ವಿಮಾನ ಪ್ರಯಾಣಿಕರಿಗೆ ಈ ಹತ್ತರಲ್ಲಿ ಒಂದು ಐಡಿ ಪ್ರೂಫ್ ಸಾಕು
ನವದೆಹಲಿ, ಅಕ್ಟೋಬರ್ 28: ವಿಮಾನ ಪ್ರಯಾಣಿಕರು ಇನ್ಮುಂದೆ ವಿಮಾನ ನಿಲ್ದಾಣ ಪ್ರವೇಶಿಸಲು ನಿರ್ದಿಷ್ಟವಾದ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯವಿರುವುದಿಲ್ಲ.
ಪ್ರಯಾಣಿಕರು ತಮ್ಮ ಐಡೆಂಟಿಟಿ ಖಚಿತಪಡಿಸಲು 'ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ' (ಬಿಸಿಎಎಸ್) ಹತ್ತು ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣ ಪ್ರವೇಶಿಸಲು ಈ ಹತ್ತು ಐಡಿ ಪ್ರೂಫ್ ಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿದರೆ ಸಾಕು. ನಿರ್ದಿಷ್ಟ ಬಿಸಿಎಎಸ್ ತಿಳಿಸಿರುವ ಹತ್ತು ಐಡಿ ಪ್ರೂಫ್ ಪಟ್ಟಿ ಈ ಕೆಳಗಿನಂತಿದೆ.

1. ಪಾಸ್ ಪೋರ್ಟ್
2. ಚುನಾವಣೆ ಗುರುತಿನ ಚೀಟಿ(Voter ID)
3. ಆಧಾರ್ ಕಾರ್ಡ್
4. ಪ್ಯಾನ್ ಕಾರ್ಡ್.
5. ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್)
6. ಸರ್ವೀಸ್ ಐಡಿ
7. ಸ್ಟೂಡೆಂಟ್ ಐಡಿ ಕಾರ್ಡ್
8. ಭಾವಚಿತ್ರವಿರುವ ಬ್ಯಾಂಕ್ ಪಾಸ್ ಬುಕ್
9. ಫೋಟೋ ಹೊಂದಿರುವ ಪಿಂಚಣಿ ಕಾರ್ಡ್ ಅಥವಾ ಪಿಂಚಣಿ ದಾಖಲೆಗಳು
10. ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರ.












Click it and Unblock the Notifications