Viral Video: ಏರ್ ಇಂಡಿಯಾದ 600 ಹುದ್ದೆಗಳಿಗೆ 25000 ಅರ್ಜಿ: ಜನಸಂದಣಿ ವಿಡಿಯೋ ವೈರಲ್
ದೇಶದಲ್ಲಿ ನಿರುದ್ಯೋಗ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಈ ಒಂದು ದೃಶ್ಯವನ್ನು ನೋಡಿದರೆ ಸಾಕು.. ಅಬ್ಬಾ ಏನ್ ದೃಶ್ಯ.. ಈ ದೃಶ್ಯ ಫೇಕ್ ಅಲ್ಲವೇ ಅಲ್ಲ.. ಇದು ಮುಂಬೈನಲ್ಲಿ ಕಂಡು ಬಂದ ದೃಶ್ಯ.
ಈ ವಿಡಿಯೋಗಳನ್ನು ನೋಡಿದರೆ ಇತ್ತೀಚಿಗಷ್ಟೇ ಮುಂಬೈನಲ್ಲಿ ಟಿ20 ವಿಶ್ವಚಾಂಪಿಯನ್‌ರನ್ನು ಅಭಿಮಾನಿಗಳು ಬರಮಾಡಿಕೊಂಡ ದೃಶ್ಯ ನೆನಪಾಗುತ್ತದೆ. ಈ ದೃಶ್ಯ ಉದ್ಯೋಗವಕಾಶಕ್ಕಾಗಿ ಕಂಡು ಬಂದು ಯುವಕರ ದಂಡು.. ಏರ್ ಇಂಡಿಯಾ ಕರೆದಿದ್ದ ವಾಕ್ ಇನ್ ಸಂದರ್ಶನಕ್ಕೆ ಕರೆ ನೀಡಿತ್ತು. ಖಾಲಿ ಇರುವು ಹುದ್ದೆಗೆ ಹೋಲಿಸಿದರೆ, ಅರ್ಜಿಯನ್ನು ಹಾಕಿದವರ ಸಂಖ್ಯೆ 400 ಪಟ್ಟಿಗೂ ಹೆಚ್ಚು ಆಗಿದೆ.

ಸಂದರ್ಶನಕ್ಕೆ ಜನಸಂದಣಿ
ಈ ವಿಡಿಯೋ ನೋಡಿದರೆ, ದೇಶದಲ್ಲಿ ಇರುವ ನಿರುದ್ಯೋಗತನದ ಕಲ್ಪನೆ ಅರ್ಥವಾಗುತ್ತದೆ. ಏರ್ ಇಂಡಿಯಾ ಆಯೋಜಿಸಿದ್ದ ವಾಕ್-ಇನ್ ಸಂದರ್ಶನದಲ್ಲಿ ಜನಸಂದಣಿ ತುಂಬಾ ಹೆಚ್ಚಾಗಿದ್ದು ನಿಯಂತ್ರಿಸಲು ಆಯೋಜಕರು ಹರ ಸಾಹಸ ಪಟ್ಟಿದ್ದಾರೆ. ಈ ವಾಕ್‌ಇನ್ ಸಂದರ್ಶನದ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
मुंबई के बारे में कहा जाता है कि यहां से कोई खाली हाथ नहीं जाता, यहां सबको अपना गुज़ारा करने के लिए कुछ न कुछ मिल जाता है। लेकिन आर्थिक राजधानी मुंबई में बेरोज़गारी का ये हाल देखिए।
— Prof. Varsha Eknath Gaikwad (@VarshaEGaikwad) July 16, 2024
ये मुंबई एयरपोर्ट के बाहर के दृश्य हैं। एयरपोर्ट पर लोडर के ६०० पदों के लिए २५००० से ज्यादा… pic.twitter.com/GoZwdlyi1g
600 ಹುದ್ದೆಗಾಗಿ ಸಂದರ್ಶನ
