ಅಮೆರಿಕದಲ್ಲಿ ತೆಲುಗು ನಟಿಯರ ವೇಶ್ಯಾವಾಟಿಕೆ, ಇಬ್ಬರ ಬಂಧನ

Recommended Video

      ತೆಲುಗು ನಟಿಯರನ್ನ ಅಮೇರಿಕಾದಲ್ಲಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದುದಕ್ಕೆ ತೆಲುಗು ನಿರ್ಮಾಪಕನ ಬಂಧನ

      ಹೈದರಾಬಾದ್, ಜೂನ್ 18: ನಟಿಯರನ್ನು ಬಳಸಿಕೊಂಡು ಅಮೆರಿಕದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ತೆಲುಗು ಚಿತ್ರರಂಗದ ಸಹ ನಿರ್ಮಾಪಕ ಮತ್ತವನ ಪತ್ನಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

      ತೆಲುಗು ಚಿತ್ರರಂಗದಲ್ಲಿ ಕೆಲವು ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದ ಕೃಷ್ಣ ಮುಡುಗಮುಡಿ ಮತ್ತು ಆತನ ಪತ್ನಿ ಚಂದ್ರಿಕಾ ಎಂಬುವರು ತೆಲುಗು ನಟಿಯರನ್ನು ಫುಸಲಾಯಿಸಿ ಅಮೆರಿಕಕ್ಕೆ ಕರೆದುಕೊಂಡು ಹೋಗಿ ಅಲ್ಲಿ ವೇಶ್ಯಾವಾಟಿಕೆಗೆ ಇಳಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

      ಅಮೇರಿಕಾದಲ್ಲಿ 'ನಟಿಯರ' ವೇಶ್ಯಾವಾಟಿಕೆ: 'ನಿರೂಪಕಿ' ಬಿಚ್ಚಿಟ್ಟ ಸ್ಫೋಟಕ ಸಂಗತಿ

      ಅಮೆರಿಕದಲ್ಲಿ ನಡೆವ ದೊಡ್ಡ ಕಾರ್ಯಕ್ರಮಗಳಿಗೆ ಇಲ್ಲಿನಿಂದ ನಟಿಯರನ್ನು ತಾತ್ಕಾಲಿಕ ವೀಸಾಗಳನ್ನು ಕೊಡಿಸಿ ಕರೆಸಿಕೊಂಡು ಅಲ್ಲಿ ಗಿರಾಕಿಗಳನ್ನು ಹುಡುಕಿ ನಟಿಯರನ್ನು ಅವರೊಂದಿಗೆ ಸಮಯ ಕಳೆಯುವಂತೆ ಮಾಡುತ್ತಿದ್ದರು. ಇದಕ್ಕೆ ಅವರು 3000 ಯುಎಸ್ ಡಾಲರ್ ಪಡೆಯುತ್ತಿದ್ದರು ಎಂದು ಚಿಕಾಗೋ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ.

      prostitution racket of Telugu actress in America

      ನಟಿಯರಿಗೆ ತಾತ್ಕಾಲಿಕ ವೀಸಾ ಕೊಡಿಸಲು ಅಮೆರಿಕದ ತೆಲುಗು ಸಂಸ್ಥೆಗಳ ನಕಲಿ ಲೆಟರ್‌ಹೆಡ್‌ಗಳನ್ನು ಮಾಡಿಸಿ ಅದರ ಮೂಲಕ ನಟಿಯರಿಗೆ ಅಮೆರಿಕದ ಕಾರ್ಯಕ್ರಮಕ್ಕೆ ಆಹ್ವಾನ ಕಳಿಸಿ ತಾತ್ಕಾಲಿಕ ವೀಸಾ ಕೊಡಿಸಲಾಗುತ್ತಿತ್ತು ಎಂಬುದು ಅಮೆರಿಕ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

      ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಕನ್ನಡ ನಟಿಯರು.!

      ಏಪ್ರಿಲ್‌ನಲ್ಲಿಯೇ ದಂಪತಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಪೂರ್ಣ ವರದಿ ಸಲ್ಲಿಸಿದ ನಂತರ ಪ್ರಕರಣ ಬೆಳಕಿಗೆ ಬಂಧಿದೆ ದಂಪತಿಗಳಿಬ್ಬರೂ ವಿರ್ಜಿನಿಯಾದ ಜೈಲಿನಲ್ಲಿದ್ದರೆ, ಅವರ ಮಕ್ಕಳನ್ನು ವರ್ಜಿನಿಯಾದ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕಳುಹಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+