ಸಾಫ್ಟ್‌ವೇರ್ ಕಂಪನಿ ಸಿಇಒ ಬೆಂಗಳೂರಲ್ಲಿ ನಾಪತ್ತೆ

ಹೈದರಾಬಾದ್, ಜ.17 : ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗಿದ್ದ ಸಾಫ್ಟ್‌ವೇರ್ ಕಂಪನಿ ಸಿಇಒವೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಪೋಷಕರು ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೈದರಾಬಾದ್‌ನ ಲೈಟ್‌ ಬಗ್ ಸಾಫ್ಟ್‌ವೇರ್ ಕಂಪನಿ ಸಿಇಒ ಲಕ್ಷ್ಮೀನರಸಿಂಹಂ ಅವರು ಜ.13ರಂದು ಬೆಂಗಳೂರಿಗೆ ತೆರಳಿದ್ದರು. ಅಂದು ಸಂಜೆ ಅವರು ಮನೆಗೆ ಕರೆ ಮಾಡಿದ್ದರು. ನಂತರ ಅವರ ಮೊಬೈಲ್ ಸ್ವಿಚ್‌ ಆಫ್‌ ಆಗಿದೆ.

Lakshmi Narasimha

ಎರಡು ದಿನಗಳಾದರೂ ಲಕ್ಷ್ಮೀನರಸಿಂಹಂ ಅವರ ಕಡೆಯಿಂದ ಯಾವುದೇ ಕರೆ ಬಂದಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತಂಡವನ್ನು ಲಕ್ಷ್ಮೀನರಸಿಂಹಂ ಅವರ ಪತ್ತೆಗಾಗಿ ರಚನೆ ಮಾಡಿದ್ದು, ಅವರು ಬೆಂಗಳೂರಿನಲ್ಲಿ ಯಾರನ್ನು ಭೇಟಿಯಾಗಲು ಬಂದಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಇಂದು ಸಂಜೆ ಅಥವ ನಾಳೆ ಹೈದರಾಬಾದ್ ಪೊಲೀಸರು ಬೆಂಗಳೂರಿಗೆ ತೆರಳಿ ತನಿಖೆಗೆ ಬೆಂಗಳೂರು ಪೊಲೀಸರ ಸಹಕಾರ ಕೋರುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+