ಭಾರತ್ ಮಾತಾ ಕೀ ಜೈ ಅನ್ನೋಲ್ಲಾ ಎಂದಿದ್ದ ಓವೈಸಿ ಬಾಯಿಯಿಂದ ಜೈಹಿಂದ್

Posted By:
Subscribe to Oneindia Kannada

ಕಳೆದ ಭಾನುವಾರ (ಮಾ 13) ಮಹಾರಾಷ್ಟ್ರದ ಲಾಥೂರ್ ನಲ್ಲಿ "ಭಾರತ್ ಮಾತಾ ಕೀ ಜೈ" ಘೋಷಣೆ ಕೂಗುವುದಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ಅಸಾದುದ್ದೀನ್ ಓವೈಸಿ 'ಜೈಹಿಂದ್'ಎನ್ನವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

ಹಿಂದೂ, ಹಿಂದೂಸ್ಥಾನದ ಬಗ್ಗೆ ಕಿಡಿಕಾರುತ್ತಲೇ ಇರುವ ಹೈದರಾಬಾದಿನ ಸಂಸದ, ವಿವಾದಾತ್ಮಕ ಮುಸ್ಲಿಂ ನಾಯಕ, ಎಐಎಂಐಎಂ ಅಧ್ಯಕ್ಷ ಓವೈಸಿ, ತನ್ನ ವಿರುದ್ದ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಜೈಹಿಂದ್ ಎಂದಿದ್ದಾರೆ. (ನಗೆ ಬೀರಿದ ಓವೈಸಿ, ಠಾಕ್ರೆಗೆ ಮುಖಭಂಗ)

ಲಾಥೂರ್ ಜಿಲ್ಲೆಯ ಉದ್ಗೀರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಓವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನನ್ನ ಬಾಯಿಯಿಂದ 'ಭಾರತ್ ಮಾತಾಕೀ ಜೈ' ಘೋಷಣೆ ಬರುವುದಿಲ್ಲ ಎಂದು ಹೇಳಿದ್ದರು.(ಈ ಸುದ್ದಿಯನ್ನು ಒನ್ ಇಂಡಿಯಾ ಸುದ್ದಿದನಿ (podcast) ಮೂಲಕ ಕೇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ)

ನೂತನ ತಲೆಮಾರಿನವರು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಕೂಗುವುದನ್ನು ರೂಢಿಸಿಕೊಳ್ಳಬೇಕೆಂದು RSS ಮುಖ್ಯಸ್ಥ ಮೋಹನ್ ಭಾಗವತರ್ ಮಾರ್ಚ್ ಮೂರರಂದು ಹೇಳಿಕೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುತ್ತಾ ಓವೈಸಿ ಮೇಲಿನ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸುತ್ತಿದ್ದ ಓವೈಸಿ, ಸಂವಿಧಾನದಲ್ಲಿ ಎಲ್ಲೂ ಭಾರತ್ ಮಾತಾಕೀ ಜೈ ಕೂಗಬೇಕೆಂದು ಹೇಳಿಲ್ಲ. ಇಶ್ರತ್ ಜಹಾನ್ ಕುಟುಂಬಕ್ಕೆ ನಮ್ಮ ಬೆಂಬಲ ಮುಂದುವರಿಯಲಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. (ತಾಕತ್ತಿದ್ರೆ ಮೋದಿ ನನ್ನ ವಿರುದ್ಧ ನಿಂತು ಗೆಲ್ಲಲಿ)

ಓವೈಸಿ ಹೇಳಿಕೆ ವಿರುದ್ದ ಬೇಸರ ವ್ಯಕ್ತ ಪಡಿಸಿದ ರೋಷನ್ ಬೇಗ್, ಸ್ಲೈಡ್ ಕ್ಲಿಕ್ಕಿಸಿ

ಕೋರ್ಟ್ ನಲ್ಲಿ ಓವೈಸಿ ವಿರುದ್ದ ದೂರು

ಕೋರ್ಟ್ ನಲ್ಲಿ ಓವೈಸಿ ವಿರುದ್ದ ದೂರು

ಭಾರತ್ ಮಾತಾಕೀ ಜೈ ಎನ್ನುವ ಘೋಷಣೆಯನ್ನು ಕೂಗುವುದಿಲ್ಲ ಎನ್ನುವ ಹೇಳಿಕೆಯ ನಂತರ ಅಲಹಾಬಾದ್ ಕೋರ್ಟ್ ನಲ್ಲಿ ಎಐಎಂಐಎಂ ಪಕ್ಷದ, ಹೈದರಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಅಸಾದುದ್ದೀನ್ ಓವೈಸಿ ವಿರುದ್ದ ದೂರು ದಾಖಲಾಗಿತ್ತು.

ಜೈಹಿಂದ್ ಎಂದ ಓವೈಸಿ

ದೂರಿನ ಬಗ್ಗೆ ಹೈದರಾಬಾದ್ ನಲ್ಲಿ ಪ್ರತಿಕ್ರಿಯಿಸಿದ ಓವೈಸಿ, 'ನನಗೆ ನ್ಯಾಯಾಲದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕೋರ್ಟ್ ನಿಂದ ನನಗೆ ನ್ಯಾಯ ಸಿಗಲಿದೆ, ಜೈಹಿಂದ್ ' ಎಂದು ಹೇಳಿದ್ದಾರೆಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ.

ಓವೈಸಿ ಪಾಕಿಸ್ತಾನಕ್ಕೆ ಹೋಗಲಿ

ಓವೈಸಿ ಪಾಕಿಸ್ತಾನಕ್ಕೆ ಹೋಗಲಿ

ಭಾರತ್ ಮಾತಾಕೀ ಜೈ ಎನ್ನಲು ನಿರಾಕರಿಸುವವರು ದೇಶ ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಲಿ. ಮಹಾರಾಷ್ಟ್ರ ಸರಕಾರ ಓವೈಸಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆಂದು ಶಿವಸೇನೆ ಮುಖಂಡ ರಾಮದಾಸ್ ಕದಂ ಕಿಡಿಕಾರಿದ್ದಾರೆ.

ವೆಂಕಯ್ಯ ನಾಯ್ಡು ಬೇಸರ

ವೆಂಕಯ್ಯ ನಾಯ್ಡು ಬೇಸರ

ನಾವು ಹುಟ್ಟಿದ ದೇಶ ನಮಗೆ ತಾಯಿ ಸಮಾನ, ತಾಯಿಯನ್ನು ಪ್ರೀತಿಸುವುದು ಮತ್ತು ಗೌರವಿಸುವುದು ಪ್ರತಿಯೊಂದು ಮಕ್ಕಳ ಕರ್ತವ್ಯ. ಇದಕ್ಕೆ ಕೆಲವು ಮುಖಂಡರು ಆಕ್ಷೇಪ ವ್ಯಕ್ತ ಪಡಿಸುತ್ತಿರುವುದು ದುರದೃಷ್ಟಕರ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬೇಸರ ವ್ಯಕ್ತ ಪಡಿಸಿದ್ದಾರೆ.

ರೋಷನ್ ಬೇಗ್

ರೋಷನ್ ಬೇಗ್

ನಾವೆಲ್ಲಾ ಭಾರತೀಯರು, ಭಾರತ್ ಮಾತಾಕೀ ಜೈ ಎನ್ನುವುದರಲ್ಲಿ ತಪ್ಪೇನಿದೆ. ಓವೈಸಿ ನೀಡಿದ ಹೇಳಿಕೆಗೆ ನನ್ನ ಸಹಮತವಿಲ್ಲ. ಇಂತಹ ಹೇಳಿಕೆಗಳು ಎರಡು ಸಮುದಾಯಗಳ ನಡುವೆ ಕಂದಕ ಸೃಷ್ಟಿಸುತ್ತದೆ ಎಂದು ರಾಜ್ಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ಮೈಸೂರು ಘಟನೆ

ಮೈಸೂರು ಘಟನೆ

ಎಲ್ಲರದ್ದೂ ಒಂದೇ ಪ್ರಾಣ, ಮೈಸೂರಿನಲ್ಲಿ ನಡೆದ ಘಟನೆ (ಹಿಂದೂ ಕಾರ್ಯಕರ್ತನ ಹತ್ಯೆ) ವಿಷಾದನೀಯ. ಗೃಹ ಸಚಿವರ ಪರಮೇಶ್ವರ್ ಜೊತೆ ಮಾತನಾಡಿದ್ದೇನೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆಂದು ರೋಷನ್ ಬೇಗ್ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ (ಮಾ 15) ಹೇಳಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After refusing to chant 'Bharat Mata Ki Jai', Hyderabad MP Asaduddin Owaisi says 'Jai Hind'. He was reacting to the news of a petition being filed against him in the Allahabad High Court (ANI news)
Please Wait while comments are loading...