ಸಿಬಿಐನಲ್ಲಿ 1,673 ಖಾಲಿ ಹುದ್ದೆಗಳಿವೆ: ಲೋಕಸಭೆಯಲ್ಲಿ ಸರ್ಕಾರದ ಹೇಳಿಕೆ

ನವದೆಹಲಿ, ಡಿ. 14: ಕೇಂದ್ರೀಯ ತನಿಖಾ ದಳದಲ್ಲಿ 1,673 ಹುದ್ದೆಗಳು ಖಾಲಿ ಇವೆ ಎಂದು ಲೋಕಸಭೆಗೆ ಬುಧವಾರ ಮಾಹಿತಿ ನೀಡಲಾಗಿದೆ.

ನವೆಂಬರ್ 30ರ ಮಾಹಿತಿಯಂತೆ ಸಿಬಿಐನಲ್ಲಿ ಮಂಜೂರಾದ ಸಿಬ್ಬಂದಿ ಸಂಖ್ಯೆ 7,295. ಈಗ ಖಾಲಿ ಇರುವ ಹುದ್ದೆಗಳ ಸಂಖ್ಯೆ 1,673 ಆಗಿದೆ. ವಿವಿಧ ವರ್ಗಗಳಲ್ಲಿ ಮಂಜೂರಾದ 128 ಹೆಚ್ಚುವರಿ ಹುದ್ದೆಗಳನ್ನು ಒಳಗೊಂಡಂತೆ ಜೂನ್ 29, 2022 ರಂದು ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಖಾಲಿ ಹುದ್ದೆಗಳ ಸಂಭವ ಮತ್ತು ಅವುಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಲಿಖಿತ ಉತ್ತರದಲ್ಲಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.

1,673 Vacant Posts In Central Bureau of Investigation

ಈ ವೇಳೆ ಅಧಿಕಾರಿಗಳ ಸೇರ್ಪಡೆ, ಬಡ್ತಿ, ನಿವೃತ್ತಿ ಮತ್ತು ವಾಪಸಾತಿಗೆ ಅನುಗುಣವಾಗಿ ಸಂಖ್ಯೆಯು ಬದಲಾಗುತ್ತಲೇ ಇರುತ್ತದೆ ಎಂದು ಸಚಿವರು ಹೇಳಿದ್ದು, ಎಲ್ಲಾ ಶ್ರೇಣಿಯ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದಕ್ಕೆ ಪೂರ್ವಭಾವಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

"ಸಿಬಿಐನಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಮತ್ತು ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಹೆಸರುಗಳನ್ನು ಸೂಚಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಗೃಹ ಸಚಿವಾಲಯ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಸಿಬಿಐ ವಿನಂತಿಸುತ್ತದೆ" ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇನ್ನು, 2021 ರಲ್ಲಿ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಆಯ್ಕೆಯಾದ ತೊಂಬತ್ತೊಂದು ಅಭ್ಯರ್ಥಿಗಳಿಗೆ ಯಾವುದೇ ಸರ್ಕಾರಿ ಸೇವೆಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ಬುಧವಾರ ತಿಳಿಸಿದೆ.

ನಾಗರಿಕ ಸೇವಾ ಪರೀಕ್ಷೆ 2021ರ ಆಧಾರದ ಮೇಲೆ ಯುಪಿಎಸ್‌ಸಿ ಶಿಫಾರಸು ಮಾಡಿದ 748 ಅಭ್ಯರ್ಥಿಗಳಲ್ಲಿ, 91 ಅಭ್ಯರ್ಥಿಗಳನ್ನು ಡಿಸೆಂಬರ್ 7, 2022 ರವರೆಗೆ ಯಾವುದೇ ಸೇವೆಗೆ ನಿಯೋಜಿಸಲಾಗಲಿಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+