ತೆಲಂಗಾಣ ಸಂಸದನ ಮಗನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಹೈದರಾಬಾದ್, ಆಗಸ್ಟ್ 03: ತೆಲಂಗಾಣದ ಸಂಸದನ ಮಗನ ವಿರುದ್ಧ 11 ಮಂದಿ ಮೆಡಿಕಲ್ ಕಾಲೇಜು ಯುವತಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ತೆಲಂಗಾಣದಲ್ಲಿ ಭಾರಿ ವಿವಾದ ಸೃಷ್ಠಿಸಿದೆ.

ತೆಲಂಗಾಣ ರಾಜ್ಯದ ಆಡಳಿತಾರೂಢ ಟಿ.ಆರ್‌.ಎಸ್‌ನ ರಾಜ್ಯಸಭಾ ಸದಸ್ಯ ಡಿ.ಶ್ರೀನಿವಾಸ್ ಅವರ ಪುತ್ರ ಡಿ.ಸಂಜಯ್‌ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಪೊಲೀಸ್ ದೂರು ಸಹ ದಾಖಲಾಗಿದೆ.

ಡಿ.ಸಂಜಯ್ ಉಸ್ತುವಾರಿಯಲ್ಲಿರುವ ಶಾಂಕರಿ ನರ್ಸಿಂಗ್ ಕಾಲೇಜಿನ ಮೊದಲ ವರ್ಷ ಬಿಎಸ್‌ಸಿ ನರ್ಸಿಂಗ್‌ ನ 11 ಮಂದಿ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಈ ಆರೋಪ ಮಾಡಿದ್ದಾರೆ.

 Sexual harassment complaint against Telangana MPs son

ವಿದ್ಯಾರ್ಥಿನಿಯರ ಪೋಷಕರು ಮೊದಲಿಗೆ ಮಹಿಳಾ ಪ್ರಗತಿಪರ ಸಂಘಟನೆ (ಪಿಡಬ್ಲುಓ) ಗೆ ದೂರು ನೀಡಿದ್ದಾರೆ. ಆ ನಂತರ ಪಿಡಬ್ಲುಓ ಸಂಸ್ಥೆಯು ಗೃಹ ಇಲಾಖೆಗೆ ದೂರು ದಾಖಲಿಸಿ ಕ್ರಮಕ್ಕೆ ಒತ್ತಡ ಹೇರಿದೆ.

ಗೃಹ ಇಲಾಖೆಯು ದೂರು ಸ್ವೀಕರಿಸಿ ತನಿಖೆ ನಡೆಸುವಂತೆ ಆದೇಶ ನೀಡಿದೆ. ಆರೋಪಿ ಸಂಜಯ್‌ ನಿಜಾಮಾಬಾದ್‌ ನಗರದ ಮಾಜಿ ಅಧ್ಯಕ್ಷ ಸಹ ಆಗಿದ್ದು, ರಾಜಕೀಯವಾಗಿ ಪ್ರಭಾವಿ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಿಡಬ್ಲುಓನ ಸದಸ್ಯೆ ಸಂಧ್ಯಾ, ಆತ ಅತ್ಯಂತ ಕ್ರೂರ ಮನಸ್ಥಿತಿಯವನಾಗಿದ್ದು, ಬಿಎಸ್‌ಸಿ ನರ್ಸಿಂಗ್‌ನಲ್ಲಿದ್ದ 13 ಯುವತಿಯರ ಪೈಕಿ 11 ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದಿದ್ದಾರೆ. ಆತ ರಾತ್ರಿ ಸಮಯ ಆ ಹುಡುಗಿಯರ ಕೋಣೆಗೆ ನುಗ್ಗಿ ದಾಂಧಲೆ ನಡೆಸಿ ಹುಡುಗಿಯರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+