LPG Cylinder Price: ಇಂದಿನಿಂದ ಸಿಲಿಂಡರ್ ದರ ಹೆಚ್ಚಳ, ನಗರವಾರು ಗ್ಯಾಸ್ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ

ನವದೆಹಲಿ, ಸೆಪ್ಟಂಬರ್ 01: ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದಲ್ಲಿ ಮತ್ತೆ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಮತ್ತೆ ಗಗನಕ್ಕೇರಿದೆ. ಇದು ಹೋಟೆಲ್, ರಸ್ಟೋರೆಂಟ್ ಮಾಲೀಕರ ತಲೆ ಬಿಸಿಗೆ ಕಾರಣವಾಗಿದೆ. ನಿತ್ಯ ಬಳಕೆಯ ಪೈಕಿ ಅಡುಗೆ ಅನಿಲ ದರ ಹೆಚ್ಚಳ ಜನರಿಗೂ ಪರೋಕ್ಷವಾಗಿ ಆರ್ಥಿಕ ಹೊರೆ ಹೇರುವ ಸಾಧ್ಯತೆ ಇದೆ. ಮನೆ ಬಳಕೆಯ ಸಿಲಿಂಡರ್ ದರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಬದಲಾವಣೆ ಆಗಿಲ್ಲ.

ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ (LPG Cylinder Price) ದರ ದೆಹಲಿಯಲ್ಲಿ ಬುಧವಾರವೇ 39 ರೂಪಾಯಿ ಹೆಚ್ಚಾಗಿದೆ. ಈ ಬೆಲೆ ಇವತ್ತಲ್ಲದೇ ಮೇ ತಿಂಗಳಿನಿಂದಲೇ ಹೆಚ್ಚು ಮಾಡಿಕೊಂಡು ಬರಲಾಗಿದೆ. ಮೇ ತಿಂಗಳಲ್ಲಿ 19 ರೂಪಾಯಿ, ಜೂನ್ ನಲ್ಲಿ 69.50 ರೂ. ಹಾಗೂ ಜುಲೈನಲ್ಲಿ ಪ್ರತಿ ಸಿಲಿಂಡರ್ ಮೇಲೆ 30 ರೂಪಾಯಿಯಷ್ಟು ಹಣ ಹೆಚ್ಚಳ ಮಾಡಲಾಗಿತ್ತು. ಇದರಿಂದ ವಾಣಿಜ್ಯ ಬಳಕೆಯ ಗ್ರಾಹಕರು ನಿರಂತರಾಗಿ ಬೆಲೆ ಏರಿಕೆಯ ಬಿಸಿ ಅನುಭವಿಸಿದ್ದಾರೆ.

19 KG LPG Cylinder Price Rs 39 Increased From Sep 1st City Wise LPG Price Today

ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವಾಗ ಹೀಗೆ ದಿಢೀರನೇ ವಾಣಿಜ್ಯ ಬಳಕೆಯ ಬೆಲೆ ಹೆಚ್ಚಿಸಿದ್ದರಿಂದ ಹೋಟೆಲ್, ರೆಸ್ಟೋರೆಂಟ್ ಪದಾರ್ಥಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಊಟ, ತಿಂಡಿ, ಟೀ ಕಾಫಿಗಳಲ್ಲಿ ಬೆಲೆ ಏರಿಕೆ ಮಾಡಿದರು ಇದು ನೇರವಾಗಿ ಜನರ ಮೇಲೆ ದರ ಹೆಚ್ಚಳದ ಬರೆ ಎಳೆಂದಂತಾಗುತ್ತದೆ.

ವಿವಿಧ ನಗರಗಳಲ್ಲಿ ಎಷ್ಟಿದೆ ಎಲ್‌ಪಿಜಿ ದರ?

ಐಓಸಿಎಲ್ ವೆಬ್‌ಸೈಟ್ ಪ್ರಕಾರ, ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಇಂದು ಸೆಪ್ಟಂಬರ್ 1ರಿಂದ ಜಾರಿಗೆ ಬರಲಿದೆ. ದೆಹಲಿಯಲ್ಲಿ ಇಂದು (ಸೆಪ್ಟಂಬರ್ 1) ವಾಣಿಜ್ಯ ಬಳಕೆಯ ಸಿಲಿಂಡರ್ ದರ 1691.50 ಲಭ್ಯ ಇದೆ. ಇಂದು ಮುಂಬೈ ಮಹಾನಗರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 1605 ರೂ. ಇದ್ದದ್ದು ಇದೀಗ 1,644 ರೂಪಾಯಿ ಆಗಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ದಲ್ಲಿ ಮೊದಲಿದ್ದ ಸಿಲಿಂಡರ್ ದರ 1764.50 ರೂಪಾಯಿಯಿಂದ 1,802.50 ರೂ.ಗೆ ಹೆಚ್ಚಳವಾಗಿದೆ. ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಇದೇ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ 1817 ರೂ.ಗೆ ಸಿಗುತ್ತಿತ್ತು. ಇದೀಗ 1,855 ರೂ. ನೀಡಿ ಪಡೆಯಬೇಕಿದೆ. ಬೆಂಗಳೂರಿನಲ್ಲಿ ಒಂದು ಸಿಲಿಂಡರ್‌ 1769.50 ಬೆಲೆ ಇದೆ. ಮನೆ ಬಳಕೆಯ 14 ಕೆಜಿ ಗ್ಯಾಸ್‌ಗೆ ಬೆಂಗಳೂರಲ್ಲಿ 805.50 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+