DRDO ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯನ್ನು ಎಂಥವರು ಬಳಸಬೇಕು?

ನವದೆಹಲಿ, ಜೂನ್ 01: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಔಷಧಿ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕಳೆದ ಮೇ 27ರಂದು ಡಾಕ್ಟರ್ ರೆಡ್ಡೀಸ್ ವೈದ್ಯಕೀಯ ಪ್ರಯೋಗಾಲಯವು 10,000 ಪ್ಯಾಕೆಟ್ ಔಷಧೀಯ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಬೆನ್ನಲ್ಲೇ ಯಾವ ಹಂತದಲ್ಲಿ ಈ ಔಷಧಿಯನ್ನು ಕೊರೊನಾ ರೋಗಿಗಳಿಗೆ ನೀಡಬೇಕು ಎಂಬುದರ ಬಗ್ಗೆ ಡಿಆರ್‌ಡಿಒ ಕೆಲವು ನಿರ್ದೇಶನಗಳನ್ನು ನೀಡಿದೆ.

ಡಿಸಿಜಿಐ ಅನುಮೋದನೆಯ ಪ್ರಕಾರ ಕೊರೊನಾವೈರಸ್ ಸೋಂಕಿತ ರೋಗಿಗಳಿಗೆ 2 ಡಿಜಿ ಔಷಧಿಯನ್ನು ಬಳಸುವುದಕ್ಕೆ ನೀಡಿರುವ ನಿಬಂಧನೆಗಳೇನು. ಈ ಔಷಧಿಯ ಸೇವನೆಯಿಂದ ಆಗುವ ಪ್ರಯೋಜನೆಗಳೇನು. ಪುಡಿ ರೂಪದಲ್ಲಿರುವ ಔಷಧಿ ಸೇವನೆ ವಿಧಾನ ಹೇಗಿರಬೇಕು ಎಂಬುದರ ಕುರಿತು ವಿವರಣಾತ್ಮಕ ವರದಿ ಇಲ್ಲಿದೆ ಓದಿ.

ಡಿಸಿಜಿಐ ಅನುಮೋದಿತ 2ಡಿಜಿ ಔಷಧಿ ಬಳಕೆಗೆ ನಿರ್ದೇಶನ

ಡಿಸಿಜಿಐ ಅನುಮೋದಿತ 2ಡಿಜಿ ಔಷಧಿ ಬಳಕೆಗೆ ನಿರ್ದೇಶನ

* 2ಡಿಜಿ ಔಷಧಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾವೈರಸ್ ಸೋಂಕಿತರ ತುರ್ತು ಚಿಕಿತ್ಸೆಗೆ ಬಳಸುವುದಕ್ಕೆ ಅನುಮೋದನೆ ನೀಡಲಾಗಿದೆ

* ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ವೈದ್ಯರ ಸಲಹೆ ಮೇರೆಗೆ ಗರಿಷ್ಠ 10 ದಿನಗಳವರೆಗೆ ಮಾತ್ರ 2 ಡಿಜಿ ಔಷಧಿಯನ್ನು ಬಳಸಬೇಕು

* ಅನಿಯಮಿತ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಎಆರ್ ಡಿಎಸ್, ಪಿತ್ತ ಜನನಾಂಗ ಮತ್ತು ಮೂತ್ರಪಿಂಡ ಸಮಸ್ಯೆಯನ್ನು ಎದುರಿಸುತ್ತಿರುವವರ ಮೇಲೆ ಈ ಔಷಧಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನೂ ಅಧ್ಯಯನ ನಡೆಸಲಾಗುತ್ತಿದೆ.

* 2 ಡಿಜಿ ಔಷಧಿಯನ್ನು ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡುವಂತಿಲ್ಲ

* 2ಡಿಜಿ ಔಷಧಿ ಖರೀದಿಸಲು ರೋಗಿಗಳು ಮತ್ತು ವೈದ್ಯರು ಹಾಗೂ ಔಷಧಿ ಮಾರಾಟ ಸಂಸ್ಥೆಗಳು ಹೈದ್ರಾಬಾದಿನಲ್ಲಿ ಇರುವ ಡಾಕ್ಟರ್. ರೆಡ್ಡೀಸ್ ಪ್ರಯೋಗಾಲಯದ ಈ-ಮೇಲ್ ಖಾತೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

2ಡಿಜಿ ಔಷಧಿ ಹೇಗೆ ಕೆಲಸ ಮಾಡುತ್ತೆ?

