ಪ್ರಧಾನಿ ಮೋದಿ ಹೈದರಾಬಾದ್‌ಗೆ ಆಗಮನ: ಏರ್‌ಪೋರ್ಟ್‌ಗೆ ಕೆಸಿಆರ್ ಗೈರು
ಹೈದರಾಬಾದ್, ಫೆಬ್ರವರಿ 5: ಶ್ರೀ ರಾಮಾನುಜಾಚಾರ್ಯಯ ಪ್ರತಿಮೆಯ ಉದ್ಘಾಟನೆಗೆಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ಗೆ ಆಗಮಿಸಿದ್ದು, ಅವರನ್ನು ಬರಮಾಡಿಕೊಳ್ಳಲು ಸಿಎಂ ಕೆಸಿಆರ್ ಬಂದಿರಲಿಲ್ಲ.
ಸಮಾಜ ಸುಧಾರಕ ಶ್ರೀರಾಮಾನುಜಾಚಾರ್ಯಯ ಸಮಾನತೆಯ ಪ್ರತಿಮೆಯನ್ನು ಹೈದರಾಬಾದ್‌ನಲ್ಲಿ ನಿರ್ಮಾಣಗೊಂಡಿರುವ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ' ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಬಹು ಎತ್ತರದ ದೈತ್ಯ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ಅನಾವರಣಗೊಳಿಸಲಿದ್ದಾರೆ.
ಪ್ರಧಾನಿ ಆಗಮನದ ಕೆಲವು ದಿನಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ. ಅವರ ಬಜೆಟ್ "ಸತ್ವವಿಲ್ಲದ ಶೈಲಿ" ಯನ್ನು ನಿರೂಪಿಸುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರ ಶೇಖರ್ ರಾವ್ ಹೇಳಿದ್ದಾರೆ. ಬಜೆಟ್ನ್ನು ರಾವ್ ಅವರು ಭಯಾನಕ ಮತ್ತು ಗೋಲ್ ಮಾಲ್ ಎಂದು ಹೇಳಿದ್ದಾರೆ.

ಮೂರು ದಿನಗಳಲ್ಲಿ ಮೋದಿ ಮತ್ತು ಕೆಸಿಐಆರ್ ಮೆಗಾ ಈವೆಂಟ್‌ಗಾಗಿ ಮುಖಾಮುಖಿಯಾಗಲಿದ್ದಾರೆ. ಆದರೆ ತಮ್ಮ ಟೀಕೆಗಳನ್ನು ವೈಯಕ್ತಿಕವಾಗಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ರಾವ್ ಹೇಳಿದ್ದಾರೆ. "ಊಪರ್ ಶೇರ್ವಾನಿ, ಅಂದರ್ ಪರೇಶಾನಿ (ಮೇಲೆ ಶೆರ್ವಾನಿ, ಒಳಗೆ ಗೊಂದಲ) ಎಂದು ಹೇಳುವ ಮೂಲಕ ಕೆಸಿಆರ್ ಪ್ರಧಾನಿ ಮೋದಿಯವರ ಆಡಳಿತದ ಉದಾಹರಣೆ ಎಂದು ಬಿಜೆಪಿ ತೋರಿಸುತ್ತಿರುವ "ಗುಜರಾತ್ ಮಾದರಿ" ಯನ್ನು ಲೇವಡಿ ಮಾಡಿದರು. ಕೆಸಿಆರ್ ಈ ಹಿಂದೆ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿಲಾಗಿತ್ತು.
ಅವರ ತೆಲಂಗಾಣ ರಾಷ್ಟ್ರ ಸಮಿತಿ (TRS) ಸಂಸತ್ತಿನಲ್ಲಿ ಪ್ರಮುಖ ಶಾಸನಗಳ ಕುರಿತು ಮೋದಿ ಸರ್ಕಾರವನ್ನು ಹೆಚ್ಚಾಗಿ ಬೆಂಬಲಿಸಿದೆ. ಸೋಷಿಯಲ್ ಮೀಡಿಯಾ ನಿರ್ವಹಣೆಯಿಂದ, ಸುಳ್ಳು ಹೇಳುತ್ತಾ, ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ, ಜನರನ್ನು ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈಗ ಅವರು ಬಹಿರಂಗಗೊಂಡಿದ್ದಾರೆ, ಅವರು ದ್ವೇಷ ಮತ್ತು ವಿಭಜನೆಯ ಕೋಮು ರಾಜಕೀಯವನ್ನು ಆಡುತ್ತಿದ್ದಾರೆ ಎಂದು ಕೆಸಿಆರ್ ಮೋದಿ ಆಡಳಿತ ವಿರುದ್ಧ ಕಿಡಿ ಕಾರಿರಿದ್ದರು.
