ಭಾರತಕ್ಕೆ ಕಾಲಿಟ್ಟ ಕೊರೊನಾ: ಸಿನಿಮಾ ನಟಿಯಿಂದ ಬೇಜವಾಬ್ದಾರಿ ವಿಡಿಯೋ!

ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವಕ್ಕೆ ವಿಶ್ವವೇ ಬೆಚ್ಚಿ ಬಿದ್ದಿದೆ. ಮಾರಣಾಂತಿಕ ವೈರಸ್ ನಿಂದಾಗಿ ಚೀನಾದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಡೆಡ್ಲಿ ಕೊರೊನಾ ಇದೀಗ ಭಾರತಕ್ಕೂ ಕಾಲಿಟ್ಟಿದೆ. ದೆಹಲಿ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಕೊರೊನಾ ಪ್ರಕರಣಗಳು ವರದಿ ಆಗಿದೆ.

Recommended Video

      Actress Charmy Kaur posts a very insensitive video

      ಬೆಂಗಳೂರಿನಿಂದ ತೆಲಂಗಾಣಕ್ಕೆ ತೆರಳಿದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಹೀಗಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಭಯ, ಆತಂಕ ಮನೆ ಮಾಡಿದೆ.

      ಹೀಗಿರುವಾಗಲೇ, ಕನ್ನಡ ಚಿತ್ರದಲ್ಲೂ ನಟಿಸಿದ ಟಾಲಿವುಡ್ ನ ಪ್ರಖ್ಯಾತ ಸಿನಿಮಾ ನಟಿ ಚಾರ್ಮಿ ಕೌರ್ ಬೇಜವಾಬ್ದಾರಿ ವಿಡಿಯೋ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಓದಿರಿ...

      ವಿಡಿಯೋ ಮಾಡಿದ ಚಾರ್ಮಿ ಕೌರ್

      ''ಆಲ್ ದಿ ಬೆಸ್ಟ್.. ಯಾಕೆ ಅಂತ ಗೊತ್ತಾ.. ದೆಹಲಿ ಮತ್ತು ತೆಲಂಗಾಣಕ್ಕೆ ಕೊರೊನಾ ವೈರಸ್ ಕಾಲಿಟ್ಟಿದೆ. ಹೀಗಾಗಿ, ಆಲ್ ದಿ ಬೆಸ್ಟ್'' ಅಂತ ಹೇಳಿ ಕಿಸಕ್ ಅಂತ ನಟಿ ಚಾರ್ಮಿ ಕೌರ್ ಜೋರಾಗಿ ನಗುತ್ತಾರೆ. ಈ ವಿಡಿಯೋನ ಟಿಕ್ ಟಾಕ್ ನಲ್ಲಿ ಚಾರ್ಮಿ ಕೌರ್ ಶೇರ್ ಮಾಡಿಕೊಂಡಿದ್ದರು.

      ಆಕ್ರೋಶಗೊಂಡ ನೆಟ್ಟಿಗರು

      ಆಕ್ರೋಶಗೊಂಡ ನೆಟ್ಟಿಗರು

      ಕೊರೊನಾ ವೈರಸ್ ಭಾರತಕ್ಕೆ ಬಂದಿರುವುದು ದೊಡ್ಡ ಜೋಕ್ ಎಂಬಂತೆ ಚಾರ್ಮಿ ಕೌರ್ ನಗಾಡಿರುವುದಕ್ಕೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಚಾರ್ಮಿ ಕೌರ್ ತೋರಿದ ಬೇಜವಾಬ್ದಾರಿ ವರ್ತನೆಗೆ ನೆಟ್ಟಿಗರ ಕಣ್ಣು ಕೆಂಪಾಗಿದೆ. ಹೀಗಾಗಿ, ಕೆಲವರು ಚಾರ್ಮಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

      ಗಂಭೀರತೆ ಅರಿತ ಚಾರ್ಮಿ ಕೌರ್

      ಗಂಭೀರತೆ ಅರಿತ ಚಾರ್ಮಿ ಕೌರ್

      ಕೊರೊನಾ ವೈರಸ್ ಕುರಿತಾಗಿ ಪರಿಸ್ಥಿತಿಯ ಗಂಭೀರತೆ ಅರಿತ ಚಾರ್ಮಿ ಕೌರ್, ಆ ವಿಡಿಯೋ ಪೋಸ್ಟ್ ನ ಡಿಲೀಟ್ ಮಾಡಿದ್ದಾರೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ. ''ನಾನು ಎಲ್ಲರ ಕಾಮೆಂಟ್ ಗಳನ್ನು ಓದಿದ್ದೇನೆ. ನಾನು ಮಾಡಿದ ವಿಡಿಯೋಗಾಗಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಜಾಗೃತವಾಗಿರುತ್ತೇನೆ'' ಎಂದು ನಟಿ ಚಾರ್ಮಿ ಕೌರ್ ಟ್ವೀಟ್ ಮಾಡಿದ್ದಾರೆ.

      ಡೆಡ್ಲಿ ಕೊರೊನಾ

      ಡೆಡ್ಲಿ ಕೊರೊನಾ

      ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ 3000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಚೀನಾವೊಂದರಲ್ಲೇ 2900 ಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಭಾರತದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+