• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಮ್ಮಾರ್ ಕೇಸ್: ರಾಮ್ ಚರಣ್ ಆಸ್ತಿಗೆ ಬಂತು ಕುತ್ತು?

By Mahesh
|

ಹೈದರಾಬಾದ್, ಸೆ.16: ವಿವಾದಿತ ಎಮ್ಮಾರ್ ಟೌನ್ ಶಿಪ್ ನಲ್ಲಿ ನಿವೇಶನ ಖರೀದಿ ಹಗರಣದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ ಅವರ ಹೆಸರು ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬ ಸುದ್ದಿ ಹಬ್ಬಿದೆ.

ಎಮ್ಮಾರ್-APIIC ಟೌನ್ ಶಿಫ್ ಫಲಾನುಭವಿಗಳ ಹೆಸರು ನೋಡಿದರೆ ಅಖಂಡ ಆಂಧ್ರದ ಭಾರಿ ಕುಳಗಳ ಹೆಸರುಗಳು ಹೊರ ಬೀಳುತ್ತದೆ. ಈ ಪ್ರಕರಣ ಯಾವ ಪ್ರಮಾಣದ ಅಕ್ರಮಗಳ ಸಂತೆ ಎಂಬುದು ಗೊತ್ತಾಗುತ್ತದೆ. [ವಿವಿಐಪಿ ಹೆಸರುಳ್ಳ ಪಟ್ಟಿ ಇಲ್ಲಿದೆ ನೋಡಿ]

ಸೀಮಾಂಧ್ರ ಮಾಧ್ಯಮಗಳ ವರದಿ ಪ್ರಕಾರ ಜಾರಿ ನಿರ್ದೇಶನಾಲಯ(ED) ಶೀಘ್ರದಲ್ಲೇ ರಾಮ್ ಚರಣ್ ತೇಜ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ. ಬಹುಕೋಟಿ ಎಮ್ಮಾರ್ APIIC ಟೌನ್ ಶಿಫ್ ಹಗರಣದ ಫಲಾನುಭವಿಗಳ ಮೇಲೆ ಮನೆಗಳ ದಾಳಿ ನಡೆಯುವ ಸಂಭವವಿದೆ ಎನ್ನಲಾಗಿದೆ.

ಈ ಸುದ್ದಿಗೆ ಪೂರಕವಾಗಿ ಕಳೆದ ವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೈದರಾಬಾದಿನ ಬೌಲ್ಡರ್ ಹಿಲ್ಸ್, ಮಾಣಿಕೊಂಡಾದಲ್ಲಿ 19 ನಿವೇಶನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ ರಾಮ್ ಚರಣ್ ತೇಜ ಹಾಗೂ ಮಾಜಿ ಕ್ರಿಕೆಟರ್ ವಿ ಚಾಮುಂಡೇಶ್ವರನಾಥ್ ಅವರ ನಿವೇಶನಗಳಿವೆ ಎಂದು ವರದಿಯಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಲೆಕ್ಕಾಚಾರದಂತೆ ಮನಿಲಾಂಡ್ರಿಗ್ ನಿಯಂತ್ರಣ ಕಾಯ್ದೆ ಪ್ರಕಾರ ವಶಕ್ಕೆ ತೆಗೆದುಕೊಂಡ ಆಸ್ತಿ ಮೌಲ್ಯ ಸುಮಾರು 72 ಕೋಟಿ ರು ದಾಟುತ್ತದೆಯಂತೆ. ಇದು ಬರೀ ಅಂದಾಜು ಮೊತ್ತವಾಗಿದ್ದು, ಆಸ್ತೊ ಮೌಲ್ಯ ಇನ್ನೂ ಅಧಿಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈದರಾಬಾದಿನ ಬೌಂಡರ್ ಹಿಲ್ಸ್ ನಲ್ಲಿರುವ Emaar Hills Township (EHTPL) ಮೇಲೆ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎನ್ ಶ್ರೀಧರ್ ಅವರು ದಾಳಿ ನಡೆಸಿ ಆಸ್ತಿ ವಶಪಡಿಸಿಕೊಂಡಿದ್ದಾರೆ. ದೆಹಲಿಯಲ್ಲೂ EHTPLಗೆ ಸೇರಿರುವ ಆಸ್ತಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

2005-2009ರ ನಡುವಿನ ಅವಧಿಯಲ್ಲಿ ಈ ಅಕ್ರಮ ನಡೆದಿತ್ತು. ದುಬೈನ ಎಮ್ಮಾರ್ ನಿರ್ಮಾಣ ಸಂಸ್ಥೆ ಟೌನ್ ಶಿಪ್ ಅಭಿವೃದ್ಧಿಪಡಿಸಿತ್ತು. ಹೈದರಾಬಾದಿನ ಗಚಿಬೌಲಿ ಪ್ರದೇಶದಲ್ಲಿ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (APPIC) ರೈತರಿಂದ 535 ಎಕರೆ ಕಿತ್ತುಕೊಂಡು ಈ ಟೌನ್ ಶಿಪ್ ನಿರ್ಮಾಣವಾಗಿತ್ತು.

ಆಂಧ್ರ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಕುತೂಹಲದ ಸಂಗತಿಯೆಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಮತ್ತು ಟಿಡಿಪಿ ಶಾಸಕರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.

ಈಗಿನ ವೈಎಸ್ಆರ್ ಕಾಂಗ್ರೆಸ್ ನ ಅಧಿನಾಯಕ ಜಗನ್ ಮೋಹನ್ ರೆಡ್ಡಿ ಸಹ ಈ ಅಕ್ರಮದಲ್ಲಿ ಪರೋಕ್ಷವಾಗಿ ಭಾಗಿರುವ ದಾಖಲೆಗಳು ಸಿಕ್ಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ತನಿಖೆ ಮುಂದುವರೆದಿದ್ದು ಮತ್ತೊಮ್ಮೆ ಗಣ್ಯಾತಿಗಣ್ಯರ ಮನೆ ಬಾಗಿಲನ್ನು ತನಿಖೆ ಅಧಿಕಾರಿಗಳು ತಟ್ಟುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hyderabad local media reports, the Enforcement Directorate (ED) has taken a possession of actor Ram Charan's property in connection with the multi-crore Emaar-APIIC township scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more