5 ದಿನಗಳಿಂದ ಬಾತ್‌ರೂಮಿನಲ್ಲಿ ಬಂಧಿಯಾಗಿದ್ದ ಬಾಲಕಿ ಬದುಕಿ ಬಂದಿದ್ದು ಹೇಗೆ?
ಹೈದರಾಬಾದ್, ಏ. 27: ಐದು ದಿನಗಳ ಕಾಲ ಬಾತ್‌ರೂಮಿನಲ್ಲಿ ಬಂಧಿಯಾಗಿದ್ದ ಬಾಲಕಿ ಬದುಕಿ ಬಂದಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಐದು ದಿನಗಳ ಕಾಲ ಬಾತ್‌ರೂಮಿನಲ್ಲೇ ಇದ್ದು ಕೇವಲ ನೀರು ಸೇವಿಸಿ ಜೀವ ಉಳಿಸಿಕೊಂಡಿರುವ ಏಳು ವರ್ಷದ ಪೋರಿಯ ಸತ್ಯ ಕತೆ ಇದು.ತಾರಸಿಯಲ್ಲಿ ಆಟವಾಡಿಕೊಂಡಿದ್ದ ಬಾಲಕಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ, ಬೀಳುವುದನ್ನು ತಪ್ಪಿಸಿಕೊಳ್ಳಲು ಹೋಗಿ ಪಕ್ಕದ ಮನೆಯ ಬಾತ್‌ರೂಮಿನೊಳಗೆ ಬಿದ್ದಿದ್ದಾಳೆ.
ಎಚ್ಚರ ತಪ್ಪಿದೆ. ಎಚ್ಚರವಾದ ಬಳಿಕ ಸಹಾಯಕ್ಕೆಂದು ಅಂಗಲಾಚಿದ್ದಾಳೆ ಆದರೆ ಬಾತ್‌ರೂಂ ಇರುವ ಕಡೆ ಇರುವ ಮನೆಯಲ್ಲಿ ಯಾರೂ ವಾಸವಿಲ್ಲದಿರುವ ಕಾರಣ ಬಾಲಕಿ ಕೂಗು ಯಾರಿಗೂ ಕೇಳಿಸಲೇ ಇಲ್ಲ.

ಅತ್ತೂ ಅತ್ತೂ ಅಲ್ಲೇ ಮಲಗಿದ್ದಳು, ಪ್ರತಿ ದಿನವೂ ಒಂದೊಷ್ಟು ಹೊತ್ತು ಅಪ್ಪ, ಅಮ್ಮನನ್ನು ಕರೆದು ಸುಸ್ತಾಗಿ ಮಲಗುತ್ತಿದ್ದಳು. ಇನ್ನೊಂದೆಡೆ ಮಗಳು ಕಾಣುತ್ತಿಲ್ಲ ಎಂದು ಪೋಷಕರು ಇಡೀ ಊರು ತುಂಬೆಲ್ಲಾ ಹುಡುಕಾಡಿದ್ದಾರೆ. ಬಾಲಕಿ ಬಿದ್ದಿರುವ ಮನೆಯ ಮಾಲಿಕರು ಪ್ರವಾಸಕ್ಕೆ ತೆರಳಿದ್ದರು.ಬಾತ್‌ರೂಮ್ ಕೂಡ ಹೊರಗಡೆಯಿಂದ ಲಾಕ್ ಆಗಿತ್ತು. ಅವರು ಐದು ದಿನಗಳ ನಂತರ ಬಂದು ನೋಡಿದಾಗ ಆಶ್ಚರ್ಯ ಕಾದಿತ್ತು.
ಅದೃಷ್ಟವಶಾತ್ ಬಾಲಕಿ ನೀರು ಸೇವಿಸಿಯೇ ಜೀವ ಉಳಿಸಿಕೊಂಡಿದ್ದಾಳೆ. ಆದರೆ ತೂಕದಲ್ಲಿ ಸಾಕಷ್ಟು ಕಡಿಮೆಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications