ಮಗನನ್ನು ಕೊಂದು ದಿನಕ್ಕೊಂದು ಅಂಗಾಂಗ ಕತ್ತರಿಸಿದ ತಾಯಿ

Posted By: Prithviraj
Subscribe to Oneindia Kannada

ಗುಂಟೂರು, ಅಕ್ಟೋಬರ್, 21: ಗುಂಟೂರಿನಲ್ಲಿ ಗುರುವಾರ ಬೆಳಕಿಗೆ ಬಂದ ತಾಯಿಯೇ ಹೆತ್ತ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ ಪ್ರಕರಣದ ಕುರಿತು ಪೊಲೀಸರು ಬಂಧಿತ ಮಹಿಳೆಯಿಂದ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಮಗನನ್ನು ಕೊಲೆ ಮಾಡಿರುವ ಮಹಿಳೆ ಅಂಜನಾ ದೇವಿ ಅವರು ದೀರ್ಘಕಾಲಿಕ ಮಾನಸಿಕ ರೋಗಕ್ಕೆ ಗುರಿಯಾಗಿದ್ದಳು. ಆಸ್ತಿಯಲ್ಲಿ ಭಾಗಬೇಕೆಂದು ಮಗ ಕೇಳಿದ್ದಕ್ಕೆ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. [ಹೆತ್ತ ಮಗನನ್ನೇ ತುಂಡು ತುಂಡಾಗಿ ಕತ್ತರಿಸಿದ ತಾಯಿ]

Women kills her son and chops body in to pieces

ಆರು ದಿನದ ಹಿಂದೆಯೇ ಮಗನನ್ನು ಕೊಲೆ ಮಾಡಿದ್ದ ಅಂಜನಾದೇವಿ, ಮಗನ ಮೃತ ದೇಹವನ್ನು ಗೋಣಿಚೀಲದಲ್ಲಿಟ್ಟು ಮನೆಯಲ್ಲೇ ಬಚ್ಚಿಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗನ ಮೇಲೆ ವಿಪರೀತ ಕೋಪ ಹೊಂದಿದ್ದ ಮಹಿಳೆ ಗೋಣಿ ಚೀಲದಿಂದ ಮೃತದೇಹ ತೆಗೆದು ದಿನಕ್ಕೊಂದು ಭಾಗವನ್ನು ಕತ್ತರಿಸಿ ಬೇರ್ಪಡಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. [ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪೊಲೀಸರ ಹೊಸ ಅವಾಂತರ?]

ಎರಡು ದಿನದ (ಮಂಗಳವಾರ ಅ.18) ಹಿಂದೆ ಮೃತ ದೇಹದಿಂದ ಕೈಗಳನ್ನು ಬೇರ್ಪಡಿಸಿದ್ದ ಮಹಿಳೆ, ಬುಧವಾರ ರಾತ್ರಿ ತಲೆ ಕತ್ತರಿಸುವಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮದುವೆಯಾಗಿದ್ದ ಕೋಟೇಶ್ವರ್ ರಾವ್ ತನ್ನ ಪತ್ನಿಯನ್ನು ತವರಿನಲ್ಲಿ ಬಿಟ್ಟು ಅಕ್ಟೋಬರ್ 12ರಂದು ಗುಂಟೂರು ಜಿಲ್ಲೆಯ ಕಾಕಮಾನು ತಾಲ್ಲೂಕಿನ ಬೋಡಿಪಾಲೆಂ ಗ್ರಾಮಕ್ಕೆ ಬಂದಿದ್ದ. [ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!]

ತಾಯಿಯ ಹೆಸರಿನಲ್ಲಿದ್ದ 3.23 ಎಕರೆ ಜಮೀನನ್ನು ಮಾರಿ ಹಣ ನೀಡಬೇಕೆಂದು ಒತ್ತಾಯಿಸಿದ್ದ, ಇದಕ್ಕೆ ತಾಯಿ ನಿರಾಕರಿಸಿದ್ದರಿಂದ ತಾಯಿಯೊಂದಿಗೆ ಜಗಳಮಾಡಿಕೊಂಡಿದ್ದ ಎಂದು ಹೇಳಲಾಗಿದೆ.

