ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ
ಹೈದರಾಬಾದ್, ಮಾರ್ಚ್ 19 : ದೇಶ-ವಿದೇಶದಲ್ಲಿ ಕೊರೊನಾ ಆತಂಕವನ್ನು ಸೃಷ್ಟಿಮಾಡಿದೆ. ಮಾರಣಾಂತಿಕ ವೈರಸ್ ಹರಡದಂತೆ ತಡೆಯುವುದು ಹೇಗೆ? ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸದಾ ಜನರ ನಡುವೆ ಇರುವ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ತೆಲಂಗಾಣ ರಾಜ್ಯದ ರಾಚಕೊಂಡ ಸಂಚಾರಿ ಪೊಲೀಸರು ಬಿಸಿಲನ್ನು ಲೆಕ್ಕಿಸದೇ ರಸ್ತೆಯಲ್ಲಿಯೇ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಿಗ್ನಲ್‌ನಲ್ಲಿ ಕೆಂಪು ದೀಪಗಳು ಬಿದ್ದಾಗ ಸಾಲಾಗಿ ನಿಲ್ಲುವ ಪೊಲೀಸರು ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 6 ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ವೈರಸ್ ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೊಲೀಸರು ಸಹ ಜೋಡಿಸಿದ್ದಾರೆ. ಹೇಗೆ ಕೈಗಳನ್ನು ತೊಳೆಯಬೇಕು? ಎಂದು ಜನರಿಗೆ ತಿಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಾಚಕೊಂಡ ಪೊಲೀಸರು ಜಾಗೃತಿ ಮೂಡಿಸುವ ವಿಡಿಯೋ ವೈರಲ್ ಆಗಿದೆ. ಸಿಗ್ನಲ್‌ನಲ್ಲಿ ಸಾಲಾಗಿ ನಿಲ್ಲುವ ಸಂಚಾರಿ ಪೊಲೀಸರು ಹಂತ-ಹಂತವಾಗಿ ಕೈಗಳನ್ನು ಹೇಗೆ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಮನವಿ ಮಾಡಿವೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅರಿವನ್ನು ಮೂಡಿಸಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ.
#WATCH Hyderabad: Rachakonda Police promoting the washing of hands, as part of awareness drive against #Coronavirus. (Video Source: Rachakonda Police) #Telangana pic.twitter.com/90BpdDjgNP
— ANI (@ANI) March 19, 2020












Click it and Unblock the Notifications