ಹೈದರಾಬಾದ್ : ಬಂತು ಬಿಸಿಲ ಬೇಗೆ ತಣಿಸುವ ಎ.ಸಿ ಹೆಲ್ಮೆಟ್

ಹೈದರಾಬಾದ್, ಫೆಬ್ರವರಿ 26 : ನಾವು ಬೇಸಿಗೆ ಆರಂಭದಲ್ಲಿದ್ದೇವೆ. ಬಿಸಿಲಿನ ಝಳದಲ್ಲಿ ಹೆಲ್ಮೆಟ್ ಧರಿಸುವುದೇ ಕಷ್ಟಕರವಾಗಿದೆ. ಇಂತಹ ತೊಂದರೆಯನ್ನು ದೂರ ಮಾಡಲು ಹೈದರಾಬಾದ್ ನ ಸ್ಟಾರ್ಟ್ ಅಪ್ ಕಂಪನಿಯೊಂದರ ಮೂವರು ಟೆಕ್ಕಿಗಳು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಸದ್ಯಕ್ಕೆ ಇದನ್ನು ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈಗ ದ್ವಿಚಕ್ರ ವಾಹನ ಸವಾರರಿಗೂ ಹೊಂದುವಂತೆ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ನಡೆಯುತ್ತಿದೆ.

ಹೈದರಾಬಾದ್‌ನ ಜಾರ್ಶ್ ನವೋದ್ಯಮವೊಂದು ಈ ಹೆಲ್ಮೆಟ್ ಅನ್ನು ಸಂಶೋಧಿಸಿದ್ದು, ರೀಚಾರ್ಜ್‌ ಮಾಡುವಂಥ ಬ್ಯಾಟರಿಯನ್ನು ಇದು ಒಳಗೊಂಡಿದೆ. ಈ ಬ್ಯಾಟರಿ ಬಳಸಿ 2 ರಿಂದ 8 ಗಂಟೆ ಹೆಲ್ಮೆಟ್ ಬಳಸಬಹುದಿದ್ದು, ತಂಪಿನ ಹಿತಾನುಭವವನ್ನು ಹೆಲ್ಮೆಟ್ ಮೂಲಕ ಬಳಕೆದಾರರು ಪಡೆಯಬಹುದಾಗಿದೆ.

To beat the Heat, Hyderabad Techies have Designed AC Helmets

ಈ ಚಾರ್ಜರ್ ಅನ್ನು ಮೊಬೈಲ್‌ ಫೋನ್‌ನಂತೆಯೇ ಚಾರ್ಜ್‌ ಮಾಡಬಹುದು. ಸುಲಭವಾಗಿ ಧರಿಸಬಹುದು, ಎಲ್ಲಕ್ಕೂ ಮುಖ್ಯವಾಗಿ ಹಗುರವಾಗಿದೆ. ಅಲ್ಲದೇ, ಕೂದಲು ಉದುರುವುದೂ ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಹೆಲ್ಮೆಟ್ ನ ದರ 5 ಸಾವಿರ ರೂ ಇರಲಿದೆ. ಮೂವರು ಮೆಕಾನಿಕಲ್ ಎಂಜಿನಿಯರ್ ಗಳಾದ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಅವರು ಈ ಹೆಲ್ಮೆಟ್ ಸಂಶೋಧಿಸಿದ್ದಾರೆ.

ನೌಕಾಪಡೆಯ ಕಮಾಂಡೊಗಳಿಗೆ ಮತ್ತು ಕೆಲವು ಕಂಪನಿಗಳಿಗೆ ನೀಡಲಾಗಿತ್ತು. ಟ್ರಾಫಿಕ್‌ ಪೊಲೀಸರಿಗೂ ವಿತರಿಸಲಾಗಿತ್ತು. ಬಳಕೆದಾರರ ಅಭಿಪ್ರಾಯ ಆಧರಿಸಿ, ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿದ್ದೇವೆ. ವಿನ್ಯಾಸದಲ್ಲೂ ಬದಲಾವಣೆ ಮಾಡಿದ್ದೇವೆ. ಈಗ 3 ಸಾವಿರ ಹೆಲ್ಮೆಟ ‌ಗಳನ್ನು ಉತ್ಪಾದಿಸಿದ್ದು, ಬಳಕೆದಾರರಿಗೆ ಹಿತ ನೀಡಲಿವೆ ಎಂದು ಕಂಪನಿ ಸಿಇಒ ಕೌಸ್ತುಬ್ ಕೌಂಡಿನ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+