ಭಾರತದಲ್ಲಿ ಕೊರೊನಾವೈರಸ್ ನಿಂದ ಒಟ್ಟು 14,011 ಮಂದಿ ಸಾವು
ನವದೆಹಲಿ, ಜೂನ್.23: ನೊವೆಲ್ ಕೊರೊನಾವೈರಸ್ ಅಟ್ಟಹಾಸಕ್ಕೆ ಭಾರತೀಯರು ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಕಳೆದ 24 ಗಂಟೆಗಳಲ್ಲೇ ಮಹಾಮಾರಿ ಕೊವಿಡ್-19 ಸೋಂಕಿಗೆ 312 ಮಂದಿ ಪ್ರಾಣ ಬಿಟ್ಟಿದ್ದಾರೆ.
Recommended Video
ದೇಶದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತರು ಹಾಗೂ ಮೃತಪಟ್ಟವರ ಕುರಿತು ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಭಾರತದಲ್ಲಿ ಒಂದೇ ದಿನ 14,933 ಮಂದಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ.
ಮಹಾಮಾರಿ ನೊವೆಲ್ ಕೊರೊನಾವೈರಸ್ ನಿಂದಾಗಿ ದೇಶದಲ್ಲಿ ಇದುವರೆಗೂ 14,011 ಮಂದಿ ಬಲಿಯಾಗಿದ್ದಾರೆ. ಇನ್ನು, ಭಾರತದಲ್ಲಿ ಒಟ್ಟು 4,40,215 ಮಂದಿಗೆ ಕೊರೊನಾವೈರಸ್ ಸೋಂಕಿತರ ಪೈಕಿ 2,48,189ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. 1,78,014 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಕೊರೊನಾವೈರಸ್ ಅಟ್ಟಹಾಸಕ್ಕೆ ನಲುಗಿದ ತಮಿಳುನಾಡು:
ಕೊರೊನಾವೈರಸ್ ಅಟ್ಟಹಾಸದ ನಡುವೆ ತಮಿಳುನಾಡು ಸಿಕ್ಕು ನಲುಗಿದೆ. ಕಳೆದ 24 ಗಂಟೆಗಳಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ದೇಶದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನಕ್ಕೇರಿದೆ. ನವದೆಹಲಿಯಲ್ಲಿ ಕೊರೊನಾವೈರಸ್ ನಿಂದಾಗಿ ಕಳೆದ 24 ಗಂಟೆಗಳಲ್ಲಿ 58 ಜನರು ಪ್ರಾಣ ಬಿಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 2233ಕ್ಕೆ ಏರಿಕೆಯಾಗಿದೆ.












Click it and Unblock the Notifications