ಚುನಾವಣಾ ಸಮಯವಾದರೆ ಗಡ್ಡ ಬಿಟ್ಟು ರವೀಂದ್ರನಾಥ ಠಾಗೋರರಂತೆ ಕಾಣಿಸಿಕೊಳ್ಳಬೇಕು, ಅರೇ ಬಾಪ್ ರೇ ತಮಿಳುನಾಡಾದರೆ ಲುಂಗಿ ತೊಡಬೇಕು ಇದೇನಿದು? ದೇಶಕ್ಕೆ ಏನು ಸಿಗುತ್ತದೆ. ಈ ತರಹದ ಗಿಮಿಕ್ಗಳಿಂದ ದೇಶಕ್ಕೆ ಏನು ಸಿಗುತ್ತೆ, ಪಂಜಾಬ್ ಚುನಾವಣೆಯ ವೇಳೆ ಪಗ್ಡಿ(ಟರ್ಬನ್) ಹಾಕಿಕೊಳ್ಳುತ್ತಾರೆ. ಮಣಿಪುರದಲ್ಲಿ ಮಣಿಪುರಿ ಕ್ಯಾಪ್, ಉತ್ತರಾಖಂಡ್ ನಲ್ಲಿ ಮತ್ತೊಂದು ಟೋಪಿ(ಕ್ಯಾಪ್) ಈ ರೀತಿಯ ಎಷ್ಟು ಟೋಪಿ ಧರಿಸುತ್ತಾರೆ? ಎಂದು ಮೋದಿ ವಿರುದ್ದ ಕೆಸಿಆರ್ ವಾಗ್ದಾಳಿ ನಡೆಸಿದ್ದರು.
ಪ್ರೋಟೊಕಾಲ್ ಇದ್ದರೂ ಕೂಡ ಕೆಸಿಆರ್ ವಿಮಾನ ನಿಲ್ದಾಣಕ್ಕೆ ಆಗಮಿಸದೆ ಇರುವ ಕುರಿತು ಬಿಜೆಪಿ ಕಿಡಿಕಾರಿದ್ದು, ಇದೊಂದಿ ನಾಚಿಕೆಗೇಡಿನ ಸಂಗತಿ ಎಂದಿದೆ. ಕೆಸಿಆರ್ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದೆ.
ಕುಳಿತುಕೊಂಡಿರುವ ಭಂಗಿಯಲ್ಲಿರುವ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ವಿಶ್ವದ ಎರಡನೇ ಅತಿದೊಡ್ಡ ಪ್ರತಿಮೆಯಾಗಿದೆ. ಇದನ್ನು ನಗರದ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ.
1,000-ಕೋಟಿ ಯೋಜನೆ ಇದಾಗಿದ್ದು, ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಸಂಗ್ರಹಿಸಿ ಪ್ರತಿಮೆ ನಿರ್ಮಿಸಲಾಗಿದೆ. ಶ್ರೀ ರಾಮಾನುಜಾಚಾರ್ಯರು ಜೀವಿಸಿದ 120 ವರ್ಷಗಳ ನೆನಪಿಗಾಗಿ ಶ್ರೀ ರಾಮಾನುಜಾಚಾರ್ಯರ ಒಳಾಂಗಣ ಮೂರ್ತಿಯನ್ನು 120 ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಫೆಬ್ರವರಿ 13 ರಂದು ಅನಾವರಣಗೊಳಿಸಲಿದ್ದಾರೆ.
ಹೊರಾಂಗಣದಲ್ಲಿ ನಿರ್ಮಿತವಾಗಿರುವ 216 ಅಡಿ ಸಮಾನತೆಯ ಪ್ರತಿಮೆಯು ಕುಳಿತುಕೊಳ್ಳುವ ಭಂಗಿಯನ್ನು ಹೊಂದಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಥೈಲ್ಯಾಂಡ್‌ನಲ್ಲಿರುವ ಬುದ್ಧನ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಹೇಳಲಾಗುತ್ತದೆ.
2.45 ಬೇಸ್ ಕಟ್ಟಡದ ಮೇಲೆ ಪ್ರತಿಮೆ ನಿರ್ಮಿಸಲಾಗಿದ್ದು, ಇದಕ್ಕೆ ಭದ್ರಾ ವೇದಿಕೆ ಎಂದು ಹೆಸರಿಡಲಾಗಿದೆ. ಇನ್ನು ನೆಲಮಾಳಿಗೆಯಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದ್ದು, ಇಲ್ಲಿ ಪ್ರಾಚೀನ ಭಾರತೀಯ ಗ್ರಂಥಗಳು, ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ತೆಲಂಗಾಣದ ಮುಚಿಂತಲ್ ಎಂಬ ಹಳ್ಳಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯು ಶಂಶಾಬಾದ್‌ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲಿದೆ.
ಇದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವನ್ನು ಒಳಗೊಂಡಿರುವ ಐದು ಲೋಹಗಳ ಸಂಯೋಜನೆಯಾದ ಪಂಚಲೋಹದ ಪ್ರತಿಮೆಯಾಗಿದೆ. ಶ್ರೀ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿರುವುದರ ನೆನಪಿಗಾಗಿ ಒಳಾಂಗಣ ದೇವರನ್ನು 120 ಕೆಜಿ ಚಿನ್ನದಿಂದ ಮಾಡಲಾಗಿದೆ.












Click it and Unblock the Notifications