Get Updates
Get notified of breaking news, exclusive insights, and must-see stories!

ಕಪ್ಪುಹಣ ಬಳಕೆ ಆರೋಪ, ಕಾಂಗ್ರೆಸ್ಸಿಗೆ ಐಟಿ ಶೋಕಾಸ್ ನೋಟಿಸ್

ಹೈದರಾಬಾದ್, ಡಿಸೆಂಬರ್ 03: ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ಕಾಂಗ್ರೆಸ್ ಪಕ್ಷಕ್ಕೆ ಕಪ್ಪು ಹಣ ಹರಿದು ಬಂದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಮೊತ್ತಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡುವಂತೆ ಸೂಚಿಸಿ ಈ ಹಿಂದೆ ನೋಟಿಸ್ ನೀಡಲಾಗಿತ್ತು. ನವೆಂಬರ್ 04ರಂದು ಆದಾಯ ಇಲಾಖೆ ಕಚೇರಿಗೆ ಹಾಜರಾಗುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ಯಾರೂ ಕೂಡಾ ಹಾಜರಾಗಿರಲಿಲ್ಲ.

Congress gets I-T show cause notice over alleged black money inflow

ಇತ್ತೀಚೆಗೆ ಹೈದರಾಬಾದಿನಲ್ಲಿ ರಾಜಕೀಯ ಪಕ್ಷ, ಸೆಲೆಬ್ರಿಟಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಈ ವೇಳೆ ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಹವಾಲ ಸಂಪರ್ಕದ ಮೂಲಕ ಕಾಂಗ್ರೆಸ್ಸಿಗೆ 170 ಕೋಟಿ ರು ದೇಣಿಗೆ ರೂಪದಲ್ಲಿ ಸಂದಾಯವಾಗಿರುವುದು ಪತ್ತೆಯಾಗಿದೆ.

ಸರ್ಕಾರಿ ಯೋಜನೆಗಳ ಗುತ್ತಿಗೆ ಪಡೆದಿದ್ದ ಆ ಸಂಸ್ಥೆ ಬೋಗಸ್ ಬಿಲ್ ಗಳನ್ನು ಲಗತ್ತಿಸಿ ಈ ಮೊತ್ತವನ್ನು ತೋರಿಸಲಾಗಿದೆ ಎಂಬ ಮಾಹಿತಿಯಿದೆ. ಹೀಗಾಗಿ, ಈ ಬಗ್ಗೆ ಸ್ಪಷ್ಟನೆ ಕೋರಿ ಕಾಂಗ್ರೆಸ್ ಪಕ್ಷ ಹಾಗೂ ನಿರ್ಮಾಣ ಸಂಸ್ಥೆಗೆ ನೋಟಿಸ್ ಕಳಿಸಲಾಗಿದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+