2ಡಿಜಿ ಔಷಧಿ ಹೇಗೆ ಕೆಲಸ ಮಾಡುತ್ತೆ?

ಕೊವಿಡ್-19 ವಿರೋಧಿ ಔಷಧಿ ಆಗಿರುವ 2ಡಿಜಿ ಪುಡಿ ರೂಪದಲ್ಲಿ ಇರಲಿದ್ದು, ನೀರಿನಲ್ಲಿ ಬೆರೆಸಿ ಕುಡಿಯುವ ಮೂಲಕ ಸೇವಿಸಬಹುದಾಗಿದೆ. 2ಡಿಜಿ ಔಷಧಿಯು ಕೊರೊನಾವೈರಸ್ ರೋಗಾಣುವನ್ನು ಒಂದು ಕಡೆ ಸಂಗ್ರಹಿಸಿ ದೇಹವನ್ನೆಲ್ಲಾ ಹರಡುವ ಅಪಾಯವನ್ನು ತಪ್ಪಿಸುವುದರ ಜೊತೆಗೆ ವೈರಸ್ ವಿರುದ್ಧ ಹೋರಾಡಲಿದೆ. ಈ ಔಷಧಿಯಿಂದ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ನಿಯಂತ್ರಣಕ್ಕೆ ಬರಲಿದ್ದು, ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ತಗ್ಗಲಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಶೀಘ್ರ ಗುಣಮುಖ ಆಗುತ್ತಾರೆ ಎಂದು ಸರ್ಕಾರ ತಿಳಿಸಿದೆ.

ಕೊರೊನಾವೈರಸ್ ಔಷಧಿ 2 ಡಿಜಿ ಬಗ್ಗೆ ಡಿಆರ್‌ಡಿಒ ಸ್ಪಷ್ಟನೆ

ಕೊರೊನಾವೈರಸ್ ಔಷಧಿ 2 ಡಿಜಿ ಬಗ್ಗೆ ಡಿಆರ್‌ಡಿಒ ಸ್ಪಷ್ಟನೆ

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಬಹುಪಾಲು ರೋಗಿಗಳಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆ ಜೀವಕೋಶ ಪ್ರವೇಶಿಸುವ 2ಡಿಜಿ ಔಷಧಿಯು ರೋಗಾಣುವಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ನೋಡಿಕೊಳ್ಳುವ ಶಕ್ತಿ ಈ ಔಷಧಿಗಿದೆ ಎಂದು ಸಂಸ್ಥೆ ಹೇಳಿದೆ. 2ಡಿಜಿ ಔಷಧಿ ಸಹಾಯದಿಂದ ಕೊವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ 2ಡಿಜಿ ಔಷಧಿಯ ಬೆಲೆ ಎಷ್ಟು?

ದೇಶದಲ್ಲಿ 2ಡಿಜಿ ಔಷಧಿಯ ಬೆಲೆ ಎಷ್ಟು?

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಗೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಮೇ 15ರಂದು ಅನುಮೋದನೆ ನೀಡಿತ್ತು. ರೆಡ್ಡೀಸ್ ಪ್ರಯೋಗಾಲಯ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಔಷಧಿಯ ಒಂದು ಪ್ಯಾಕೇಟಿಗೆ 990 ರೂಪಾಯಿ ನಿಗದಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ವಿನಾಯಿತಿ ದರದಲ್ಲಿ ಔಷಧಿಯನ್ನು ಮಾರಾಟ ಮಾಡಲಾಗುವುದು ಎಂದು ರೆಡ್ಡೀಸ್ ಪ್ರಯೋಗಾಲಯವು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+