ನಾಗಾಲ್ಯಾಂಡಿನಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಇಬ್ಬರು ಯೋಧರು
ಇಂಫಾಲ್, ಜೂನ್ 18: ನಾಗಾಲ್ಯಾಂಡಿನ ನ್ಯಾಶ್ನಲ್ ಸೋಶಿಯಲಿಸ್ಟ್ ಕೌನ್ಸಿಲ್ ನ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ ನ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ನಿನ್ನೆ(ಜೂನ್ 17) ಮಧ್ಯಾಹ್ನ ಶಂಕಿತ ನ್ಯಾಶ್ನಲ್ ಸೋಶಿಯಲಿಸ್ಟ್ ಕೌನ್ಸಿಲ್ ಉಗ್ರರು ಮತ್ತು ಅಸ್ಸಾಂ ರೈಫಲ್ಸ್ ನಡುವೆ ನಡೆದ ಗುಂದಿನ ಚಕಮಕಿಯಲ್ಲಿ ಒಟ್ಟು ನಾಲ್ವರು ಗಾಯಗೊಂದಿದ್ದು, ಇಬ್ಬರು ಸೈನಿಕರು ಹುತಾತ್ಮತರಾಗಿದ್ದಾರೆ.
ಸೈನಿಕರು ನದಿಯಿಂದ ನೀರು ತರಲು ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಈ ಸ್ಥಳಕ್ಕೆ ಮತ್ತಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಾಗಾಲ್ಯಾಂಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಹುತಾತ್ಮರಾದ ಇಬ್ಬರು ಜವಾನರಿಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹುತಾತ್ಮ ಯೋಧರ ಗುರುತು ಪತ್ತೆಯಾಗಿಲ್ಲ.












Click it and Unblock the Notifications