Maha Kumbh Mela 2025: ಮಹಾಕುಂಭ ಮೇಳಕ್ಕೆ ಬಂದಿಳಿದ 77 ದೇಶಗಳ ರಾಜತಾಂತ್ರಿಕ ನಿಯೋಗ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಜಗತ್ತಿನ ಗಮನ ಸೆಳೆದಿದೆ. ಇಂದು ಮಹಾಕುಂಭ ಮೇಳದ ನಿಮಿತ್ತ ಸುಮಾರು 77 ದೇಶಗಳ ಸುಮಾರು 118 ರಾಜತಾಂತ್ರಿಕ ಸದಸ್ಯರ ನಿಯೋಗವು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದೆ. ಇವರೆಲ್ಲರೂ ಪ್ರಯಾಗರಾಜ್ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

ಭಾರತದ ಸ್ಲೋವಾಕ್ ರಾಯಭಾರಿ ರಾಬರ್ಟ್ ಮ್ಯಾಕ್ಸಿಯಾನ್ ಅವರು ಮಹಾಕುಂಭ ಮೇಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಅಭಿನಂದಿಸಿದ್ದಾರೆ. ಮಹಾಕುಂಭ ಮೇಳಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಮಹಾನ್ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಭಾರತ ಸರ್ಕಾರವನ್ನು ಅಭಿನಂದಿಸಲು ಬಯಸುತ್ತೇನೆ. ನಾನು ಭಾರತದ ಅಭಿಮಾನಿ. ಭಾರತವು ನನ್ನ ಎರಡನೇ ಮನೆ ಇದ್ದಂತೆ ಎಂದು ಹೊಗಳಿದ್ದಾರೆ.

118-Member International Delegation Visits Maha Kumbh Mela In Prayagraj

ಭಾರತದಲ್ಲಿ ಅರ್ಜೆಂಟೀನಾದ ರಾಯಭಾರಿ ಮರಿಯಾನೊ ಕೌಸಿನೊ ಅವರು ಈ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಹತ್ವದ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಇಲ್ಲಿನ ಸಂಪ್ರದಾಯಗಳನ್ನು ಅನುಸರಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಹಾಕುಂಭ ಮೇಳವು ಜೀವಮಾನದಲ್ಲಿ ಒಮ್ಮೆ ಸಿಗುವ ಅನುಭವ ಇದು ಎಂದು ಭಾರತದಲ್ಲಿರುವ ಜಿಂಬಾಬ್ವೆ ರಾಯಭಾರಿ ಸ್ಟೆಲ್ಲಾ ನ್ಕೊಮೊ ಬಣ್ಣಿಸಿದ್ದಾರೆ. ಸಾಂಸ್ಕೃತಿಕ ಮತ್ತು ಸಾರ್ವಜನಿಕ ರಾಜತಾಂತ್ರಿಕತೆಯನ್ನು ಅನುಸರಿಸುವುದೇ ರಾಜತಾಂತ್ರಿಕ ಜೀವನ. ನಮಗೆ ಆತಿಥ್ಯ ನೀಡಿದ ಉತ್ತರ ಪ್ರದೇಶ ರಾಜ್ಯಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಹೊಗಳಿದ್ದಾರೆ.

118-Member International Delegation Visits Maha Kumbh Mela In Prayagraj

ವಿದೇಶಾಂಗ ವ್ಯವಹಾರಗಳ ಸಚಿವರು ವರ್ಷಕ್ಕೊಮ್ಮೆ ಭಾರತದ ಪ್ರಮುಖ ಆಚರಣೆಗಳಿಗೆ ನಮ್ಮನ್ನು ಆಹ್ವಾನಿಸುತ್ತಾರೆ. ನಾನು ಕಳೆದ ಬಾರಿ ದೀಪಾವಳಿಗೆ ಆಹ್ವಾನ ಪಡೆದಿದ್ದೆ. ಆದರೆ, ಸುಮಾರು 144 ವರ್ಷಗಳಿಗೊಮ್ಮೆ ನಡೆಯುವ ಇಂತಹ ಕಾರ್ಯಕ್ರಮಕ್ಕೆ ನನ್ನ ಮಕ್ಕಳು ಕೂಡ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ಬೊಲಿವಿಯಾ ಮಿಷನ್ ಮುಖ್ಯಸ್ಥ ಕ್ರಿಶ್ಚಿಯನ್ ವಿಲ್ಲಾರ್ರಿಯಲ್ ಕೂಡ ಸ್ಮರಿಸಿದ್ದಾರೆ. ಈ ಮಹತ್ವದ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಸಂಪ್ರದಾಯಗಳನ್ನು ಅನುಸರಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಭಾರತದ ಅರ್ಜೆಂಟೀನಾದ ರಾಯಭಾರಿ ಮರಿಯಾನೊ ಕೌಸಿನೊ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ. ಮಹಾಕುಂಭದ ಸಂದರ್ಭದಲ್ಲಿ ಕಾಲ್ತುಳಿತದ ನಂತರ ಅವರ ಮೊದಲ ಬಾರಿಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ. ಪ್ರಯಾಗ್‌ರಾಜ್‌ನ ಸೆಕ್ಟರ್-21ರ ಸತುವಾ ಬಾಬಾ ಆಶ್ರಮ ಮತ್ತು ಸೆಕ್ಟರ್-5ರ ಭಾರತ್ ಸೇವಾಶ್ರಮ್ ಶಿಬಿರಕ್ಕೂ ಭೇಟಿ ನೀಡಿದ್ದಾರೆ. ಮೇಳದ ಸರ್ಕ್ಯೂಟ್ ಹೌಸ್‌ನಲ್ಲಿ ವಿವಿಧ ದೇಶಗಳ ಮಿಷನ್ ಮುಖ್ಯಸ್ಥರ ಪ್ರತಿನಿಧಿಗಳನ್ನು ಯೋಗಿ ಭೇಟಿಯಾಗಲಿದ್ದಾರೆ.

ಕೋಲ್ಡ್‌ಪ್ಲೇ ಖ್ಯಾತಿಯ ಫ್ರಂಟ್‌ಮ್ಯಾನ್ ಕ್ರಿಸ್ ಮಾರ್ಟಿನ್ ಮತ್ತು ಗೆಳತಿ ಡಕೋಟಾ ಜಾನ್ಸನ್ ಕೂಡ ಇತ್ತೀಚೆಗೆ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದರು. ಅಪ್ಪಟ ಭಾರತೀಯ ಸಂಪ್ರದಾಯದಲ್ಲಿ ಅವರು ಮಿಂಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+