• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿ

|

ಹೈದರಾಬಾದ್, ಜುಲೈ 14: ಹೈದ್ರಾಬಾದ್ ಮೂಲದ ಬಯೋಫರ್ ಇಂಡಿಯಾ ಫಾರ್ಮಾಸಿಟಿಕಲ್ಸ್ ತನ್ನ ಫೆವಿಪಿರಾವಿರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದನ್ನು ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ಕೋವಿಡ್-19 ಪ್ರಕರಣಗಳಿಗೆ ರೋಗನಿರೋಧಕವನ್ನಾಗಿ ಬಳಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಣ (ಡಿಸಿಜಿಐ) ಅನುಮತಿ ನೀಡಿದೆ.

   ಒಂದು ವಾರದ ಲಾಕ್ ಡೌನ್ , ಎನಿರುತ್ತೆ , ಎನಿರಲ್ಲಾ ? | karnataka Lockdown | Oneindia Knanada

   ಫೆವಿಪಿರಾವಿರ್ ಒಂದು ಸಕ್ರಿಯ ಫಾರ್ಮಾಸಿಟಿಕಲ್ ಇನ್ ಗ್ರೆಡಿಯೆಂಟ್ (ಎಪಿಐ) ಆಗಿದ್ದು ಮತ್ತು ಅದರ ಉತ್ಪಾದನೆಯನ್ನು ಹೆಚ್ಚು ಮಾಡಿರುವುದಾಗಿ ಬಯೋಫರ್ ಇಂಡಿಯಾ ಫಾರ್ಮಾಸಿಟಿಕಲ್ಸ್ ಘೋಷಿಸಿದೆ. ಭಾರತದಲ್ಲಿ ಎಪಿಐಯನ್ನು ಉತ್ಪಾದಿಸಲು ಬಯೋಫರ್ ಡಿಸಿಜಿಐನಿಂದ ಪರವಾನಗಿ ಪಡೆದುಕೊಂಡಿದೆ ಮತ್ತು ರಫ್ತು ಮಾಡಲು ಸಹ ಅನುಮತಿ ಪಡೆದುಕೊಂಡಿದೆ.

   ಕೊವಿಡ್ 19 ಔಷಧಿ ಬೆಲೆ ಮಾತ್ರೆಯೊಂದಕ್ಕೆ 75 ರು ಮಾತ್ರ!

   ಭಾರತದಲ್ಲಿ 911,629 ಕೊವಿಡ್ 19 ಪ್ರಕರಣಗಳಿದ್ದು, 23,788 ಸಾವು ಕಂಡಿದೆ. ಫೆವಿಪಿರಾವಿರ್ ಒಂದು ಸಕ್ರಿಯ ಫಾರ್ಮಾಸಿಟಿಕಲ್ ಇನ್ ಗ್ರೆಡಿಯೆಂಟ್(ಎಪಐ) ಬಳಸಿಕೊಂಡು ಗ್ಲೆನ್ ಮಾರ್ಕ್ ಫಾರ್ಮಾ ಕೂಡಾ antiviral ಡ್ರಗ್ (FabiFlu)ಉತ್ಪಾದಿಸಿದ್ದು, ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೆ ಬಳಸಲು ಅನುಮತಿ ಪಡೆದುಕೊಂಡಿದೆ. ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹಾಗೂ ಬೆಲೆ ಪ್ರತಿ ಮಾತ್ರೆಗೆ 75 ರು ಮಾತ್ರ ನಿಗದಿ ಮಾಡಲಾಗಿದೆ.

   ಟರ್ಕಿಶ್ ಪಾಲುದಾರರ ಸಹಯೋಗ

   ಟರ್ಕಿಶ್ ಪಾಲುದಾರರ ಸಹಯೋಗ

   ಟರ್ಕಿಯಲ್ಲಿಯೂ ಸಹ ಸ್ಥಳೀಯ ಟರ್ಕಿಶ್ ಪಾಲುದಾರರ ಸಹಯೋಗದಲ್ಲಿ ಈ ಔಷಧಿಗೆ ಅನುಮೋದನೆ ಪಡೆದುಕೊಂಡಿದೆ. ಇದರ ಜತೆಗೆ ಭಾರತದಲ್ಲಿ ಈ ಉತ್ಪನ್ನವನ್ನು ವಾಣಿಜ್ಯೀಕರಣ ಮಾಡುವ ಸಲುವಾಗಿ ಹಲವಾರು ಭಾರತೀಯ ಕಂಪನಿಗಳೊಂದಿಗೆ ಮಾತುಕತೆಯನ್ನು ನಡೆಸುತ್ತಿದೆ. ಅದೇ ರೀತಿ ರಫ್ತಿಗಾಗಿ ಬಾಂಗ್ಲಾದೇಶ ಮತ್ತು ಈಜಿಪ್ಟ್ ನ ಕಂಪನಿಗಳ ಜತೆಯಲ್ಲೂ ಚರ್ಚೆ ನಡೆಸುತ್ತಿದೆ.

