ಆಂಧ್ರಪ್ರದೇಶದಲ್ಲಿ 2 ರೂಪಾಯಿಗಾಗಿ ನಡೆಯಿತು ಬರ್ಬರ ಕೊಲೆ

ಹೈದರಾಬಾದ್, ನವೆಂಬರ್ 10: ಆಂಧ್ರಪ್ರದೇಶದಲ್ಲಿ ಕೇವಲ 2 ರೂಪಾಯಿಗೋಸ್ಕರ ಭೀಕರ ಕೊಲೆಯೇ ನಡೆದಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುವರ್ಣರಾಜು ಎಂಬುವವರು ಸೈಕಲ್‌ಗೆ ಗಾಳಿ ಹಾಕಿಸಿಕೊಳ್ಳಲು ಶಂಭು ಎಂಬುವವರ ಪಂಕ್ಚರ್ ಶಾಪ್‌ ಗೆ ಹೋಗಿದ್ದರು.

ಆ ಸಂದರ್ಭದಲ್ಲಿ ಸುರ್ವಣರಾಜು ಶಂಭು ಅವರಿಗೆ 2 ರೂಪಾಯಿ ಕಡಿಮೆ ನೀಡಿದ್ದರು. ಯಾಕೆ ಕಡಿಮೆ ನೀಡಿದ್ದೀಯಾ ಇನ್ನೂ ಎರಡು ರೂಪಾಯಿ ಕೊಡಬೇಕು ಎಂದು ಹೇಳಿದ್ದಕ್ಕೆ ಸಿಟ್ಟಾದ ಸುವರ್ಣರಾಜು ಶಂಭು ಮೇಲೆ ಹಲ್ಲೆ ನಡೆಸಿದ್ದ.

Horrific Murder In Andhra Pradesh For 2 Rupees

ಇದಕ್ಕೆ ಕೋಪಗೊಂಡ ಶಂಭು ಸ್ನೇಹಿತ ಸುವರ್ಣರಾಜು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಕಾರಣ ಬಹಿರಂಗಗೊಂಡಿದೆ. ಕೇವಲ 2 ರೂಪಾಯಿಗೋಸ್ಕರ ಕೊಲೆ ನಡೆದಿದೆಯೋ ಅಥವಾ ವೈಷಮ್ಯ ಇತ್ತಾ ಎನ್ನುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+