17 ಲಕ್ಷ ಮಂದಿಗೆ 5000 ಕೋಟಿ ವಂಚಿಸಿದ ಪವನ್ ಬಂಧನ
ಹೈದರಾಬಾದ್, ಆಗಸ್ಟ್ 22: ನೋಯ್ಡಾ ಮೂಲದ ಮಲ್ಟಿ ಲೆವಲ್ ಮಾರ್ಕೆಟಿಂಗ್ ಕಂಪನಿ ಸರಿ ಸುಮಾರು 17 ಲಕ್ಷ ಜನರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸೈಬರಾಬಾದ್ ಪೊಲೀಸರು eBIZ ವ್ಯವಸ್ಥಾಪಕ ನಿರ್ದೇಶಕ ಪವನ್ ಮಲ್ಹಾನ್ ಮತ್ತು ಅವರ ಪುತ್ರ ಹಿತಿಖ್ ಮಲ್ಹಾನ್ ರನ್ನು ಬಂಧಿಸಿದ್ದಾರೆ.
ಸುಮಾರು 5,000 ಕೋಟಿ ರೂ. ವಂಚಿಸಿದ ಆರೋಪ 'ಇ ಬಿಝ್' ಡಾಟ್ ಕಾಮ್ ಪ್ರೈ.ಲಿ. ಕಂಪೆನಿ ಮೇಲೆ ಹೊರೆಸಲಾಗಿದೆ. ಸೈಬರಾಬಾದ್ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಈ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿ, ವಿವಿಧ ಬ್ಯಾಂಕುಗಳಲ್ಲಿ ಅಪ್ಪ-ಮಗ ಹೊಂದಿದ್ದ 398 ಕೊಟಿ ರು ಗಳನ್ನು ವಶಕ್ಕೆ ಪಡೆದಿದ್ದಾರೆ.
"ಇ-ಕಲಿಕಾ ಕೋರ್ಸ್ ಗಳು, ಪ್ರಾಡಕ್ಟ್ ಗಳು ಮತ್ತು ಪ್ರವಾಸ ಪ್ಯಾಕೇಜ್ ಗಳನ್ನು ನೀಡುವ ಉದ್ದೇಶದಿದ ಉತ್ತರ ಪ್ರದೇಶದ ನೋಯ್ಡಾದಿಂದ 2001ರಲ್ಲಿ ಮಲ್ಹಾನ್ ಇ.ಬಿಜ್ ಕಂಪೆನಿ ಸ್ಥಾಪಿಸಿದರು. ಮಲ್ಟಿಲೆವೆಲ್ ಮಾರ್ಕೆಟಿಂಗ್ ಇದರ ಮುಖ್ಯ ಉದ್ದೇಶವಾಗಿತ್ತು. ಪ್ರತಿ ಗ್ರಾಹಕರ ಸೇರ್ಪಡೆಯೊಂದಿಗೆ ಹೆಚ್ಚು ಕಮಿಷನ್ ಸಿಗುತ್ತಿತ್ತು, ಆದರೆ, ಕಮಿಷನ್ ಸಿಗದೆ ವಂಚನೆಯಾದ ಬಳಿಕ ನಾಲ್ಕಾರು ಮಂದಿ 62 ವರ್ಷ ವಯಸ್ಸಿನ ಪವನ್ ಮಲ್ಹಾನ್ ವಿರುದ್ಧ ದೂರು ಸಲ್ಲಿಸಿದರು" ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ.

ಎಂಡಿ ಪವನ್ ಮಲ್ಜಾನ್, ಅವರ ಪತ್ನಿ ಅನಿತಾ ಮಲ್ಹಾನ್, ಮಗ ಹಿತಿಕ್ ಮಲ್ಹಾನ್ ಅವರು ಸಂಸ್ಥೆ ನೋಡಿಕೊಳ್ಳುತ್ತಿದ್ದರು. ಮುಖ್ಯವಾಗಿ ಯುವ ಜನಾಂಗವನ್ನು ಗುರಿಯನ್ನಾಗಿಸಿಕೊಂಡಿದ್ದರು. ಸಂಸ್ಥೆಯ ಸದಸ್ಯರಾಗಲು 16,821 ರು ಪಾವತಿಸಬೇಕಾಗಿತ್ತು. ನಂತರ ಈ ಸಂಸ್ಥೆಗೆ ಮತ್ತೊಬ್ಬ ಸದಸ್ಯರನ್ನು ಸೇರಿಸಿದರೆ 4% ಕಮಿಷನ್ ಸಿಗುವ ಭರವಸೆ ನೀಡಿದ್ದರು. ಕಮಿಷನ್ ಸಿಗದ ಕಾರಣ ಮೊಹಮ್ಮ ಸರೂಕ್ ಎಂಬುವರು ಮೊದಲಿಗೆ ದೂರು ದಾಖಲಿಸಿದರು, ನಂತರ ಅನೇಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸೈಬರಾಬಾದ್ ಪೊಲೀಸರು ಬಲೆ ಬೀಸಿ, ಸಂಸ್ಥೆಯ ಮಾಲೀಕರನ್ನು ಬಂಧಿಸಿದ್ದಾರೆ.












Click it and Unblock the Notifications