ಭಾರತದ ಅತ್ಯುತ್ತಮ ನಗರ ಹೈದರಾಬಾದ್, ಕೆಳಗಿಳಿದ ಬೆಂಗಳೂರು!

ಹೈದರಾಬಾದ್, ಮಾರ್ಚ್ 21: ಕಡಿಮೆ ಅಪರಾಧ ಪ್ರಮಾಣ, ಒಳ್ಳೆ ವಾತಾವರಣದ ಕಾರಣಕ್ಕೆ 'ಮುತ್ತಿನ ನಗರಿ' ಹೈದರಾಬಾದ್ ಭಾರತದ ಅತ್ಯುತ್ತಮ ನಗರ ಎಂಬ ಕಿರೀಟ ಪಡೆದಿದೆ. ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ರೇಟಿಂಗ್ 2018 ಮಂಗಳವಾರ ಬಿಡುಗಡೆ ಆಗಿದ್ದು, ಅದರಲ್ಲಿ ಈ ಅಂಶ ಬಹಿರಂಗವಾಗಿದೆ.

ಸತತವಾಗಿ ನಾಲ್ಕನೇ ವರ್ಷ ಹೈದರಾಬಾದ್ ಗೆ ಭಾರತದ ಅತ್ಯುತ್ತಮ ನಗರ ಎಂಬ ಗೌರವ ಸಿಕ್ಕಿದೆ. ಇನ್ನು ಕಳೆದ ಎರಡು ವರ್ಷಗಳಿಂದ ಶ್ರೇಯಾಂಕದಲ್ಲಿ ಪುಣೆ ಮೇಲೇರುತ್ತಲೇ ಇದೆ. ಇನ್ನು ಜಾಗತಿಕ ಮಟ್ಟದಲ್ಲಿ ಹೇಳಬೇಕು ಅಂದರೆ ಹೈದರಾಬಾದ್ ಹಾಗೂ ಪುಣೆ ಎರಡಕ್ಕೂ 142ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಯೆನ್ನಾ.

Hyderabad best city to live in India: Survey

ಭಾರತದ ಉತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಹಾಗೂ ದೆಹಲಿ ಇದೆ. ಸಂಚಾರ ದಟ್ಟಣೆ, ವಾಯು ಮಾಲಿನ್ಯದಂಥ ಸಮಸ್ಯೆ ಎದುರಿಸುತ್ತಿರುವ ದೆಹಲಿ ಶ್ರೇಯಾಂಕದಲ್ಲಿ ಸತತವಾಗಿ ಮೂರನೇ ವರ್ಷ ಕೆಳ ಹಂತದಲ್ಲಿದೆ. ಮೆಟ್ರೋ ನಗರಗಳಾದ ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರು ಜೀವನ ಗುಣಮಟ್ಟದ ಸೂಚ್ಯಂಕದಲ್ಲಿ ಪುಣೆ ಮತ್ತು ಹೈದರಾಬಾದ್ ಗೆ ಹೋಲಿಸಿದರೆ ಕೆಳ ಮಟ್ಟದಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+