ತೆಲಂಗಾಣ; ಗೃಹ ಸಚಿವರಿಗೆ ಕೋವಿಡ್ ಸೋಂಕು, ಆಸ್ಪತ್ರೆಗೆ ದಾಖಲು

ಹೈದರಾಬಾದ್, ಜೂನ್ 29 : ತೆಲಂಗಾಣದ ಗೃಹ ಸಚಿವ ಮಹಮೂದ್ ಅಲಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬುಧವಾರ ಸಚಿವರ ಭದ್ರತಾ ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾಗಿತ್ತು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೈದರಾಬಾದ್‌ನ ಜ್ಯುಬ್ಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಗೆ ಭಾನುವಾರ ರಾತ್ರಿ ಗೃಹ ಸಚಿವರನ್ನು ದಾಖಲು ಮಾಡಲಾಗಿದೆ. ತೆಲಂಗಾಣದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ ಮೊದಲ ಸಚಿವರು ಇವರಾಗಿದ್ದಾರೆ.

ಬುಧವಾರ ಸಚಿವ ಮಹಮೂದ್ ಅಲಿ ಐವರು ಭದ್ರತಾ ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂನ್ 25ರಂದು ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.

Telangana Home Minister Tested Posotive For Coronavirus

ತೆಲಂಗಾಣ ರಾಜ್ಯದಲ್ಲಿ ಇದುವರೆಗೂ ಟಿಆರ್‌ಎಸ್ ಪಕ್ಷಕ್ಕೆ ಸೇರಿದ ಮೂವರು ಶಾಸಕರಿಗೆ ಕೊರೊನಾ ಸೋಂಕು ತಗುಲಿತ್ತು. ಸಚಿವರೊಬ್ಬರಿಗೆ ಸೋಂಕು ತಗುಲಿರುವುದು ಇದೇ ಮೊದಲು.

ತೆಲಂಗಾಣ ರಾಜ್ಯದಲ್ಲಿ ಇದುವರೆಗೂ ಟಿಆರ್‌ಎಸ್ ಪಕ್ಷಕ್ಕೆ ಸೇರಿದ ಮೂವರು ಶಾಸಕರಿಗೆ ಕೊರೊನಾ ಸೋಂಕು ತಗುಲಿತ್ತು. ಸಚಿವರೊಬ್ಬರಿಗೆ ಸೋಂಕು ತಗುಲಿರುವುದು ಇದೇ ಮೊದಲು.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 14,419. ಇವುಗಳಲ್ಲಿ 9000 ಸಕ್ರಿಯ ಪ್ರಕರಣಗಳಿವೆ. 247 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಹೈದರಾಬಾದ್ ನಗರವೊಂದರಲ್ಲಿಯೇ ಸೋಂಕಿತರ ಸಂಖ್ಯೆ 10,811.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+