10ರಿಂದ 17 ವಯಸ್ಸಿನ 1.58 ಕೋಟಿ ಮಕ್ಕಳು ಮಾದಕ ವ್ಯಸನಿಗಳು: ಕೇಂದ್ರ ಸರ್ಕಾರ

ನವದೆಹಲಿ, ಡಿಸೆಂಬರ್‌ 15: ಭಾರತ ದೇಶದಲ್ಲಿ 10 ರಿಂದ 17 ವರ್ಷದೊಳಗಿನ 1.58 ಕೋಟಿ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ನಡೆಸಿದ ಸಮೀಕ್ಷೆಯ ಡೇಟಾವನ್ನು ಉಲ್ಲೇಖಿಸಿ, ಆಲ್ಕೋಹಾಲ್ ಅನ್ನು ಭಾರತೀಯರು ಸಾಮಾನ್ಯವಾಗಿ ಬಳಸುವ ಸೈಕೋಆಕ್ಟಿವ್ ವಸ್ತುವಾಗಿದ್ದು, ಇದರ ನಂತರ ಗಾಂಜಾ ಮತ್ತು ಒಪಿಯಾಡ್ಸ್ ಬಳಕೆ ಜಾಸ್ತಿ ಇದೆ ಎಂದು ಹೇಳಿದೆ. ದೇಶದಲ್ಲಿ ಸುಮಾರು 16 ಕೋಟಿ ಜನರು ಆಲ್ಕೋಹಾಲ್ ಸೇವಿಸುತ್ತಾರೆ. 5.7 ಕೋಟಿಗೂ ಹೆಚ್ಚು ವ್ಯಕ್ತಿಗಳು ಹಾನಿಕಾರಕ ಅಥವಾ ಅವಲಂಬಿತ ಆಲ್ಕೊಹಾಲ್ ಸೇವನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಕೇಂದ್ರ ತಿಳಿಸಿದೆ.

3.1 ಕೋಟಿ ವ್ಯಕ್ತಿಗಳು ಗಾಂಜಾ ಉತ್ಪನ್ನಗಳನ್ನು ಬಳಸುತ್ತಾರೆ. ಸುಮಾರು 25 ಲಕ್ಷ ಜನರು ಗಾಂಜಾ ಅವಲಂಬನೆಯಿಂದ ಬಳಲುತ್ತಿದ್ದಾರೆ. 2.26 ಕೋಟಿ ಜನರು ಒಪಿಯಾಡ್‌ಗಳನ್ನು ಬಳಸುತ್ತಾರೆ. ಸರಿಸುಮಾರು 77 ಲಕ್ಷ ವ್ಯಕ್ತಿಗಳಿಗೆ ಒಪಿಯಾಡ್ ಬಳಕೆಯ ಸಮಸ್ಯೆಗಳಿಗೆ ಸಹಾಯದ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠಕ್ಕೆ, 2016ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಭಾರತದಲ್ಲಿನ ಮಾದಕ ವಸ್ತುವಿನ ಬಳಕೆಯ ಪ್ರಮಾಣ ಮತ್ತು ಮಾದರಿಯ ಕುರಿತು ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿದೆ ಎಂದು ತಿಳಿಸಿದರು.

1.58 crore children aged 10 to 17 are drug addicts in India: Central Govt

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಡಿಸೆಂಬರ್ 14, 2016 ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಸರಿಸಿ, ಮಾದಕವಸ್ತು ಬಳಕೆಯ ಬಗ್ಗೆ ರಾಷ್ಟ್ರೀಯ ಡೇಟಾಬೇಸ್ ರಚಿಸಲು ಈ ರೀತಿಯ ಮೊದಲ ರಾಷ್ಟ್ರೀಯ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು. ಎನ್‌ಜಿಒ ಬಚ್‌ಪನ್ ಬಚಾವೋ ಆಂದೋಲನ್' ಪರವಾಗಿ ಹಾಜರಾದ ಹಿರಿಯ ವಕೀಲ ಎಚ್‌ಎಸ್ ಫೂಲ್ಕಾ, ಸರ್ಕಾರವು 2016 ರಲ್ಲಿ ನೀಡಲಾದ ಉನ್ನತ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸುತ್ತಿಲ್ಲ ಮತ್ತು ಮಾದಕ ದ್ರವ್ಯ ಸೇವನೆಯನ್ನು ಎದುರಿಸಲು ತನ್ನ ರಾಷ್ಟ್ರೀಯ ಯೋಜನೆಯಲ್ಲಿ ಎಲ್ಲಾ ಅಂಶಗಳನ್ನು ಒಳಗೊಂಡಿಲ್ಲ ಎಂದು ಪ್ರತಿಪಾದಿಸಿದರು.

1.58 crore children aged 10 to 17 are drug addicts in India: Central Govt

ಪೀಠವು ಹಿರಿಯ ವಕೀಲ ಎಚ್‌ಎಸ್ ಫೂಲ್ಕಾ ಅವರು ಆದೇಶವನ್ನು ಅನುಸರಿಸದಿರುವಿಕೆಯಿಂದ ನೊಂದಿದ್ದೀರಾ ಅಥವಾ ಯೋಜನೆಯಲ್ಲಿ ಹೆಚ್ಚಿನದನ್ನು ಮಾಡಬಹುದೇ ಎಂದು ಕೇಳಿತು. ಅದಕ್ಕೆ ರಾಷ್ಟ್ರೀಯ ಯೋಜನೆಯನ್ನು ಅನುಸರಿಸಿದ್ದರೂ ಹೆಚ್ಚಿನ ಅಂಶಗಳನ್ನು ಒಳಗೊಳ್ಳಬಹುದಿತ್ತು ಎಂದು ಫೂಲ್ಕಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+