2022ರಲ್ಲಿ ಭಾರತದಲ್ಲಿ 4.61 ಲಕ್ಷ ಅಪಘಾತ: ಪ್ರಾಣ ಕಳೆದುಕೊಂಡವರ ಸಂಖ್ಯೆ ಎಷ್ಟು?
ಭಾರತದಲ್ಲಿ 2022 ರಲ್ಲಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು ಒಟ್ಟು 1,68,491 ಜನ ಪ್ರಾಣ ಕಳೆದುಕೊಂಡಿದ್ದಾರೆ, ಆದರೆ 4,43,366 ಜನರು ಗಾಯಗೊಂಡಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಮಾಹಿತಿ ನೀಡಿದೆ.
'ಭಾರತದಲ್ಲಿ ರಸ್ತೆ ಅಪಘಾತಗಳು - 2022' ಎಂಬ ಶೀರ್ಷಿಕೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. 2021ಕ್ಕೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ 11.9 ಪ್ರತಿಶತ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಸಾವಿನ ಸಂಖ್ಯೆಯಲ್ಲಿ 9.4 ಪ್ರತಿಶತ ಹೆಚ್ಚಳವನ್ನು ಸೂಚಿಸಿದೆ. 2022 ರಲ್ಲಿ ಗಾಯಗೊಂಡವರ ಸಂಖ್ಯೆಯಲ್ಲಿ ಶೇಕಡಾ 15.3 ರಷ್ಟು ಏರಿಕೆ ಕಂಡುಬಂದಿದೆ.

ವರದಿಯ ಪ್ರಕಾರ, 2022 ರಲ್ಲಿ, ದೇಶದಲ್ಲಿ ಒಟ್ಟು 4,61,312 ಅಪಘಾತಗಳು ದಾಖಲಾಗಿವೆ, ಅದರಲ್ಲಿ 1,51,997 (ಶೇ. 32.9) ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎನ್‌ಎಚ್) ಗಳಲ್ಲಿ ಸಂಭವಿಸಿವೆ. 1,06,682 (ಶೇ. 23.1) ಅಪಘಾತಗಳು ರಾಜ್ಯ ಹೆದ್ದಾರಿಗಳಲ್ಲಿ (ಎಸ್‌ಎಚ್) ಸಂಭವಿಸಿವೆ. ಮತ್ತು ಉಳಿದ 2,02,633 (ಶೇ. 43.9) ಅಪಘಾತಗಳು ಇತರ ರಸ್ತೆಗಳಲ್ಲಿ ಸಂಭವಿಸಿವೆ.
"2022 ರಲ್ಲಿ ವರದಿಯಾದ ಒಟ್ಟು 1,68,491 ಸಾವುಗಳಲ್ಲಿ 61,038 (ಶೇ. 36.2) ರಾಷ್ಟ್ರೀಯ ಹೆದ್ದಾರಿಗಳಲ್ಲಿ, 41,012 (ಶೇ. 24.3) ರಾಜ್ಯ ಹೆದ್ದಾರಿಗಳಲ್ಲಿ ಮತ್ತು 66,441 (ಶೇ. 39.4) ಇತರ ರಸ್ತೆಗಳಲ್ಲಿ ಸಂಭವಿಸಿದೆ" ಎಂದು ವರದಿಯಲ್ಲಿ ಹೇಳಿದೆ.
ಏಷ್ಯಾ ಪೆಸಿಫಿಕ್ ರಸ್ತೆ ಅಪಘಾತದ ಅಡಿಯಲ್ಲಿ ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಮತ್ತು ಪೆಸಿಫಿಕ್ (UNESCAP) ಒದಗಿಸಿದ ಪ್ರಮಾಣೀಕೃತ ಸ್ವರೂಪಗಳಲ್ಲಿ ಕ್ಯಾಲೆಂಡರ್ ವರ್ಷದ ಆಧಾರದ ಮೇಲೆ ರಾಜ್ಯಗಳು/ ಕೇಂದ್ರಾಡಳಿಯ ಪ್ರದೇಶಗಳ ಪೊಲೀಸ್ ಇಲಾಖೆಗಳಿಂದ ಪಡೆದ ಡೇಟಾ/ಮಾಹಿತಿಯನ್ನು ವಾರ್ಷಿಕ ವರದಿ ಆಧರಿಸಿದೆ.












Click it and Unblock the Notifications