ಕೇವಲ 10 ಸಾವಿರ ರೂ. ವೆಚ್ಚದಲ್ಲಿ AI ವಾಕಿಂಗ್ ಸ್ಟಿಕ್ ಕಂಡು ಹಿಡಿದು ಅಂಧರ ಬಾಳಿಗೆ ಬೆಳಕಾದ 11ರ ಪೋರಿ ಆರಾಧ್ಯ
ವಯಸ್ಸಾದ ಅಜ್ಜ-ಅಜ್ಜಿಯರನ್ನ ಯಾರು ನೋಡಿಕೊಳ್ಳುತ್ತಾರೆ ಎಂಬ ಕಾಳಜಿ, ದೃಷ್ಟಿಹೀನರ ಕಷ್ಟಗಳನ್ನ ಅರ್ಥಮಾಡಿಕೊಳ್ಳುವ ತುಡಿತ.. ಇವೆರಡೂ ಸೇರಿ 11 ವರ್ಷದ ಬಾಲಕಿಯೊಬ್ಬಳು ಅದ್ಭುತ ಆವಿಷ್ಕಾರವೊಂದನ್ನ ಮಾಡುವಂತೆ ಪ್ರೇರೇಪಿಸಿದೆ.
ಹೌದು, ಕೇವಲ 11 ವರ್ಷದ ಆರಾಧ್ಯ ಜೈನ್ ಎಂಬ ಬಾಲಕಿ 'ಸ್ತಂಭ'ಎಂಬ ಹೆಸರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ಸ್ಮಾರ್ಟ್ ವಾಕಿಂಗ್ ಸ್ಟಿಕ್ ಅನ್ನು ಸಿದ್ಧಪಡಿಸಿದ್ದಾಳೆ. ಸುಮಾರು 10,000 ರೂ. ವೆಚ್ಚದಲ್ಲಿ ತಯಾರಾಗಿರುವ ಈ ಸಾಧನ, ವಿಶ್ವಸಂಸ್ಥೆ ಮಟ್ಟದಲ್ಲಿಯೂ ಗಮನ ಸೆಳೆದು ಎಲ್ಲರೂ ಬೆರಗಾಗುವಂತೆ ಮಾಡಿದೆ.

ಶ್ರೀಕಾಂತ್ ಸಿನಿಮಾ ನೀಡಿದ ಪ್ರೇರಣೆ
ದೃಷ್ಟಿಹೀನ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲಾ ಅವರ ಜೀವನಾಧಾರಿತ ಶ್ರೀಕಾಂತ್ ಸಿನಿಮಾವನ್ನ ನೋಡಿದ ಬಳಿಕ ಆರಾಧ್ಯಳ ಮನಸ್ಸಿನಲ್ಲಿ ಹೊಸದೊಂದು ಆಲೋಚನೆ ಮೂಡಿತು. ದೃಷ್ಟಿ ಇಲ್ಲದೆ ಈ ಜಗತ್ತಿನಲ್ಲಿ ಬದುಕುವುದು ಎಷ್ಟು ಕಷ್ಟ ಎಂದು ತಿಳಿಯಲು, ಆಕೆ ಕಣ್ಣು ಮುಚ್ಚಿಕೊಂಡು ಮನೆಯಲ್ಲಿ ನಡೆಯಲು ಪ್ರಯತ್ನಿಸಿದಳು. ಆಗ ಆಕೆ ಹಲವು ವಸ್ತುಗಳಿಗೆ ಡಿಕ್ಕಿ ಹೊಡೆದಳು. ಈ ಅನುಭವ ಆಕೆಗೆ ಅಂಧರ ದೈನಂದಿನ ಸವಾಲುಗಳನ್ನ ಅರ್ಥಮಾಡಿಕೊಳ್ಳಲು ಸಹಾಯಮಾಡಿತು.
ಇದರ ಜೊತೆಗೆ, ವಯಸ್ಸಾಗುತ್ತಿರುವ ತನ್ನ ಅಜ್ಜ-ಅಜ್ಜಿಯರ ಭವಿಷ್ಯದ ಬಗ್ಗೆಯೂ ಆರಾಧ್ಯಳಿಗೆ ಕಾಳಜಿ ಇತ್ತು. ಇವೆರಡಕ್ಕೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಕೆ ಸ್ಮಾರ್ಟ್ ಕೇನ್ ರಚನೆಗೆ ಮುಂದಾದಳು.
