• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿಯರೇ ಫೇಸ್ಬುಕ್ ನಲ್ಲಿ ಚಾಟ್ ಮಾಡೋ ಮುನ್ನ ಎಚ್ಚರ!

By Vanitha
|

ಹೈದರಾಬಾದ್, ಸೆಪ್ಟೆಂಬರ್, 12 : ಯುವತಿಯರೇ..ಫೇಸ್ ಬುಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ? ನೀವು ಫೇಸ್ ಬುಕ್ ಸ್ನೇಹಿತರೊಂದಿಗೆ ಚಾಟ್ ಮಾಡುತ್ತೀರಾ? ಅಂದ-ಚಂದದ ಭಾವಚಿತ್ರ ಅಪ್ಲೋಡ್ ಮಾಡುತ್ತೀರಾ? ಹಾಗಾದರೆ ನೀವು ಈ ಸುದ್ದಿ ತಪ್ಪದೇ ಓದಲೇಬೇಕು.

ಹೈದರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಅಬ್ದುಲ್ ಮಜೀದ್ ಎಂಬಾತ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡುತ್ತಾ, ಹಣ ಕೀಳುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ಈತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.[ಫೇಸ್ ಬುಕ್ ನಲ್ಲಿ ಹನಿ ಟ್ರ್ಯಾಪ್ ಮಾಡ್ತಾರೆ, ಹುಷಾರು!]

ಈತನ ನಕಲಿ ಖಾತೆಯಲ್ಲಿ ಸುಮಾರು ಇನ್ನೂರು ಹುಡುಗಿಯರು ಸ್ನೇಹಿತರಾಗಿದ್ದು, ಇದರಲ್ಲಿ ಸುಮಾರು 60 ಹುಡುಗಿಯರಿಂದ ಈತ ಹಣ ಪಡೆದು ವಂಚಿಸಿದ್ದಾನೆ. ಈತನ ಈ ಅಸಹ್ಯ ವರ್ತನೆಗೆ ತುತ್ತಾದ ಸೈಬರಾಬಾದ್ ಯುವತಿಯ ತಾಯಿಯೊಬ್ಬಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಪರಿಣಾಮ ಈ ಕೃತ್ಯ ಬೆಳಕಿಗೆ ಬಂದಿದೆ.

ಈತ ಏನು ಮಾಡುತ್ತಿದ್ದ?

ಹೈದರಾಬಾದಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಅಬ್ದುಲ್ ಮಜೀದ್ ಫೇಸ್ ಬುಕ್ ನಲ್ಲಿ ತನ್ನದಲ್ಲದ ಹೆಸರಿನಲ್ಲಿ ಖಾತೆ ತೆರೆಯುತ್ತಿದ್ದ. ಬಳಿಕ ನಗರದ ಕೆಲವು ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಕೆಲವು ಹುಡುಗಿಯರಿಗೆ ಫ್ರೆಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಯುವತಿಯರು ಸ್ನೇಹಿತರಾದ ಬಳಿಕ ಫೇಸ್ ಬುಕ್‌ ನಲ್ಲಿ ಅವರೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಾ ಸಂಪರ್ಕದಲ್ಲಿರುತ್ತಿದ್ದ.

ಇಬ್ಬರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತಿದ್ದಂತೆ ಹುಡುಗಿಯರಿಗೆ ತಮ್ಮ ಖಾಸಗಿ ಫೋಟೋ ಕಳುಹಿಸಲು ಕೇಳುತ್ತಿದ್ದ. ಈತನ ಮೇಲೆ ಭಾರೀ ಭರವಸೆ ಇಟ್ಟ ಹುಡುಗಿಯರು ಖಾಸಗಿ ಫೋಟೋಗಳನ್ನು ಕಳುಹಿಸಿಕೊಡುತ್ತಿದ್ದರು.[ರಾಜ್ ಯೂಸ್ಲೆಸ್ ನಟ ಅನ್ನೋಕೆ ಎಷ್ಟು ಧೈರ್ಯ ಇವನಿಗೆ?]

ಈತ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಗ್ನ ಫೋಟೋಗಳನ್ನು ಕಳುಹಿಸುವಂತೆಯೂ ಪೀಡಿಸುತ್ತಿದ್ದ. ಇದನ್ನು ತಿರಸ್ಕರಿಸಿದ ಯುವತಿಯರಿಗೆ ಆತನೊಂದಿಗೆ ನಡೆಸಿದ ಸಂದೇಶದ ಎಲ್ಲಾ ಮಾಹಿತಿಯನ್ನು ಮತ್ತೊಬ್ಬರಿಗೆ ಕಳುಹಿಸಿಕೊಡುವುದಾಗಿ ಹೆದರಿಸುತ್ತಿದ್ದ.

ಇವನ ಬೆದರಿಕೆಗೆ ತಲೆಕೆಡಿಸಿಕೊಂಡ ಯುವತಿಯರು ಫೋಟೋ ಕಳುಹಿಸಿಕೊಟ್ಟ ತಕ್ಷಣ ಅವರಿಗೆ ಫೋನ್ ನಲ್ಲಿ ಬ್ಲಾಕ್ ಮೇಲ್ ಮಾಡುತ್ತಾ ಅವರಿಂದ ಹಣ ಕೀಳುತ್ತಿದ್ದನು.

English summary
Cyber crime police arrested a facebook facker on Friday. This faker is studying an Engineering in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X