ಹೈದರಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣಿಗೆ ಶರಣು
ಹೈದ್ರಬಾದ್, ಸೆ. 17 : ಹೈದರಾಬಾದ್ ವಿಶ್ವವಿದ್ಯಾಲಯ ಹಾಸ್ಟೇಲ್ ರೋಮ್ ನಲ್ಲಿ ವಿದ್ಯಾರ್ಥಿಯೊರ್ವ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎನ್. ಪ್ರವೀಣ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಸೆ.17 ಶುಕ್ರವಾರ ಬೆಳ್ಳಿಗ್ಗೆ 4 ಗಂಟೆ ಸುಮಾರಿಗೆ ಹಾಸ್ಟೇಲ್ ರೂಮ್ ನಂ 204 ರಲ್ಲಿ ನೇಣಿಗೆ ಶರಣಾಗಿದ್ದಾನೆ. ಹೈದ್ರಬಾದ್ ನ ಮಹೇಬೂಬ್ ನಗರ ಜಿಲ್ಲೆಯ ಶಾದ್ನಗರ್ ನಿವಾಸಿಯಾಗಿರುವ ಪ್ರವೀಣ್ ಕುಮಾರ್, ಹೈದರಾಬಾದ್ ವಿವಿಯಲ್ಲಿ ಪ್ರಥಮ ವರ್ಷ ಫೈನ್ ಆರ್ಟ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಈತ ಕಳೆದ ಎರಡು ತಿಂಗಳು ಹಿಂದಷ್ಟೇ ವಿವಿಯಲ್ಲಿ ಪ್ರವೇಶ ಪಡೆದುಕೊಂಡಿದ್ದ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲವೆಂದು ಗಚ್ಚಿಬೌಲಿ ಇನ್ಸ್ ಪೆಕ್ಟರ್ ಎನ್.ರಮೇಶ್ ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.












Click it and Unblock the Notifications