'ಸ್ತಂಭ' ಎಐ ಸ್ಮಾರ್ಟ್ ಕೇನ್ ವಿಶೇಷತೆಗಳು
ಒಂದು ವರ್ಷದ ಸತತ ಶ್ರಮದ ಫಲವಾಗಿ 'ಸ್ತಂಭ' ಎಐ ಸ್ಮಾರ್ಟ್ ಕೇನ್ ಸಿದ್ಧವಾಯಿತು. ಇದು ಕೇವಲ ಅಡೆತಡೆಗಳನ್ನ ಪತ್ತೆಹಚ್ಚುವ ಸಾಮಾನ್ಯ ಕೋಲು ಅಲ್ಲ, ಬದಲಾಗಿ ಇದೊಂದು ಅತ್ಯಾಧುನಿಕ ತಂತ್ರಜ್ಞಾನ ಸಾಧನ. ಅಡೆತಡೆಗಳು ಎದುರಾದಾಗ ಇದು ವೈಬ್ರೇಶನ್ ಮೂಲಕ ಬಳಕೆದಾರರನ್ನು ಎಚ್ಚರಿಸುತ್ತದೆ. ದಾರಿಯಲ್ಲಿರುವ ನಾಮಫಲಕಗಳನ್ನು ಓದಿ ಹೇಳುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ಬಳಕೆದಾರರ ನಾಡಿಮಿಡಿತ (pulse), ರಕ್ತದಲ್ಲಿನ ಆಮ್ಲಜನಕದ ಮಟ್ಟ (blood oxygen) ಮತ್ತು ದೇಹದ ಸಮತೋಲನವನ್ನ ಇದು ಟ್ರ್ಯಾಕ್ ಮಾಡುತ್ತದೆ. ಒಂದು ವೇಳೆ ಬಳಕೆದಾರರು ಆಯತಪ್ಪಿ ಬಿದ್ದರೆ, ತಕ್ಷಣವೇ ಕುಟುಂಬ ಸದಸ್ಯರಿಗೆ ಜಿಪಿಎಸ್ ಲೊಕೇಶನ್ ಸಮೇತ ಅಲರ್ಟ್ ಮೆಸೇಜ್ ಕಳುಹಿಸುತ್ತದೆ. ಇದು ಎಡವುವುದು ಮತ್ತು ಬೀಳುವುದರ ನಡುವಿನ ವ್ಯತ್ಯಾಸವನ್ನು ನಿಖರವಾಗಿ ಗುರುತಿಸುತ್ತದೆ ಹಾಗೂ ಮೊಬೈಲ್ ಫೋನ್ ಇಲ್ಲದೆಯೂ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.
ವಿಶ್ವಸಂಸ್ಥೆಯಲ್ಲಿ ಮನ್ನಣೆ
ಯಾವುದೇ ಹೊಸ ಆವಿಷ್ಕಾರದಂತೆ ಆರಾಧ್ಯಳ ಪ್ರಯೋಗದಲ್ಲೂ ಆರಂಭಿಕ ಹಿನ್ನಡೆಗಳಿದ್ದವು. ಸೆನ್ಸಾರ್‌ಗಳು ಕೈಕೊಟ್ಟವು. ಆದರೆ ಆಕೆ ಎದೆಗುಂದದೆ ಸತತವಾಗಿ ಪ್ರಯೋಗಗಳನ್ನ ಮುಂದುವರಿಸಿದಳು. ತಂದೆ ಮತ್ತು ಚಿಕ್ಕಪ್ಪನ ಮಾರ್ಗದರ್ಶನದಲ್ಲಿ, ತನ್ನ ಹೆತ್ತವರು, ಅಜ್ಜ-ಅಜ್ಜಿ ಮತ್ತು ಅಕ್ಕನ ಮೇಲೆ ಈ ಸ್ಮಾರ್ಟ್ ಕೇನ್ ಅನ್ನ ಪರೀಕ್ಷಿಸಿದಳು.
