ಹೈದರಾಬಾದ್: ಸಾರ್ವಜನಿಕ ಶೌಚಾಲಯ ಕದ್ದು 45 ಸಾವಿರ ರೂ.ಗೆ ಮಾರಿದ ಭೂಪ

ಹೈದರಾಬಾದ್ ಮಾರ್ಚ್ 23: ದೇಶವನ್ನು ಸ್ವಚ್ಚವಾಗಿಡಲು ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ಮೊಬೈಲ್ ಶೌಚಾಲಯಗಳನ್ನು ಅಳವಡಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಟಾಯ್ಲೆಟ್‌ಗಳನ್ನು ಸ್ಥಾಪಿಸಿದೆ. ಆದರೆ ಇದನ್ನೂ ಬಿಡದ ಕಳ್ಳನೊಬ್ಬ ಶೌಚಾಲಯವನ್ನು ಕದ್ದು ಮಾರಾಟ ಮಾಡಿದ್ದಾನೆ. ಸಾರ್ವಜನಿಕ ಪೋರ್ಟಬಲ್ ಶೌಚಾಲಯವನ್ನು 36 ವರ್ಷದ ಜೋಗಯ್ಯ ಎಂಬ ಆಟೋ ಟ್ರಾಲಿ ಚಾಲಕನೊಬ್ಬ ಕದ್ದು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್ ನ ಮಲ್ಕಾಜ್‌ಗಿರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಸೋಮವಾರ ದೋಮಲಗುಡ ನಿವಾಸಿ ಹಾಗೂ ಮೇದಕ್‌ ಜಿಲ್ಲೆಯ ಜೋಗಯ್ಯನನ್ನು ಬಂಧಿಸಿದ್ದಾರೆ.

ಜೋಗಯ್ಯ ತನ್ನ ಇತರ ಇಬ್ಬರು ಸಹಚರರೊಂದಿಗೆ ಸಾರ್ವಜನಿಕ ಆಸ್ತಿಯನ್ನು ಕದ್ದಿದ್ದಾನೆ. ಈ ಪ್ರಕರಣದಲ್ಲಿ ಬುದ್ಧ ಭವನದಲ್ಲಿ GHMC ಕೆಲಸಗಾರ ಅರುಣ್ ಕುಮಾರ್ ಮತ್ತು ಮಲ್ಕಾಜ್‌ಗಿರಿಯ ಆನಂದಬಾಗ್‌ನಲ್ಲಿರುವ ಜೈನ್ ಬಿಕ್ಷಪತಿ ಅವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಜೋಗಯ್ಯ ಅವರು ಸಾರ್ವಜನಿಕ ಶೌಚಾಲಯವನ್ನು ಮುಶೀರಾಬಾದ್‌ನ ಸ್ಕ್ರ್ಯಾಪ್ ಮಾರಾಟಗಾರನಿಗೆ 45,000 ರೂ.ಗೆ ಮಾರಾಟ ಮಾಡಿದ್ದಾರೆ.

Hyderabad: Man steals public toilet, sells it for Rs 45K

Recommended Video

      ಅಸಾನಿ ಚಂಡಮಾರುತದಿಂದ ಬೆಂಗಳೂರಿನ ವೆದರ್ ಮೇಲಾಗೋ ಎಫೆಕ್ಟ್ ಏನು? | Oneindia Kannada

      ''ಅವರು ತಮ್ಮ ವೈಯಕ್ತಿಕ ಖರ್ಚಿಗಾಗಿ ಹಣವನ್ನು ಇಟ್ಟುಕೊಂಡಿದ್ದರು. ಕಳೆದ ವಾರ ಜಿಎಚ್‌ಎಂಸಿ ಜಿಲ್ಲಾಧಿಕಾರಿ ಜಿ ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಣ್ಗಾವಲು ಕ್ಯಾಮೆರಾಗಳ ಸಹಾಯದಿಂದ ಜೋಗಯ್ಯನನ್ನು ಗುರುತಿಸಿ ಬಂಧಿಸಲಾಯಿತು. ನಗದು ವಶಪಡಿಸಿಕೊಳ್ಳಲಾಗಿದ್ದು, ಆಟೋ ಟ್ರಾಲಿಯನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+