ಎಸ್‌ಆರ್‌ಎಚ್ ವಿರುದ್ಧದ ರೋಚಕ ಪಂದ್ಯದಲ್ಲಿ ಸಿಎಸ್‌ಕೆ ಪರ ಎಂಎಸ್ ಧೋನಿ ಕಣಕ್ಕಿಲಿಯಲಿದ್ದಾರಾ? ಇಲ್ಲಿದೆ ಬಿಗ್ ಅಪ್ಡೇಟ್
CSK Vs SRH IPL 2026: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆಯಲಿರುವ ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಪ್ಲೇ-ಆಫ್ ರೇಸ್ ಕಾವೇರಿರುವ ಈ ಸಂದರ್ಭದಲ್ಲಿ ಎರಡೂ ತಂಡಗಳಿಗೂ ಈ ಗೆಲುವು ಅತ್ಯಂತ ಮುಖ್ಯವಾಗಿದೆ. ಇನ್ನೂ ಈ ಪಂದ್ಯದಲ್ಲಿ ಎಂಸ್ ಧೋನಿ ಅವರು ಸಿಎಸ್‌ಕೆ ಪರ ಕಣಕ್ಕಿಳಿಯಲಿದ್ದಾರಾ ಎನ್ನುವ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ.
ಟಾಸ್ ಗದ್ದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಇನ್ನೂ ಈವರೆಗೂ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಅರ್ಹತೆಯ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಲೀಗ್ ಹಂತದ ತನ್ನ ಈ 13ನೇ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವು ಆಡಿದ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಅಧಿಕೃತವಾಗಿ ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆಯಬಹುದು.
ಎಂಎಸ್ ಧೋನಿ ಕಣಕ್ಕಿಳಿಯಲಿದ್ದಾರಾ?
ಇನ್ನು ಈ ಪಂದ್ಯದ ಕುರಿತು ಇರುವ ದೊಡ್ಡ ಕುತೂಹಲವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ದಿಗ್ಗಜ ಎಂ.ಎಸ್. ಧೋನಿ ಅವರದ್ದು. ಈ ಸೀಸನ್‌ನಲ್ಲಿ ಅವರು ತಮ್ಮ ಮೊದಲ ಪಂದ್ಯವನ್ನು ಆಡುವ ಸಾಧ್ಯತೆಯಿರುವುದು ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಂದು ವೇಳೆ ಅವರು ಕಣಕ್ಕಿಳಿದರೆ ಕ್ರೇಜ್ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಚೇತರಿಸಿಕೊಳ್ಳುತ್ತಿರುವ ಎಂಎಸ್ ಧೋನಿ
ಎಂ.ಎಸ್.ಧೋನಿ ಅವರು ಗಾಯದ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳಿಂದ ದೂರ ಉಳಿದಿದ್ದಾರೆ. ಆರಂಭದಲ್ಲಿ ಇದು ಸಣ್ಣ ಗಾಯವೆಂದು ಭಾವಿಸಲಾಗಿತ್ತು. ಆದರೆ ಚೇತರಿಸಿಕೊಳ್ಳುವ ಹಂತದಲ್ಲಿ ಅಭ್ಯಾಸ ಪಂದ್ಯವೊಂದರಲ್ಲಿ ಅತಿಯಾದ ಶ್ರಮ ಹಾಕಿದ ಕಾರಣ ಮತ್ತೆ ಹೆಚ್ಚಾಗಿ ಪೆಟ್ಟಾಗಿದೆ. ಇದರಿಂದಾಗಿ ಅವರ ಚೇತರಿಕೆ ವಿಳಂಬವಾಗಿದೆ ಎಂದು ವರದಿಯಾಗಿದೆ.
ಧೋನಿ ಅವರು 2026ರ ಸೀಸನ್ ನಂತರ ನಿವೃತ್ತಿ ಹೊಂದುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಒಂದು ವೇಳೆ ಅವರು 2027ರ ಸೀಸನ್ ವೇಳೆಗೆ ಸಂಪೂರ್ಣ ಫಿಟ್‌ನೆಸ್ ಪಡೆಯಲು ಸಾಧ್ಯವಾಗದಿದ್ದರೆ ಮಾತ್ರ ಆಟಕ್ಕೆ ವಿದಾಯ ಹೇಳಬಹುದು. ಮೂಲಗಳ ಪ್ರಕಾರ, "ಧೋನಿ ಅವರು ಪಂದ್ಯ ಆಡದೆ ಫ್ರಾಂಚೈಸಿಯಿಂದ ಹಣ ಪಡೆಯುವ ವ್ಯಕ್ತಿಯಲ್ಲ. ಆಡಲು ಸಾಧ್ಯವಾಗದಿದ್ದರೆ ಅವರೇ ನಿವೃತ್ತಿ ನಿರ್ಧಾರ ತೆಗೆದುಕೊಳ್ಳುಲಿದ್ದಾರೆ," ಎಂದು ತಿಳಿದುಬಂದಿದೆ.
ಧೋನಿ ಆಟಗಾರನಾಗಿ ನಿವೃತ್ತಿ ಪಡೆದರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಬಿಟ್ಟುಕೊಡುವುದಿಲ್ಲ. ಅವರು ತಂಡದ ಅವಿಭಾಜ್ಯ ಅಂಗವಾಗಿರುವುದರಿಂದ ನಿವೃತ್ತಿಯ ನಂತರ ಅವರಿಗೆ ಮೆಂಟರ್ ಅಥವಾ ತಂಡದ ಆಡಳಿತ ಮಂಡಳಿಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಬೇರೆ ಯಾವುದಾದರೂ ಉನ್ನತ ಜವಾಬ್ದಾರಿಯನ್ನು ನೀಡಲು ಸಿಎಸ್‌ಕೆ ನಿರ್ಧರಿಸಿದೆ.
ಧೋನಿ ಅವರು ಚೆನ್ನೈನಲ್ಲಿ ಹೆಚ್ಚಾಗಿ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಫಿಟ್‌ನೆಸ್ ಪರೀಕ್ಷೆಗಳಿಗೂ ಒಳಗಾಗುತ್ತಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ಮೈದಾನಕ್ಕಿಳಿಯಲಿದ್ದಾರೆ. ಸೋಮವಾರ (ಮೇ 18) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆಮಾಡಿದೆ.












Click it and Unblock the Notifications