After watching Srikanth, the biopic of visually impaired industrialist Srikanth Bolla, Aaradhya Jain shut her eyes and tried walking around her house. She kept bumping into things. That experience became her first attempt at understanding what navigating the world without sight could feel like.Over the next year, she built STAMBHA, an AI-powered smart cane that does more than detect obstacles. It warns users through vibrations, reads signs aloud, answers questions in Hindi and English, tracks pulse, blood oxygen and balance, and alerts family members with the user’s location after a fall. It can even distinguish a stumble from a fall and works without a phone.The sensors malfunctioned. She kept experimenting until they worked. With her father and uncle beside her, she tested the prototype on her parents, grandparents and elder sister, conducting 16 test sessions that generated over 22,600 sensor records, more than 8,500 obstacle records and nearly 20,000 balance records.On September 25, she stood at the UN Conference Centre in Bangkok, presenting the cane she had designed, wired and programmed herself.But perhaps the most remarkable part is what STAMBHA could mean beyond that room.Comparable imported smart canes cost ₹80,000 or more. The components for Aaradhya’s prototype cost around ₹10,000. In a country where the population aged over 60 is expected to grow from about 149 million to 347 million by 2050, making assistive technology more accessible could matter enormously.#AaradhyaJain #AssistiveTechnology #ArtificialIntelligence #Accessibility #YoungInnovators[Aaradhya Jain AI smart cane invention, STAMBHA smart cane for elderly people, affordable assistive technology for visually impaired Indians, 11 year old Indian inventor presents at UN, AI cane that detects falls and tracks health, Noida schoolgirl builds accessible technology]
— The Better India (@thebetterindia) October 27, 2026
ಬರೋಬ್ಬರಿ 16 ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ, 22,600 ಕ್ಕೂ ಹೆಚ್ಚು ಸೆನ್ಸಾರ್ ರೆಕಾರ್ಡ್‌ಗಳು, 8,500 ಅಡೆತಡೆಗಳ ದಾಖಲೆಗಳು ಮತ್ತು 20,000 ಸಮತೋಲನ ದಾಖಲೆಗಳನ್ನು ಸಂಗ್ರಹಿಸಿದಳು.
ಈ ಕಠಿಣ ಶ್ರಮದ ಫಲವಾಗಿ, ಕಳೆದ ಸೆಪ್ಟೆಂಬರ್ 25 ರಂದು ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಆರಾಧ್ಯಳೇ ಖುದ್ದಾಗಿ ವಿನ್ಯಾಸಗೊಳಿಸಿ, ಪ್ರೋಗ್ರಾಮ್ ಮಾಡಿದ ಈ 'ಸ್ತಂಭ' ಸ್ಮಾರ್ಟ್ ಕೇನ್ ಅನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಳು.
ಭಾರತದ ವೃದ್ಧರಿಗೆ ವರದಾನವಾಗುವ ಸಾಧನ
ಮಾರುಕಟ್ಟೆಯಲ್ಲಿ ಲಭ್ಯವಿರುವ ಆಮದು ಮಾಡಿಕೊಂಡ ಸ್ಮಾರ್ಟ್ ಕೇನ್‌ಗಳ ಬೆಲೆ 80,000 ರೂ. ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಆದರೆ ಆರಾಧ್ಯಳ ಈ 'ಸ್ತಂಭ' ಸಾಧನದ ವೆಚ್ಚ ಕೇವಲ 10,000 ರೂ.ಗಳು. 2050 ರ ವೇಳೆಗೆ ಭಾರತದಲ್ಲಿ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ 149 ದಶಲಕ್ಷದಿಂದ 347 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಇಂತಹ ಸಂದರ್ಭದಲ್ಲಿ, ಅತ್ಯಂತ ಕಡಿಮೆ ವೆಚ್ಚದ ಈ ಆಧುನಿಕ ತಂತ್ರಜ್ಞಾನ ಭಾರತದ ದೃಷ್ಟಿಹೀನರಿಗೆ ಮತ್ತು ವೃದ್ಧರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. 11 ವರ್ಷದ ಬಾಲಕಿಯ ಈ ದೂರದೃಷ್ಟಿಯ ಚಿಂತನೆ ಹಾಗೂ ತಂತ್ರಜ್ಞಾನದ ಮೇಲಿನ ಹಿಡಿತ ನಿಜಕ್ಕೂ ಅದ್ಭುತವಾಗಿದೆ.


Click it and Unblock the Notifications
