Happy New Year 2025: ಭಾರತಕ್ಕಿಂತ ಮೊದಲು ಹೊಸ ವರ್ಷ ಸ್ವಾಗತಿಸುವ ದೇಶಗಳು
2025ರ ಹೊಸ ವರ್ಷವನ್ನು ಆಚರಿಸಲು ಜಗತ್ತು ಕಾತರದಿಂದ ಕಾಯುತ್ತಿದೆ. ಭಾರತದಲ್ಲಿ ಹೊಸ ವರ್ಷ ಆಚರಿಸಲು ಇನ್ನು ಕೆಲವೇ ಗಂಟೆಗಳು ಬಾಕಿಯಿದ್ದು ಪಟಾಕಿ ಸಿಡಿಸಿ ಸಂಭ್ರಮಿಸಿ, ಹೊಸ ವರ್ಷ ಸ್ವಾಗತಿಸಲು ಜನ ಕಾಯುತ್ತಿದ್ದಾರೆ. ಆದರೆ ಭಾರತಕ್ಕಿಂತ ಮೊದಲು ಹಲವು ದೇಶಗಳು ಹೊಸ ವರ್ಷಾಚರಣೆ ನಡೆಸಲಿವೆ. ಜಗತ್ತಿನಲ್ಲಿ ಆ ಒಂದು ದ್ವೀಪ ಎಲ್ಲ ದೇಶಗಳಿಗಿಂತ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತದೆ.
ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ಕಿರಿಬಾಟಿ ರಿಪಬ್ಲಿಕ್ ದೇಶದ ಕಿರಿಟಿಮತಿ ದ್ವೀಪವೇ ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ. ಭಾರತ ಹೊಸ ವರ್ಷಾಚರಣೆ ಮಾಡುವ 8.5 ಗಂಟೆ ಮೊದಲೇ ಇಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಕ್ರಿಸ್ಮಸ್ ದ್ವೀಪ ಎನ್ನುತ್ತಾರೆ.

ಈ ದ್ವೀಪ ಗ್ರೀನ್‌ವಿಚ್ ಮೀನ್ ಟೈಮ್‌ಗಿಂತ 14 ಗಂಟೆಗಳು ಮುಂದಿದೆ. ಅಂದರೆ ಭಾರತಕ್ಕಿಂತ 8.5 ಗಂಟೆ ಮುಂದೆ ಇರುತ್ತದೆ. ಭಾರತದಲ್ಲಿ ಡಿಸೆಂಬರ್ 31 ರಂದು ಮಧ್ಯಾಹ್ನ 3.30 ಆಗಿರುವಾಗಲೇ ಕಿರೀಟಿಮತಿ ದ್ವೀಪದಲ್ಲಿ ಜನವರಿ 1, 2025 ರ ಮಧ್ಯರಾತ್ರಿ 12 ಗಂಟೆಯಾಗಲಿದ್ದು ಹೊಸ ವರ್ಷಾಚರಣೆ ನಡೆದಿದೆ. ಕಿರೀಟಿಮತಿ ಪ್ರದೇಶದ ಜನ ಪಟಾಕಿ, ಸಂಗೀತ, ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಕಿರಿಬಾಟಿ ದೇಶದಲ್ಲಿ ಮೊದಲು ವರ್ಷ ಆಚರಣೆ ಮಾಡಿದ 15 ನಿಮಿಷಗಳ ಬಳಿಕ ನ್ಯೂಜಿಲೆಂಡ್ ಚಾಥಮ್ ದ್ವೀಪಗಳಲ್ಲಿ ಹೊಸ ವರ್ಷಾಚರಣೆ ನಡೆಯಿತು. ಬಳಿಕ ನ್ಯೂಜೆಲೆಂಡ್‌ನ ಮುಖ್ಯ ಭೂಭಾಗ ಮತ್ತು ಟೊಕೆಲಾವ್ ಮತ್ತು ಟೊಂಗಾ ಸೇರಿದಂತೆ ಹಲವಾರು ಪೆಸಿಫಿಕ್ ದ್ವೀಪಗಳಲ್ಲಿ ಹೊಸ ವರ್ಷಾಚರಣೆ ಮಾಡಲಾಯಿತು.
