ಐದು ತಿಂಗಳಲ್ಲಿ ಭಾರತದಲ್ಲಿ ಮಕ್ಕಳ 25,000 ಪೋರ್ನ್‌ ವಿಡಿಯೋಗಳು!

ನವದೆಹಲಿ, ಜನವರಿ 28: ಕಳೆದ ಐದೇ ತಿಂಗಳಲ್ಲಿ ಭಾರತದಲ್ಲಿ ಮಕ್ಕಳನ್ನು ಬಳಸಿದ 25000 ಅಶ್ಲೀಷ ಪೋರ್ನ್ ವಿಡಿಯೋಗಳು ಅಪ್‌ಲೋಡ್ ಆಗಿವೆ.

ಈ ಆಘಾತಕಾರಿ ಮಾಹಿತಿಯನ್ನು ಅಮೆರಿಕದ ಮಕ್ಕಳ ಹಕ್ಕು ರಕ್ಷಣೆ ಇಲಾಖೆಯು ಭಾರತದ ಅಪರಾಧ ದಾಖಲೀಕರಣ ವಿಭಾಗಕ್ಕೆ ನೀಡಿದೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶಗಳು ಮಕ್ಕಳ ಮೇಲಿನ ದೌರ್ಜನ್ಯ ನಡೆಯುವ ರಾಜ್ಯಗಳಲ್ಲಿ ಮೊದಲಿನಲ್ಲಿದ್ದು, ಈ ರಾಜ್ಯಗಳಿಂದಲೇ ಮಕ್ಕಳ ಪೋರ್ನ್ ವಿಡಿಯೋಗಳು ಹೆಚ್ಚು ಅಪ್‌ಲೋಡ್ ಆಗಿವೆ. ದೆಹಲಿಯಿಂದ ಅತಿ ಹೆಚ್ಚು ಮಕ್ಕಳ ಪೋರ್ನ್‌ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ.

25000 Bad Videos Of Children Uploaded In Last Five Months In India

ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ 1700 ಮಕ್ಕಳ ಮೇಲಿನ ದೌರ್ಜನ್ಯ ಸಂಬಂಧಿ ಪ್ರಕರಣಗಳನ್ನು ಸೈಬರ್ ಕ್ರೈಂ ಇಲಾಖೆಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಮಕ್ಕಳ ಪೋರ್ನ್‌ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದು ಕೇಂದ್ರ ಗೃಹ ಇಲಾಖೆ ಹೇಳಿದ್ದು, ಹಲವು ಎಫ್‌ಐಆರ್‌ಗಳು ಈ ಸಂಬಂಧ ದಾಖಲಾಗಿದ್ದು, ಕೆಲವು ಬಂಧನಗಳೂ ಆಗಿವೆ ಎಂದು ಮಾಹಿತಿ ನೀಡಿದೆ.

ನಗರ ಭಾಗಗಳೇ ಈ ರೀತಿಯ ಪ್ರಕರಣಗಳ ಕೇಂದ್ರವಾಗಿದ್ದು, ಮಹಾರಾಷ್ಟ್ರದಲ್ಲಿ, ಮುಂಬೈ, ಥಾಣೆ, ಪುಣೆಗಳಂತಹಾ ನಗರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+