ವೈರಲ್ ವಿಡಿಯೋ: ಛೆ, ಇಂಥವರಿಗೆ ಮಕ್ಕಳ್ಯಾಕೆ ಬೇಕೋ!

ಹೈದರಾಬಾದ್, ಜುಲೈ 10: ಪತ್ನಿಯೊಂದಿಗೆ ಜಗಳವಾಡಿಕೊಂಡ ಪತಿ ತನ್ನ ಮಗುವನ್ನು ಆಟೋ ಮುಂದೆ ಬಿಸಾಕಿದ ವಿಕೃತ, ಅಮಾನುಷ ಘಟನೆಯೊಂದು ತೆಲಂಗಾಣದ ಹೈದರಾಬಾದಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 'ಛೆ, ಇಂಥವರಿಗೆ ಮಕ್ಕಳ್ಯಾಕೆ ಬೇಕೋ?' ಎಂದು ಜನರು ಪ್ರಶ್ನಿಸುತ್ತಿದ್ದಾರೆ!

ಶಿವ ಗೌಡ ಎಂಬಾತ ತನ್ನ ಪತ್ನಿಯೊಂದಿಗೆ ಜಗಳವಾಡಿ, ನಂತರ ಕುಡಿದು ಬಂದಿದ್ದಾನೆ. ಮನೆಯಲ್ಲಿದ್ದ ತನ್ನ ಮೂರು ವರ್ಷ ವಯಸ್ಸಿನ ಮಗುವನ್ನು ಎತ್ತಿಕೊಂಡು ಬಂದು, ಮಾನವೀಯತೆ ಇಲ್ಲದಂತೆ ಆಟೋ ಒಂದರ ಮುಂದೆ ಬಿಸಾಕಿದ್ದಾನೆ. ಮಗುವಿನ ದೇಹ ಆಟೋಕ್ಕೆ ತಗುಲಿ ಏಟು ಗಳಾಗಿವೆ. ಸಾಲದೆಂಬಂತೆ ಮತ್ತೆ ಆ ಮಗುವನ್ನು ಎತ್ತಿಕೊಂಡು ಹೋಗಿ ಹೊಡೆಯಲು ಪ್ರಯತ್ನಿಸಿದ್ದಾನೆ.

ಸುತ್ತ ಮುತ್ತಲ ಜನ ಆತನನ್ನು ತಡೆದಿದ್ದು, ನಂತರ ಆತ ಪರಾರಿಯಾಗಿದ್ದಾನೆ. ಇಷ್ಟಾದರೂ ಪತಿಯ ವಿರುದ್ಧ ದೂರು ನೀಡಲು ಪತ್ನಿ ಒಪ್ಪದ ಕಾರಣ, ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Hyderabad man bangs 3-year-old son against autorickshaw

ಘಟನೆಯ ನಂತರ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ನಿಲೋಫರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವೀಗ ಕುಟುಂಬ ಕಲ್ಯಾಣ ಇಲಾಖೆಯ ಸುಪರ್ಧಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+