ಹೈದರಾಬಾದ್; ಜಿಎಚ್‍ಎಂಸಿ ಚುನಾವಣೆಗೆ ಮತದಾನ ಆರಂಭ

ಹೈದರಾಬಾದ್, ಡಿಸೆಂಬರ್ 01 : ತೀವ್ರ ಕುತೂಹಲ ಕೆರಳಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

150 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, 1,122 ಅಭ್ಯರ್ಥಿಗಳು ಜಿಎಚ್‍ಎಂಸಿ ಚುನಾವಣಾ ಕಣದಲ್ಲಿದ್ದಾರೆ. ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ಮಾಡಲು ಅವಕಾಶವಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಒಟ್ಟು 74,67,256 ಮತದಾರರು 1,122 ಅಭ್ಯರ್ಥಿಗಳ ಭವಿಷ್ಯವನ್ನು ತೀರ್ಮಾನಿಸಲಿದ್ದಾರೆ. ಇವರಲ್ಲಿ ಪುರುಷ ಮತದಾರರು 38,89,637 ಮತ್ತು ಮಹಿಳೆಯರು 35,76,941. ಇತರರು 678. ಮತಎಣಿಕೆ ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.

GHMC Polls: 1,122 candidates in fray in Hyderabad Municipal Corporation

ಜಿಎಚ್‍ಎಂಸಿ ಚುನಾವಣೆ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ಸಂಸದರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರವನ್ನು ನಡೆಸಿದ್ದಾರೆ.

ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕೆ. ಚಂದ್ರಶೇಖರರಾವ್ ಹೈದರಾಬಾದ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್, ಅಸಾದುದ್ದೀನ್ ಓವೈಸಿ ಸಹ ಚುನಾವಣೆಗಾಗಿ ಭರ್ಜರಿ ಪ್ರಚಾರವನ್ನು ಮಾಡಿದ್ದಾರೆ.

GHMC Polls: 1,122 candidates in fray in Hyderabad Municipal Corporation

ಕಳೆದ ಚುನಾವಣೆಯಲ್ಲಿ ಟಿಆರ್‌ಎಸ್ 99 ಸ್ಥಾನಗಳಲ್ಲಿ ಗೆದ್ದು ಪಾಲಿಕೆಯ ಅಧಿಕಾರ ಹಿಡಿದಿತ್ತು. ಅಸಾದುದ್ದೀನ್ ಓವೈಸಿ ಪಕ್ಷ 44 ಸ್ಥಾನವನ್ನು ಗೆದ್ದಿತ್ತು. ಬಿಜೆಪಿ 4 ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿದಿತ್ತು.

2018ರ ಚುನಾವಣೆಯಲ್ಲಿ ಗೆದ್ದ ಟಿಆರ್‌ಎಸ್ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 4 ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ನವೆಂಬರ್ 10ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆದ್ದರಿಂದ, ಜಿಎಚ್‌ಎಂಸಿ ಚುನಾವಣೆಯನ್ನು ಸಹ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+