ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಶಾಕ್: 12 ಶಾಸಕರು ಟಿಆರ್ ಎಸ್ ಗೆ!
ಹೈದರಾಬಾದ್, ಜೂನ್ 07: ಲೋಕಸಭೆ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ತೆಲಂಗಾಣದಲ್ಲಿ ನಂಬಲಸಾಧ್ಯವಾದ ಆಘಾತ ಎದುರಾಗಿದೆ.
ಕಾಂಗ್ರೆಸ್ 18 ಶಾಸಕರನ್ನು 12 ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ ಸೇರಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗುವ ಸೂಚನೆ ದೊರೆತಿದೆ.
ಇದಕ್ಕೂ ಮುನ್ನವೇ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷವನ್ನು ಟಿಆರ್ ಎಸ್ ಜೊತೆ ವಿಲೀನ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಆ ಬಗ್ಗೆ ಪಕ್ಷ ಇನ್ನೂ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಹನ್ನೆರಡು ಶಾಸಕರು ಪಕ್ಷ ತೊರೆದಿದ್ದು ರಾಷ್ಟ್ರೀಯ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

"ಟಿಆರ್ ಎಸ್ ನ ದೂರದೃಷ್ಟಿ ಮತ್ತು ಆಡಳಿತ ವೈಖರಿಯಿಂದ ಪ್ರಭಾವಿತರಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ" ಕಾಂಗ್ರೆಸ್ ತೊರೆದ ಶಾಸಕರು ತಿಳಿಸಿದ್ದಾರೆ.












Click it and Unblock the Notifications