ಜಮ್ಮು ಮತ್ತು ಕಾಶ್ಮೀರ ಎನ್ಕೌಂಟರ್, ಓರ್ವ ಉಗ್ರ, 3 ನಾಗರೀಕರ ಸಾವು

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಓರ್ವ ಉಗ್ರಗಾಮಿ ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.

ಬೆಂಗಳೂರು, ಮಾರ್ಚ್ 28: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಓರ್ವ ಉಗ್ರಗಾಮಿ ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.

ಎನ್ಕೌಂಟರ್ ವೇಳೆ ಸ್ಥಳೀಯರು ರಸ್ತೆಗೆ ಬಂದು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಆರಂಭಿಸಿದ್ದರು. ಇದರಿಂದ ಸ್ಥಳೀಯರ ಮೇಲೆ ಪೊಲೀಸರು ಪೆಲ್ಲೆಟ್ ಗನ್ ಸಿಡಿಸಿದ್ದು ಮೂವರು ನಾಗರೀಕರು ಸಾವನ್ನಪ್ಪಿದ್ದಾರೆ. ಪೆಲ್ಲೆಟ್ ಗನ್ ದಾಳಿಗೆ ಸುಮಾರು 17 ಜನ ಸಾವನ್ನಪ್ಪಿದ್ದಾರೆ.[ಯೋಗಿ ಜಿಂದಾಬಾದ್ ಎಂದವನ ಹತ್ಯೆ ಮಾಡಿದ ಎಸ್ಪಿ ನಾಯಕ]

1 terrorist, 3 civilians killed in encounter at J&K

ಮಂಗಳವಾರ ಮುಂಜಾನೆ ಆರಂಭವಾದ ಎನ್ಕೌಂಟರ್ ಸಂಜೆ ವೇಳೆಗೆ ಕೊನೆಗೊಂಡಿದೆ. ಎನ್ಕೌಂಟರಿನಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಇಲ್ಲಿನ ಮನೆಯಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ದಾಳಿ ನಡೆಸಿದ್ದವು.

ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ಆರಂಭಿಸಿದ್ದರೆ, ರಸ್ತೆಗೆ ಬಂದು ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಲು ಆರಂಭಿಸಿದ್ದರು. ಇವೆಲ್ಲದರ ಮಧ್ಯೆ ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಸಫಲವಾಗಿವೆ.[ಉತ್ತರಪ್ರದೇಶದ ರೈಲ್ವೆ ಹಳಿ ಬಳಿ ಬಾಂಬ್ ಸ್ಫೋಟ]

ಎರಡು ದಿನಗಳ ಹಿಂದೆ ಇಬ್ಬರು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರನ್ನು ಪುಲ್ವಾಮಾದಲ್ಲಿ ಹೊಡೆದುರುಳಿಸಲಾಗಿತ್ತು. ಇದಾದ ಬೆನ್ನಿಗೆ ಇದೀಗ ಬುದ್ಗಾಮ್ ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+