   ಡಾ.ಮಾಣಿಕ್ ರೆಡ್ಡಿ ಪುಲ್ಲಗುರ್ಲಾ

   ಡಾ.ಮಾಣಿಕ್ ರೆಡ್ಡಿ ಪುಲ್ಲಗುರ್ಲಾ

   ಬಯೋಫರ್ ನ ಸಂಸ್ಥಾಪಕ ಮತ್ತು ಮುಖ್ಯ ವೈಜ್ಞಾನಿಕ ಅಧಿಕಾರಿ (ಸಿಎಸ್ಒ) ಡಾ.ಮಾಣಿಕ್ ರೆಡ್ಡಿ ಪುಲ್ಲಗುರ್ಲಾ ಅವರು ಈ ಬಗ್ಗೆ ಮಾತನಾಡಿ, ''ಕೋವಿಡ್-19 ಫಾರ್ಮಾಸಿಟಿಕಲ್ ಕಂಪನಿಗಳು ತ್ವರಿತವಾಗಿ ಔಷಧಿಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯತೆಯನ್ನು ತಂದೊಡ್ಡಿದೆ. ಸುರಕ್ಷತೆಯಲ್ಲಿ ರಾಜೀ ಮಾಡಿಕೊಳ್ಳದೇ ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳುವ ಪರಿಸ್ಥಿತಿಯನ್ನು ಮುಂದಿಟ್ಟಿದೆ. ನಮ್ಮ ಫೆವಿಪಿರಾವಿರ್ ಎಲ್ಲಾ ಅತ್ಯುತ್ತಮ ದರ್ಜೆಯ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂಬುದನ್ನು ನಾವು ಖಾತರಿಪಡಿಸುತ್ತಿದ್ದೇವೆ ಎಂದರು.

   ಭಾರತದಲ್ಲಿ ಕೊವಿಡ್19 ಕೊಲ್ಲಲು ಈ ಲಸಿಕೆಯೇ ರಾಮಬಾಣ?

   ಯುಎಸ್ ಮತ್ತು ಇಯು ನಿಯಮಾವಳಿ

   ಯುಎಸ್ ಮತ್ತು ಇಯು ನಿಯಮಾವಳಿ

   ನಮ್ಮ ಉತ್ಪಾದನಾ ಘಟಕದಲ್ಲಿ ಯುಎಸ್ ಮತ್ತು ಇಯು ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಮತ್ತು ಆಂತರಿಕವಾಗಿ ಶುದ್ಧತೆ ಹಾಗೂ ಗುಣಮಟ್ಟದ ಪರೀಕ್ಷೆಗಳನ್ನು ಕಠಿಣ ರೀತಿಯಲ್ಲಿ ಮಾಡುತ್ತಿದ್ದೇವೆ. ಭಾರತದಲ್ಲಿ ಫೆವಿಪಿರಾವಿರ್ ನ ಅಗತ್ಯತೆಯನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ರಫ್ತಿನ ಬದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳದೇ ಸ್ಥಳೀಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಾವು ಉತ್ಪನ್ನವನ್ನು ಉತ್ಪಾದಿಸುತ್ತೇವೆ ಎಂದು ಡಾ.ಮಾಣಿಕ್ ರೆಡ್ಡಿ ತಿಳಿಸಿದರು.

   ಬಯೋಫರ್ ನ ಸಿಇಒ ಡಾ.ಜಗದೀಶ್

   ಬಯೋಫರ್ ನ ಸಿಇಒ ಡಾ.ಜಗದೀಶ್

   ಬಯೋಫರ್ ನ ಸಿಇಒ ಡಾ.ಜಗದೀಶ್ ಬಾಬು ರಂಗಿಸೆಟ್ಟಿ ಅವರು ಮಾತನಾಡಿ, ''ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾಗೆ ಕರೆ ನೀಡಿರುವ ನಿಟ್ಟಿನಲ್ಲಿ ಬಯೋಫರ್ ನ ಫೆವಿಪಿರಾವಿರ್ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾವಾಗಿದೆ. ಈ ಮೂಲಕ ವೋಕಲ್ ಫಾರ್ ಲೋಕಲ್ ಆಗಿದೆ. ಬಯೋಫರ್ ನ ಫೆವಿಪಿರಾವಿರ್ ಶೇ.100 ರಷ್ಟು ಮೇಡ್ ಇನ್ ಇಂಡಿಯಾ ಆಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತದೆ. ಫೆವಿಪಿರಾವಿರ್ ಅನ್ನು ತಯಾರಿಸಲು ನಾವು ಯಾವುದೇ ಆಮದು ಉತ್ಪನ್ನಗಳ ಮೇಲೆ ಅವಲಂಬಿತರಾಗಿಲ್ಲ. ಎಲ್ಲಾ ಕಚ್ಚಾ ವಸ್ತುಗಳು ಮತ್ತು ಉಪಉತ್ಪನ್ನಗಳನ್ನು ಸ್ಥಳೀಯವಾಗಿ ಅಥವಾ ಕಂಪನಿಯಲ್ಲೇ ತಯಾರಿಸಿಕೊಳ್ಳುತ್ತಿದ್ದೇವೆ. ಕೊವಿಡ್-19 ವಿರುದ್ಧ ಇಟ್ಟಿರುವ ನಮ್ಮ ದೇಶದ ಹಲವಾರು ಹೆಜ್ಜೆಗಳಿಗೆ ಈ ಎಪಿಐ ನೆರವಾಗುತ್ತದೆ ಎಂಬ ವಿಶ್ವಾಸ ನಮಗಿದೆ'' ಎಂದು ತಿಳಿಸಿದರು.

   English summary
   Biophore India Pharmaceuticals, a city-based firm, has received license from the Drug Controller General of India (DCGI) to manufacture Favipiravir, a drug used in the finished formulation to treat mild to moderate cases of COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X