ಹವಾಯಿ, ಅಮೇರಿಕನ್ ಸಮೋವಾ ಮತ್ತು ಕೆಲವು ಯುಎಸ್‌ನ ಹಲವು ಪ್ರಾಂತ್ಯಗಳು ಎಲ್ಲಾ ದೇಶಗಳಿಗಿಂತ ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಹಾಗಾದರೆ ಭಾರತಕ್ಕಿಂತ ಮೊದಲು ಹೊಸ ವರ್ಷಾಚರಣೆ ಮಾಡುವ ಮತ್ತು ಭಾರತದ ಬಳಿಕ ಹೊಸ ವರ್ಷ ಆಚರಿಸುವ ದೇಶಗಳ ಪಟ್ಟಿ ಇಲ್ಲಿದೆ. ಭಾರತೀಯ ಕಾಲಮಾನದಲ್ಲಿ ಯಾವ ದೇಶಗಳಲ್ಲಿ ಯಾವ ಸಮಯದಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ ಎನ್ನುವ ವಿವರ.
- ಮಧ್ಯಾಹ್ನ 3.30: ಕಿರಿಬಾಟಿ
- ಸಂಜೆ 4.30: ನ್ಯೂಜಿಲೆಂಡ್
- ಸಂಜೆ 5.30: ಫಿಜಿ, ರಷ್ಯಾದ ಸಣ್ಣ ಪ್ರದೇಶಗಳು
- ಸಂಜೆ 6.30 : ಆಸ್ಟ್ರೇಲಿಯಾದ ಮುಶ್
- ರಾತ್ರಿ 8.30: ಜಪಾನ್, ದಕ್ಷಿಣ ಕೊರಿಯಾ
- ರಾತ್ರಿ 9.30 : ಚೀನಾ, ಮಲೇಷಿಯಾ, ಸಿಂಗಾಪುರ, ಹಾಂಗ್ ಕಾಂಗ್, ಫಿಲಿಪೈನ್ಸ್
- ಭಾರತ, ಶ್ರೀಲಂಕಾ 12 ಗಂಟೆಗೆ
- ಬೆಳಗ್ಗೆ 1.30: ಯುಎಇ, ಓಮನ್, ಅಜೆರ್ಬೈಜಾನ್
- ಬೆಳಗ್ಗೆ 3.30: ಗ್ರೀಸ್, ದಕ್ಷಿಣ ಆಫ್ರಿಕಾ, ಸೈಪ್ರಸ್, ಈಜಿಪ್ಟ್, ನಮೀಬಿಯಾ
- ಬೆಳಗ್ಗೆ 4.30: ಜರ್ಮನಿ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಮೊರಾಕೊ, ಕಾಂಗೋ, ಮಾಲ್ಟಾ
- ಬೆಳಗ್ಗೆ 5.30: ಯುಕೆ, ಐರ್ಲೆಂಡ್, ಪೋರ್ಚುಗಲ್
- ಬೆಳಗ್ಗೆ 8.30 : ಬ್ರೆಜಿಲ್, ಅರ್ಜೆಂಟೀನಾ, ಚಿಲಿ
- ಬೆಳಿಗ್ಗೆ 9.30 : ಪೋರ್ಟೊ ರಿಕೊ, ಬರ್ಮುಡಾ, ವೆನೆಜುವೆಲಾ, ಯುಎಸ್ ವರ್ಜಿನ್ ದ್ವೀಪಗಳು, ಬ್ರಿಟಿಷ್ ವರ್ಜಿನ್ ದ್ವೀಪಗಳು
- ಬೆಳಗ್ಗೆ 10.30: ಯುಎಸ್ ಈಸ್ಟ್ ಕೋಸ್ಟ್ (ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಇತ್ಯಾದಿ) ಪೆರು, ಕ್ಯೂಬಾ, ಬಹಾಮಾಸ್
- ಬೆಳಗ್ಗೆ 11.30 : ಮೆಕ್ಸಿಕೋ, ಕೆನಡಾದ ಕೆಲವು ಭಾಗಗಳು ಮತ್ತು ಯುಎಸ್
- ಮಧ್ಯಾಹ್ನ 1.30 : ಯುಎಸ್ ವೆಸ್ಟ್ ಕೋಸ್ಟ್ (ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ, ಇತ್ಯಾದಿ)
- ಮಧ್ಯಾಹ್ನ 3.30 : ಹವಾಯಿ, ಫ್ರೆಂಚ್ ಪಾಲಿನೈಸಾ
- ಸಂಜೆ 4.30: ಸಮೋವಾ












Click it and Unblock the Notifications