ಹೈದರಾಬಾದ್ : ಎಟಿಎಂನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ
ಹೈದರಾಬಾದ್, ಮೇ 20 : ಬೆಂಗಳೂರಿನಲ್ಲಿ ನಡೆದ ಮಾದರಿಯಲ್ಲಿಯೇ ಹೈದರಾಬಾದ್‌ನಲ್ಲಿ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಎಸ್‌ಬಿಐ ಎಟಿಎಂಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ, ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಯೂಸೂಫ್‌ಗಢ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾಲ್ ಸೆಂಟರ್ ಉದ್ಯೋಗಿಯೊಬ್ಬರು ಎಟಿಎಂಗೆ ತೆರಳಿದಾಗ ಅಲ್ಲಿಗೆ ಹೋದ ಮುಸುಕುಧಾರಿ ವ್ಯಕ್ತಿ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ನಂತರ ಮಹಿಳೆಯ ಬಳಿ ಇದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿದ್ದಾನೆ.

ಮಹಿಳೆಯ ಕಾಲಿಗೆ ಗುಂಡು ಬಿದ್ದಿದೆ ಎಂದು ತಿಳಿದುಬಂದಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಸುಕುಧಾರಿ ವ್ಯಕ್ತಿ ಎಟಿಎಂಗೆ ಆಗಮಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]
ಬೆಂಗಳೂರಿನಲ್ಲೂ ಆಗಿತ್ತು : 2013ರ ನ.19ರಂದು ಬೆಂಗಳೂರಿನಲ್ಲಿ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಎಟಿಎಂನಲ್ಲಿ ಹಲ್ಲೆ ನಡೆದಿತ್ತು. ನಗರದ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ಹೋದ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಂತರ ಆರೋಪಿ ಶಟರ್ ಅನ್ನು ಮುಚ್ಚಿ ಪರಾರಿಯಾಗಿದ್ದ. [ಬೆಂಗಳೂರು ಎಟಿಎಂ ದಾಳಿಗೆ ಒಂದು ವರ್ಷ, ಆರೋಪಿ ಎಲ್ಲಿ?]
ಈ ಕೃತ್ಯ ನಡೆದ ಸುಮಾರು ನಾಲ್ಕು ಗಂಟೆಗಳ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಯೋತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿತ್ತು. ಆದರೆ, ಎರಡು ವರ್ಷಗಳು ಕಳೆಯುತ್ತಾ ಬಂದರೂ ಇನ್ನೂ ಆರೋಪಿ ಪತ್ತೆಯಾಗಿಲ್ಲ.












Click it and Unblock the Notifications