ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೈರ್ಯವಿದ್ದರೆ ನನ್ನ ವಿರುದ್ಧ ನಿಂತು ಗೆಲ್ಲಿ: ಅಮಿತ್ ಶಾಗೆ ಓವೈಸಿ ಸವಾಲು

ಧೈರ್ಯವಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಚುನಾವಣೆಗೆ ನಿಂತು ಗೆಲ್ಲಿ ನೋಡೋಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ಎಐಎಂ ಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಬಹಿರಂಗವಾಗಿಯೇ ಸವಾಲೆಸಿದಿದ್ದಾರೆ.

|
Google Oneindia Kannada News

ಹೈದರಾಬಾದ್, ಮೇ 26: ಧೈರ್ಯವಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಚುನಾವಣೆಗೆ ನಿಂತು ಗೆಲ್ಲಿ ನೋಡೋಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ಎಐಎಂ ಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಬಹಿರಂಗವಾಗಿಯೇ ಸವಾಲೆಸಿದಿದ್ದಾರೆ.

ಹೈದರಾಬಾದ್ ಪ್ರವಾಸದ ಸಮಯದಲ್ಲಿ, ಇಲ್ಲಿನ ಐದು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಬಗ್ಗೆ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, 'ನಿಮ್ಮ ಪಕ್ಷ ಹೈದರಾಬಾದಿನಲ್ಲಿ ಚುನಾವಣೆಗೆ ನಿಲ್ಲುವ ಬಗ್ಗೆ ನನ್ನ ತಕರಾರಿಲ್ಲ, ಆದರೆ ಬೇರೆ ಯಾರನ್ನೋ ಯಾಕೆ ಚುನಾವಣೆಗೆ ನಿಲ್ಲಿಸುತ್ತೀರಾ? ಧೈರ್ಯವಿದ್ದರೆ ನೀವೇ ಚುನಾವಣೆಗೆ ನಿಂತು ಗೆಲ್ಲಿ' ಎಂದು ಅವರು ಶಾ ಅವರನ್ನು ಲೇವಡಿ ಮಾಡಿದ್ದಾರೆ.[ಉಪ್ರದಲ್ಲಿ ಬಿಜೆಪಿಗೆ ಗೋವು ಮಮ್ಮಿ, ಈಶಾನ್ಯ ರಾಜ್ಯದಲ್ಲಿ ಯಮ್ಮಿ: ಒವೈಸಿ]

If you want to win Hyderabad constituency, you just contest and win: Owaisi to Amith Shah

ಹೈದರಾಬಾದ್ ಗೆಲ್ಲೋದಂದ್ರೆ ಕೇಕ್ ತಿಂದಷ್ಟು ಸುಲಭವಲ್ಲ, ನಾವಿಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ, ಸಿಕಂದರಾಬಾದಿನ ಒಂದು ಲೋಕಸಭಾ ಕ್ಷೇತ್ರ, ಜೊತೆಗೆ ಗೋಶಮಹಲ್, ಅಂಬರಪೇಟೆ, ಮುಶೀರ್ ಬಾದ್, ಕೈರ್ತಾಬಾದ್, ಉಪ್ಪಾಳ ವಿಧಾನ ಸಭಾ ಕ್ಷೇತ್ರಗಳನ್ನೂ ಸೋಲಲಿರುವ ಬಿಜೆಪಿಗೆ ಜನರು ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.[ಭಾರತ್ ಮಾತಾ ಕೀ ಜೈ ಅನ್ನೋಲ್ಲಾ ಎಂದಿದ್ದ ಓವೈಸಿ ಬಾಯಿಯಿಂದ ಜೈಹಿಂದ್]

ಮೂರು ದಿನಗಳ ಕಾಲ ತೆಲಂಗಾಣ ಪ್ರವಾಸದಲ್ಲಿದ್ದ ಅಮಿತ್ ಶಾ ಕುರಿತು ವ್ಯಂಗ್ಯ ಮಾಡಿದ ಅವರು, ಇದ್ದಕ್ಕಿದ್ದಂತೆ ಅಮಿತ್ ಶಾ ಗೆ ತೆಲಂಗಾಣದ ಮೇಲೆ ಪ್ರೀತಿ ಉಕ್ಕುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಒಂದು ಕೋಟಿ ರೂ ಅನುದಾನದ ಬಗ್ಗೆ ಮಾತನಾಡಿದ ಅವರು, ಅದನ್ನೇನು ಅಮಿತ್ ಶಾ ತಮ್ಮ ಜೇಬಿನಿಂದ ಕೊಟ್ಟಿದ್ದಾರೆಯೇ? ನಾವೇನು ಭಿಕ್ಷುಕರಲ್ಲ, ಕೇಂದ್ರದಿಂದ ಅನುದಾನ ಪಡೆಯುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದಿದ್ದಾರೆ.

English summary
If you want to win Hyderabad constituency, you just contest and win, why do you suggest other's name for Hyderbad? Hyderabad Member of Parliament, Asaduddin Owaisi challenges BJP national president Amith shah in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X