ಮುತ್ತಿನ ನಗರಿಯಲ್ಲಿ ರಾತ್ರಿ ಹೊತ್ತು ಗಗನಸಖಿ ಮೇಲೆ ರೇಪ್ ಯತ್ನ!

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 31: ಮುತ್ತಿನ ನಗರಿ ಹೈದರಾಬಾದಿನಲ್ಲಿ ಗಗನಸಖಿಯೊಬ್ಬರ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಏರ್ ಹೋಸ್ಟೆಸ್ ದೋಚಲು ಯತ್ನಿಸಿದ ಕ್ಯಾಬ್ ಚಾಲಕ ಯತ್ನಿಸಿದ್ದಾನೆ. ಆಕೆ ಬಳಿ ಹಣ ಇಲ್ಲ ಎಂದು ತಿಳಿದ ಮೇಲೆ ಲೈಂಗಿಕ ಕಿರುಕುಳ ಮಾಡಲು ಯತ್ನಿಸಿದ್ದಾನೆ.

24 ವರ್ಷ ವಯಸ್ಸಿನ ಗಗನಸಖಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಲು ಆರು ತಂಡಗಳನ್ನು ನೇಮಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿರುವ ಸಿಸಿಟಿವಿ ಕೆಮೆರಾ ಫುಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ. [ಅಣ್ತಮ್ಮ ಪವನ್ ಮೀಟ್ ಮಾಡೋಕೆ ಬಂದಿದ್ದೆ ಬ್ರದರ್: ಎಚ್ಡಿಕೆ]

Hyderabad: Airhostess molested, left stranded by Cab Driver

ಇಮ್ರಾನ್ ಮೇಲೆ ಅತ್ಯಾಚಾರ ಯತ್ನ, ಕಳ್ಳತನ ಆರೋಪ ಹೊರೆಸಲಾಗಿದೆ. ಸಂತ್ರಸ್ತ ಮಹಿಳೆ ಮಂಗಳವಾರ ಮುಂಜಾನೆ 2 ಗಂಟೆ ವೇಳೆಗೆ ತನ್ನ ಅಪಾರ್ಟ್ಮೆಂಟ್ ನಿಂದ ಹೊರ ಬಂದು ಮೆಡಿಕಲ್ ಶಾಪ್ ಕಡೆಗೆ ತೆರಳುತ್ತಿದ್ದರು. ಹತ್ತಿರದಲ್ಲಿದ್ದ ಫಾರ್ಮಸಿ ಮುಚ್ಚಿದ್ದರಿಂದ ಕ್ಯಾಬಿಗಾಗಿ ಕಾದಿದ್ದಾರೆ. ಇಮ್ರಾನ್ ಚಲಿಸುತ್ತಿದ್ದ ಕ್ಯಾಬ್ ಹತ್ತಿ ಸ್ವಲ್ಪ ದೂರ ತೆರಳಿದ ಬಳಿಕ ಹಲ್ಲೆ ಯತ್ನ ನಡೆದಿದೆ. ಈ ಬಗ್ಗೆ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೆಡಿಕಲ್ ಠಾಣೆಗೆ ಕರೆದೊಯ್ಯುವ ಬದಲು ಔಟರ್ ರಿಂಗ್ ರೋಡ್ (ORR) ಕಡೆಗೆ ಕಾರು ಚಲಾಯಿಸಿದ ನಂತರ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ.ನನ್ನ ಬಳಿ ಹಣ ಇಲ್ಲ ಎಂದು ತಿಳಿದ ಬಳಿಕ ನನ್ನನ್ನು ಕಾರಿನಿಂದ ಹೊರಕ್ಕೆ ನೂಕಿದ, ನನ್ನ ಮೈಮೇಲೆ ಕೈಯಾಡಿಸಿ ವಿಚಿತ್ರವಾಗಿ ವರ್ತಿಸಿದ. ನನ್ನ ಮೊಬೈಲ್ ಫೋನ್ ಕೂಡಾ ಕಸಿದುಕೊಂಡು ನನ್ನನ್ನು ನಿರ್ಜನ ಸ್ಥಳದಲ್ಲಿ ಬಿಟ್ಟು ಪರಾರಿಯಾದ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಷಂಶಾಬಾದ್ ಡಿಸಿಪಿ ಸಂಪ್ರೀತ್ ಸಿಂಗ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 24-year-old air hostess was allegedly molested, robbed and later abandoned at an isolated spot on the outskirts of Hyderabad early Tuesday morning.
Please Wait while comments are loading...