ದೇಶಾದ್ಯಂತ 25 ಐಎಸ್‌ಐಎಸ್ ಬೆಂಬಲಿಗರು ವಶಕ್ಕೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 22 : ರಾಷ್ಟ್ರೀಯ ತನಿಖಾ ದಳ ಶುಕ್ರವಾರ ದೇಶದ ವಿವಿಧ ನಗರದಲ್ಲಿ ಕಾರ್ಯಾಚರಣೆ ನಡೆಸಿ 25 ಐಎಸ್‌ಐಎಸ್ ಬೆಂಬಲಿಗರನ್ನು ವಶಕ್ಕೆ ಪಡೆದುಕೊಂಡಿದೆ. ಮಂಗಳೂರು ಮತ್ತು ತುಮಕೂರಿನಲ್ಲಿಯೂ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಎಸ್‍ಐಎಸ್) ಸಂಘಟನೆಗೆ ಬೆಂಬಲ ನೀಡುತ್ತಿರುವ ವ್ಯಕ್ತಿಗಳ ಮೇಲೆ ಕೇಂದ್ರ ಗುಪ್ತಚರ ಇಲಾಖೆ ಕಣ್ಗಾವಲಿಟ್ಟಿತ್ತು. ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಇಂದು ವಿವಿಧ ನಗರಗಳಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. [ತುಮಕೂರು : ಶಂಕಿತ ಉಗ್ರನ ಬಂಧನ]

isis

ತುಮಕೂರಿನಲ್ಲಿ ಸೈಯದ್ ಹುಸೇನ್ (25), ಮಂಗಳೂರಿನಲ್ಲಿ ನಜಮುಲ್ ಹೂಡಾ (25) ಎಂಬ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಹೈದರಾಬಾದ್‌ನಲ್ಲಿಯೂ 4 ಶಂಕಿತರು ಸೇರಿ ಒಟ್ಟು 25 ಜನರನ್ನು ವಿವಿಧ ನಗರಗಳಲ್ಲಿ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.[ಮಂಗಳೂರಲ್ಲಿ ISIS ಉಗ್ರನ ಸೆರೆ]

67ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಆಗಮಿಸುತ್ತಿದ್ದಾರೆ. ಫ್ರಾನ್ಸ್ ಐಎಸ್‌ಐಎಸ್ ಉಗ್ರರ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ, ಉಗ್ರರು ಜನವರಿ 26ರಂದು ವಿವಿಧ ನಗರಗಳಲ್ಲಿ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. [ಗಣರಾಜ್ಯೋತ್ಸವದ ಮೇಲೆ ಉಗ್ರರ ಕಣ್ಣು?]

ಇದರಿಂದಾಗಿ ಸ್ಥಳೀಯ ಪೊಲೀಸರು ಸಹಕಾರ ಪಡೆದು ರಾಷ್ಟ್ರೀಯ ತನಿಖಾ ದಳ ವಿವಿಧ ನಗರಗಳಲ್ಲಿ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿ, ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Investigating Agency is carrying out a country wide operation in an attempt to bust several modules sympathetic to the ISIS. The NIA is questioning at least 25 persons who were on the radar of the intelligence bureau for alleged links to the ISIS.
Please Wait while comments are loading...