'ಎಮ್ಮೆ ಜತೆ ಸರಸ' ಇದು ಕರೀಂನಗರದ ಕ್ರೈಂ
ಆದಿಲಾಬಾದ್, ಜು.19: 'ಎಮ್ಮೆ ಜತೆ ಆಂಧ್ರದ ವ್ಯಕ್ತಿಯ ಸರಸ' ಎಂಬ ಶೀರ್ಷಿಕೆ ನೋಡಿದರೆ ಅರೇ ಇದೇನು ವಿಚಿತ್ರ ಎನಿಸಿದರೂ ಇದು ಸತ್ಯ. ದೂರದ ಯಾವುದೋ ದೇಶದಲ್ಲಿ ಈ ರೀತಿ ನಡೆದಿದೆ ಎಂದು ಕೇಳಿ ತಿಳಿದು ಹುಬ್ಬೇರಿಸುತ್ತಿದ್ದವರು ಈಗ ಸುತ್ತ ಮುತ್ತವೇ ಇಂಥ ಕಾಮುಕರಿರುವುದು ಕಂಡು ಬೆಚ್ಚುವ ಸರದಿ ನಮ್ಮದಾಗಿದೆ.
ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಇಂಥದ್ದೊಂದು ಅನೈಸರ್ಗಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.ಎಮ್ಮೆಯೊಡನೆ ಸರಸವಾಡಿದ ವ್ಯಕ್ತಿ ಈಗ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾನೆ.
ತಿಮ್ಮಾಪುರ ಮಂಡಲದ ಪೊರಾಂಡ್ಲಾ ಹಳ್ಳಿಯ ನೀಲಂ ಲಚ್ಚಯ್ಯ(43) ಎಂಬಾತ ತನ್ನ ಕಾಮದ ಹಸಿವನ್ನ ತೀರಿಸಿಕೊಳ್ಳಲು ಮೂಕ ಪ್ರಾಣಿ ಎಮ್ಮೆಯನ್ನು ಬಳಸಿಕೊಂಡಿದ್ದನಂತೆ. ಪೊಲೀಸರು ಹೇಳುವ ಪ್ರಕಾರ, ನೀಲಂ ಲಚ್ಚಯ್ಯ ಜುಲೈ 12, 2013ರಲ್ಲಿ ಎಮ್ಮೆಯ ಕಾಲುಗಳನ್ನ ಕಟ್ಟಿ ಸೆಕ್ಸ್ ಮಾಡಿದ್ದನಂತೆ. ಎಮ್ಮೆಯ ಮಾಲೀಕ ಬೊಜ್ಜ ಬಾಲಯ್ಯ ನೀಡಿದ ದೂರನ್ನ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. [ಬೆತ್ತಲಾಗಿ ಎಮ್ಮೆಗೆ ಮೇವು ತಿನ್ಸಿ ಸಾಕು, ಗೆಲ್ತೀರಿ!]

ನೀಲಂ ಲಚ್ಚಯ್ಯನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಎಮ್ಮೆಯ ಕೈಕಾಲು ಕಟ್ಟಿ ಹಾಕಲಾಗಿತ್ತು ಪಕ್ಕದಲ್ಲಿ ಬೆತ್ತಲೆಯಾಗಿ ಮೈಮರೆತು ಲಚ್ಚಯ್ಯ ಮಲಗಿದ್ದ ಎಂಬುದು ತಿಳಿದು ಬಂದಿದೆ.
ಪ್ರಕರಣದಲ್ಲಿ ನೀಲಂ ಲಚ್ಚಯ್ಯ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಕೋರ್ಟ್ ಈತನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಹಿಂದೆ ಮೂವರು ಬಾಲಕರನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಲಚ್ಚಯ್ಯ ಪೆರೋಲ್ ಮೇಲೆ ಹೊರ ಬಂದಿದ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.












Click it and Unblock the Notifications