• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್‌ಗೆ ಪಾಠ ಮಾಡಿದ ರಾಮ್ ಗೋಪಾಲ್ ವರ್ಮ

|

ಹೈದರಾಬಾದ್, ಮಾರ್ಚ್ 4: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೊರೊನಾ ವೈರಸ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಕೊರೊನಾಗೆ ಪಾಠ ಮಾಡಿದ್ದಾರೆ.

''ಡಿಯರ್ ವೈರಸ್, ಎಲ್ಲರನ್ನು ಸಾಯಿಸಿ ದಡ್ಡನಾಗುವ ಮೊದಲು ಬುದ್ದಿವಂತನಾಗು. ಯಾಕೆಂದರೆ, ನೀನು ಪರಾವಲಂಬಿ ನಮ್ಮ ಜೊತೆಗೆ ನೀನು ಸಾಯುತ್ತೀಯ. ನಿನಗೆ ನನ್ನ ಮೇಲೆ ನಂಬಿಕೆ ಇಲ್ಲವಾದರೇ, ವೈರಾಲಜಿಯಲ್ಲಿ ಕೋರ್ಸ್ ಮಾಡು. ನಿನಗೆ ನಾನು ಮಾಡುವ ಮನವಿ ಏನೆಂದರೆ ನೀನು ಬದುಕು ನಮ್ಮನ್ನು ಬದುಕಲು ಬಿಡು.'' ಎಂದು ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿದ್ದಾರೆ.

''ಮಾಸ್ಕ್ ಮಾತ್ರವಲ್ಲ, ಹೆಲ್ಮೆಟ್ ಧರಿಸಿಬೇಕು''- ಬೆಂಗಳೂರು ಡಿಜಿಪಿ ಟ್ವೀಟ್

ರಾಮ್ ಗೋಪಾಲ್ ವರ್ಮ ಏನೇ ಮಾಡಿದ್ದರು ಡಿಫರೆಂಟ್ ಆಗಿ ಮಾಡುತ್ತಾರೆ. ವಿವಾದಾತ್ಮಕ ನಿರ್ದೇಶಕ ಆರ್ ಜಿ ವಿ ಕೊರೊನಾ ವೈರಸ್‌ ಬಗ್ಗೆ ಬರೆದುಕೊಂಡಿದ್ದಾರೆ. ಈಗ ಕೊರೊನಾಗೆ ಪಾಠ ಮಾಡುವಂತೆ ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾಗೆನೇ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ಈ ಟ್ವೀಟ್ ಮಾಡುವ ಮುನ್ನ ಕೊರೊನಾ ಬಗ್ಗೆ ರಾಮ್ ಗೋಪಾಲ್ ವರ್ಮ ಮತ್ತೊಂದು ಟ್ವೀಟ್ ಮಾಡಿದ್ದರು. ''ನಾನು ಎಂದಿಗೂ ನಮ್ಮ ಸಾವು ಸಹ ಮೇಡ್ ಇನ್ ಚೀನಾ ಊಹಿಸಿರಲಿಲ್ಲ.'' ಎಂದು ಬರೆದುಕೊಂಡಿದ್ದರು.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

ಅಂದಹಾಗೆ, ಈವರೆಗೆ ಚೀನಾದಲ್ಲಿ 80 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. 1871 ಜನರು ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ.

English summary
Controversial director Ram Gopal Varma tweets about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X