Petrol Bill viral: 1963ರ ಪೆಟ್ರೋಲ್ ದರದ ಬಿಲ್ ವೈರಲ್
ನವದೆಹಲಿ, ಮೇ, 16: ಪ್ರಸ್ತುತ ಲೀಟರ್ ಪೆಟ್ರೋಲ್ ದರ 102 ಇದ್ದು, ಡೀಸೆಲ್ 100 ರೂಪಾಯಿ ಇದೆ. ಇದರ ನಡುವೆಯೇ ಸುಮಾರು 50 ವರ್ಷಗಳ ಹಿಂದಿನ ಅಂದರೆ, 1963ರ ಪೆಟ್ರೋಲ್ ದರದ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಇದರಲ್ಲಿರುವ ಬೆಲೆ ನೋಡಿದವರು ಶಾಕ್ ಆಗುವುದಂತೂ ಖಂಡಿದೆ. ಯಾಕೆ ಅಂತೀರಾ.. ಇಲ್ಲಿದೆ ನೋಡಿ ಮಾಹಿತಿ.
ಭಾರೀ ವೈರಲ್ ಆಗುತ್ತಿರುವ ಫೆಬ್ರವರಿ, 02, 1963ರ ಈ ಬಿಲ್ ಕಂಡು ನೋಡುಗರು ದಂಗಾಗಿದ್ದಾರೆ. ಆಗ ಒಬ್ಬ ವ್ಯಕ್ತಿ ಭಾರತ್ ಪೆಟ್ರೋಲ್ ಬಂಕ್‌ನಿಂದ 5 ಲೀಟರ್ ಪೆಟ್ರೋಲ್ ಖರಿದಿಸಿದ್ದು, 3 ರೂಪಾಯಿ 60 ಪೈಸೆ ಕಟ್ಟಿರುವುದನ್ನು ಬಿಲ್‌ನಲ್ಲಿ ನಮೂದಿಸಲಾಗಿದೆ.

ಇದು ಒಂದು ಲೀಟರ್ ಪೆಟ್ರೋಲ್ ಬೆಲೆ ಅಲ್ಲ. ಬದಲಾಗಿ 5 ಲೀಟರ್ ಪೆಟ್ರೋಲ್ ಬೆಲ, ಅಂದರೆ ಒಂದು ಲೀಟರ್ ಪೆಟ್ರೋಲ್ ದರ ಕೇವಲ 72 ಪೈಸೆಯಾಗಿದ್ದು, ಕನಿಷ್ಠ ಒಂದು ರೂಪಾಯಿ ಕೂಡ ಇಲ್ಲ. ಇದೀಗ ಪಟ್ರೋಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ ಈ ಬಿಲ್ ವೈರಲ್ ಆಗಿದ್ದು, ಇದಕ್ಕೆ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.
1964ರ ಅಂಬಾಸಿಡರ್ ಕಾರಿನ ದರದ ಬಿಲ್ ವೈರಲ್
ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರು ಇಟ್ಟವನೇ ದೊಡ್ಡ ಸಾಹುಕಾರ ಎಂಬ ಮಾತಿತ್ತು. ಅಷ್ಟೇ ಅಲ್ಲದೆ ಸರ್ಕಾರಿ ಕಚೇರಿಗಳಿಗೂ ಇದನ್ನೇ ಹೆಚ್ಚಾಗಿ ಬಳಕ್ಕೆ ಮಾಡುತ್ತಿದ್ದರು. ದಿನಗಳೆದಂತೆ ಈ ಕಾರು ಸಂಪೂರ್ಣವಾಗಿ ನಿಂತುಹೋಯಿತು. ಆದರೆ ಕೂಡ ಇದರ ಹೆಸರು ಮಾತ್ರ ಕೇಳಿಬರುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ ಕಾರು ಇದಾಗಿದೆ. ಇನ್ನು ಇದೀಗ ಹಳೇ ಕಾಲದ ಈ ಕಾರಿನ ಬಿಲ್‌ವೊಂದು ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಆಗ ಇದರ ಬೆಲೆ ಎಷ್ಟಿತ್ತು ಹಾಗೂ ವಿಶೇಷತೆಗಳೇನು ಎಂದು ಇಲ್ಲಿ ತಿಳಿಯಿರಿ.
ರಾಜಮಹರಾಜರು, ಶ್ರೀಮಂತ ಕುಟುಂಬ ವರ್ಗದವರು ಈ ಕಾರನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಕಾರು ಇದೀಗ ಸಂಪೂರ್ಣವಾಗಿ ನಿಂತುಹೋದರೂ ಕೂಡ ಈಗಲೂ ಕೂಡ ಕೆಲವೊಬ್ಬರ ಮನೆಯಲ್ಲಿ ಇದನ್ನು ಕಾಣಬಹುದಾಗಿದೆ. ಇದೀಗ ಬಿಎಂಡಬ್ಲ್ಯೂ ಹೆಗೆ ಸದ್ದು ಮಾಡುತ್ತಿದೆಯೋ ಅದೇ ರೀತಿ ಆಗಿನ ಕಾಲದಲ್ಲಿ ಅಂಬಾಸಿಡರ್ ಹವಾ ಕ್ರಿಯೆಟ್ ಮಾಡಿತ್ತು.
ಇನ್ನು ಇದೀಗ 1964ರ ಕಾಲದ ಅಂಬಾಸಿಡರ್ ಕಾರಿನ ಬಿಲ್ ಒಂದು ವೈರಲ್ ಆಗಿದ್ದು, ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರಿನ ಬೆಲೆ ಕಂಡು ನೆಟ್ಟಿಗರು ದಂಗಾಗಿದ್ದಾರೆ.
Madras Trends ಎಂಬ ಫೇಸ್ಬುಕ್ ಖಾತೆಯಲ್ಲಿ 1964ರಲ್ಲಿ ತೆಗೆದುಕೊಂಡ ಅಂಬಾಸಿಡರ್ ಕಾರಿನ ಬಿಲ್ ಅನ್ನು ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 20, 1964ರಲ್ಲಿ ಈ ಕಾರನ್ನು ಖರೀದಿ ಮಾಡಲಾಗಿದ್ದು, ಅದರ ಬೆಲೆ 16,495 ರೂಪಾಯಿ ಆಗಿದೆ. ಇನ್ನು ಈ ಹಳೆ ಬಿಲ್ ಇದೀಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಈ ಬಿಲ್‌ನ ಪ್ರಕಾರ, ಕಾರಿನ ದರ 13,787 ರೂಪಾಯಿ, ಸೇಲ್ಸ್ ಟ್ಯಾಕ್ಸ್ 1493 ರೂಪಾಯಿ ಹಾಗೂ ಸಾರಿಗೆ ಶುಲ್ಕ 897 ರೂಪಾಯಿ ಜೊತೆಗೆ ನಂಬರ್ ಪ್ಲೇಟ್ಗೆ 7 ರೂಪಾಯಿ ಸೇರಿದಂತೆ ಮುಂತಾದ ಶುಲ್ಕಗಳನ್ನು ಸೇರಿ ಒಟ್ಟು 16,495 ರೂಪಾಯಿಗೆ ಕಾರನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications