ಮಾಸ್ಕ್ ಹಾಕಿಲ್ಲ, ಸ್ಯಾನಿಟೈಸರ್ ಬಳಸಿಲ್ಲ- ರಾಮ್ ಗೋಪಾಲ್ ವರ್ಮ
ಹೈದರಾಬಾದ್, ಮೇ 19: ''ನಾನು ಇದುವರೆಗೆ ಮಾಸ್ಕ್ ಹಾಕಿಲ್ಲ ಹಾಗೂ ಸ್ಯಾನಿಟೈಸರ್ ಬಳಸಿಲ್ಲ'' ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಕೊರೊನಾ ಬಗ್ಗೆ ಮಾತನಾಡಿರುವ ಅವರು ಈ ವಿಷಯ ತಿಳಿಸಿದ್ದಾರೆ.
ಸರ್ಕಾರ ಕೊರೊನಾದಿಂದ ಮುಂಜಾಗ್ರತೆವಹಿಸುದಂತೆ ತಿಳಿಸಿದೆ. ಹಾಗಾಗಿ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸ್ಯಾನಿಟೈಸರ್ ಬಳಸುವುದು ಅಗತ್ಯವಾಗಿದೆ. ಆದರೆ, ಸರ್ಕಾರ, ಮಾಧ್ಯಮ, ಅಧಿಕಾರಿಗಳು ಯಾರೇ ಹೇಳಿದರೂ ರಾಮ್ ಗೋಪಾಲ್ ವರ್ಮ ಮಾಸ್ಕ್ ಹಾಗೂ ಸ್ಯಾನಿಟೈಸರ್ ನಿಂದ ದೂರ ಇದ್ದಾರಂತೆ.
''ಮನೆಯಿಂದ ಹೊರಗೆ ಹೋದರೆ ಮಾಸ್ಕ್ ಧರಿಸಬೇಕು. ನಾನು ಕೊರೊನಾ ಶುರು ಆದಾಗಿನಿಂದ ಎಲ್ಲೂ ಹೊರಗೆ ಹೋಗಿಲ್ಲ. ಒಂದೆರಡು ಬಾರಿ ಹೋಗಿದ್ದರೂ, ಬೇರೆಯವರಿಂದ ಬಹಳ ದೂರ ನಿಂತುಕೊಳ್ಳುತ್ತೇನೆ. ಬೇರೆಯವರಿಂದ ನನಗೆ ಕೊರೊನಾ ಬರಬಾರದು, ನನ್ನಿಂದ ಯಾರಿಗೂ ಹೋಗಬಾರದು ಹಾಗೆ ನೋಡಿಕೊಂಡಿದ್ದೇನೆ'' ಎಂದಿದ್ದಾರೆ.

ನಾನು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿಲ್ಲ ಯಾಕೆಂದರೆ, ಕೊರೊನಾ ವೈರಸ್‌ನಿಂದ ನಾನು ಸತ್ತರೆ ಪರವಾಗಿಲ್ಲ. ಆದರೆ, ನನಗೆ ವೈರಸ್ ಬಂದರೆ, ಬೇರೆಯವರಿಗೆ ಸೋಂಕು ತಗುಲಿಸಬಾರದು ಅಷ್ಟೇ ಎಂದು ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ ಸರ್ಕಾರ ನಿಯಮಗಳನ್ನು ಪಾಲಿಸಿದ್ದೇನೆ. ತಮ್ಮ ಹೊಸ ಸಿನಿಮಾ 'ಕ್ಲೈಮ್ಯಾಕ್ಸ್' ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೆದಿದ್ದು, ಸಾಮಾಜಿಕ ಅಂತರ ಕಾಪಾಡಿದ್ದೇನೆ ಎಂದಿದ್ದಾರೆ ವರ್ಮ.












Click it and Unblock the Notifications