬೀರಲಿದೆಯೇ ಎಂದರೆ ಖಂಡಿತ ಇಲ್ಲ. ಕಾನೂನು ತಜ್ಞರು ಹೇಳುವ ಪ್ರಕಾರ ರದ್ದುಗೊಳಿಸಿರುವ 122 ಲೈಸೆನ್ಸ್ ಗಳೂ ರದ್ದಾಗಿಯೇ ಇರಲಿವೆ. ಅವುಗಳ ಯಾವ ಬದಲಾವಣೆಯೂ ಆಗುವುದಿಲ್ಲ. ಅಧೀನ ನ್ಯಾಯಾಲಯಗಳ ತೀರ್ಪು, ಸುಪ್ರೀಂ ತೀರ್ಪಿನ ಮೇಲೆ ಪರಿಣಾಮ ಬೀರಬೇಕೆಂದಿಲ್ಲ.

ಡಿ.21 ರಂದು ಹೊರಬಿದ್ದ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯ, 1.76 ಲಕ್ಷ ಕೋಟಿ ರೂ. 2 ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳಾದ ಅಂದಿನ ಟೆಲಿಕಾಂ ಮಂತ್ರಿ ಎ.ರಾಜ, ಡಿಎಂಕೆ ಸಂಸದೆ ಕನ್ನಿಮೋಳಿ ಸೇರಿದಂತೆ 17 ಜನರನ್ನು ಖುಲಾಸೆಗೊಳಿಸಿತ್ತು.












Click it and Unblock the Notifications