ಏರ್ ಇಂಡಿಯಾ 600 ಹುದ್ದೆಗಳ ನೇಮಕಾತಿ ನಡೆಸಬೇಕಿತ್ತು. ಇದಕ್ಕೆ 25 ಸಾವಿರ ಜನರು ತಲುಪಿದ ನಿರುದ್ಯೋಗದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ 600 ಹುದ್ದೆಗಳಿಗೆ 25000 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಮುಂಬೈ ಕಾಂಗ್ರೆಸ್ ರಾಜ್ಯಾಧ್ಯಕ್ಷ ವರ್ಷಾ ಗಾಯಕ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಊಟ-ನೀರು ಇಲ್ಲದೆ ಗಂಟೆಗಟ್ಟಲೆ ಕಾಯುವ ಅರ್ಜಿದಾರರ ಸ್ಥಿತಿಯೂ ಹದಗೆಟ್ಟಿದೆ. ಅರ್ಜಿದಾರರು ಯಾವುದೇ ಸ್ಥಳದಲ್ಲಾದ್ರೂ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಉದ್ಯೋಗದ ಸುದ್ದಿ ಕೇಳಿದ ತಕ್ಷಣ ಸಾವಿರಾರು ಯುವಕರು ಜಮಾಯಿಸುವ ರೀತಿಯಲ್ಲಿ ಕಾಲ್ತುಳಿತದ ಭೀತಿ ಎದುರಾಗಿದೆ. ಈ ಜನಸಂದಣಿಯನ್ನು ನಿಭಾಯಿಸಲು ನೌಕರರಿಗೆ ಸಾಧ್ಯವಾಗಲಿಲ್ಲ.
ಸಂದರ್ಶನಕ್ಕೆ ಜನರ ದಂಡು
ಏರ್ ಇಂಡಿಯಾ ಏರ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್ ನಡೆಸಿದ ವಾಕ್-ಇನ್ ಸಂದರ್ಶನಕ್ಕೆ ಸಾವಿರಾರು ಜನರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ. ಜುಲೈ 12ರಿಂದ 16ರ ನಡುವೆ ಸುಮಾರು ಮೂರು ಸಾವಿರ ಹುದ್ದೆಗಳಿಗೆ ಪ್ರತ್ಯೇಕ ಸಂದರ್ಶನ ನಡೆದಿದೆ. ಜನಸಂದಣಿ ತುಂಬಾ ತಲುಪಿದ್ದರಿಂದ ಜನರಿಗೆ ಹಿಂತಿರುಗುವಂತೆ ಸೂಚಿಸಲಾಗಿದೆ.
ಏರ್ ಇಂಡಿಯಾ ಕರೆ ನೀಡಿದ್ದ ವಾಕ್ ಇನ್ ಸಂದರ್ಶನದಲ್ಲಿ ಭಾರೀ ಜನ ಸಮೂಹವನ್ನು ಕಂಡು, ಅಲ್ಲಿ ಕಾಲ್ತುಳಿತ ಸಂಭವಿಸುತ್ತದೆ ಎಂಬ ಭೀತಿಯಿಂದ ಸಂದರ್ಶನವನ್ನು ರದ್ದು ಮಾಡಲಾಗಿದೆ.
ಸುಮಾರು 50 ಸಾವಿರ ಜನರು ಸಂದರ್ಶನ ನೀಡಲು ಬಂದಿದ್ದರು ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದರಿಂದ ಪರಿಸ್ಥಿತಿ ಹದಗೆಟ್ಟಿತು. ಇದೀಗ ಸಂದರ್ಶನಕ್ಕೆ ಬಂದಿದ್ದ ಸಾವಿರಾರು ಅರ್ಜಿದಾರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಮೂಲಕ ಜನ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಈ ನಿರುದ್ಯೋಗಿಗಳು ತಮ್ಮ ಮತವನ್ನು ಸರಿಯಾಗಿ ಬಳಸಿದ್ದರೆ ಅವರು ಈ ದಿನವನ್ನು ನೋಡಬೇಕಾಗಿರಲಿಲ್ಲ ಎಂದು ಕೈ ಮುಖಂಡರು ಹೇಳಿದ್ದಾರೆ. ದೇಶದ ಶಿಕ್ಷಣ ನೀತಿ ಮತ್ತು ಉದ್ಯೋಗ ನೀತಿಯ ವೈಫಲ್ಯಗಳಿಗೆ ಈ ವಿಡಿಯೋ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಬರೆದಿದ್ದಾರೆ.












Click it and Unblock the Notifications