ಮಗನೊಂದಿಗೆ ಆಸ್ತಿವಿವಾದವಾಗಿ ಜಗಳ ಮಾಡಿಕೊಂಡ ವಿಷಯವನ್ನು ಅದೇ ಗ್ರಾಮದಲ್ಲಿ ವಾಸವಿರುವ ತನ್ನ ತಮ್ಮ ನಾಗೇಶ್ವರ್ ರಾವ್ ಅವರಿಗೆ ಮತ್ತು ಮಗಳು ನಾಗಲಕ್ಷ್ಮೀಗೆ ಅಂಜನಾದೇವಿ ತಿಳಿಸಿದ್ದಾಳೆ.

ಮೂವರು ಸೇರಿಕೊಂಡು ಕೋಟೆಶ್ವರ್ ರಾವ್ ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

ಪ್ಲಾನ್ ಹಾಕಿದ್ದು ಹೀಗೆ:

ಅಕ್ಟೋಬರ್ 13ರ ರಾತ್ರಿ ಅಂಜನಾದೇವಿ, ನಾಗೇಶ್ವರ್ ರಾವ್, ನಾಗಲಕ್ಷ್ಮಿ ಸೇರಿಕೊಂಡು ಕೋಟೇಶ್ವರ್ ತಲೆ ಮೇಲೆ ಬಲವಾಗಿ ಹೊಡೆದು ಕೊಂದಿದ್ದಾರೆ. ನಂತರ ಮೃತ ದೇಹವನ್ನು ಗೋಣಿಚೀಲದಲ್ಲಿ ಇಟ್ಟು ಮನೆಯಲ್ಲಿ ಬಚ್ಚಿಟ್ಟಿದ್ದಾರೆ.

ಮೂರು ದಿನದಿಂದ ಗಂಡನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಕೋಟೇಶ್ವರ್ ಪತ್ನಿ ಶೈಲಜ ಬೋಡಿಪಾಲೆಂಗೆ ಬಂದು ಅತ್ತೆ ಬಳಿ ಕೇಳಿದ್ದಾಳೆ. ನಿನ್ನ ಗಂಡ ನೆಲ್ಲೂರಿಗೆ ಹೋಗಿದ್ದಾನೆ. ಹದಿನೈದು ದಿನದ ನಂತರ ಬರ್ತಾನೆ ಎಂದು ಅಂಜನಾದೇವಿ ಹೇಳಿದ್ದಾಳೆ.

ಯಜ್ಞಗಳ ಬರುತ್ತಿದೆ ವಾಸನೆ...

ಮನೆಯಲ್ಲಿ ದುರ್ವಾಸನೆ ಬರುತ್ತಿದೆ ಏಕೆ ಎಂದು ಶೈಲಜ ಕೇಳಿದ್ದಾಳೆ. ಆಗ ಅಂಜನಾದೇವಿ "ಮನೆಯೊಳಕ್ಕೆ ಯಜ್ಞಗಳು ಬಂದು ಸೇರಿಕೊಂಡು ಬಿಟ್ಟಿವೆ ಆದ್ದರಿಂದಲೇ ದುರ್ವಾಸನೆ ಬರುತ್ತಿದೆ ಎಂದು ಪ್ರಕರಣ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾಳೆ.

ಸೊಸೆ ಮನೆಯಲ್ಲೇ ಇದ್ದರೆ ಪ್ರಕರಣ ಬೆಳಕಿಗೆ ಬರುತ್ತದೆ ಎಂದು ಭಾವಿಸಿ ಸೊಸೆ ಶೈಲಜಳನ್ನು ತವರು ಮನೆಗೆ ಕಳುಹಿಸಿಬಿಟ್ಟಿದ್ದಾಳೆ. ಮಗನ ಫೋಟೊಗಳು, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಗಳನ್ನು ಸುಟ್ಟುಬಿಟ್ಟಿದ್ದಾಳೆ.

ಮಾನಸಿಕ ರೋಗಿಯಾಗಿ ಉನ್ಮಾದ ಹೆಚ್ಚಾದುದರಿಂದ ಗೋಣಿಚೀಲದಿಂದ ಮೃತ ದೇಹ ತೆಗೆದು ಒಂದೊಂದೇ ಅಂಗಾಂಗವನ್ನು ಬೇರ್ಪಡಿಸುತ್ತಾ ಬಂದಿದ್ದಾಳೆ. ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ನಾಗೇಶ್ವರ್ ಮತ್ತು ನಾಗಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A woman Anjana Devi killed her son Koteswar Rao and chopped his body into peices in guntur district of Andhra Pradesh.
Please Wait while comments are loading...